Tiptur : ಮದುವೆಯಾದ ಎರಡು ತಿಂಗಳಲ್ಲೇ ಯುವಕನ ಕೊಲೆ..!

ಆತ ತಾನಾಯ್ತು ತನ್ನ ಪಾಡು ಆಯ್ತು ಅಂತಾ ಇದ್ದ. ಗುಜರಿ ವ್ಯಾಪಾರ ಮಾಡಿಕೊಂಡು ಬರುವ ಸಂಪಾದನೆಯಲ್ಲಿ ಜೀವನ ಮಾಡ್ತಾ ಇದ್ದ. ಇತ್ತ ಕೇವಲ ಎರಡು ತಿಂಗಳ ಹಿಂದೆಯಷ್ಟೇ ಮದುವೆ ಆಗಿ, ಹೊಸ ಜೀವನಕ್ಕೆ ಕಾಲಿಟ್ಟಿದ್ದ. ಆದರೆ ತೋಟದ ಮನೆಯಲ್ಲಿ ಗುಜರಿ ವ್ಯಾಪಾರಿಯ ಕೊಲೆ ನಡೆದಿದ್ದು, ಗ್ರಾಮಸ್ಥರು ಬೆಚ್ಚಿಬಿದ್ದಿರೋ ಘಟನೆ Tiptur ತಾಲೂಕಿನ ಕಸಬಾ ಹೋಬಳಿಯ ಜೈಪುರ ರಸ್ತೆಯ ಚಿಕ್ಕಕೊಟ್ಟಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. ಕೊಲೆಯಾಗಿರುವ ವ್ಯಕ್ತಿಯನ್ನು ತಿಪಟೂರು ನಗರದ ಆರ್ಸಿಸಿ ಟ್ಯಾಂಕ್ ರಸ್ತೆಯ ನಿವಾಸಿ ಮನ್ಸೂರ್ ಎಂದು ಹೇಳಲಾಗುತ್ತಿದೆ.
ನಗರ ಪೊಲೀಸ್ ಠಾಣೆಗೆ ದೂರು
ಇನ್ನು ಮಾರ್ಚ್ 4ರಂದು ಗುಜರಿ ವ್ಯಾಪಾರದ ಕೆಲಸಕ್ಕಾಗಿ ಹಳ್ಳಿಗೆ ತೆರಳಿದ್ದ ಮನ್ಸೂರ್ ಮಧ್ಯಾಹ್ನವಾದ್ರೂ ಮನೆಗೆ ಬಾರದ ಹಿನ್ನಲೆ, ಪತ್ನಿ ಹಾಗೂ ತಾಯಿ ಆತನ ಮೊಬೈಲ್ಗೆ ಅನೇಕ ಬಾರಿ ಪೋನ್ ಮಾಡಿದ್ದಾರೆ. ಆದರೆ ಎಷ್ಟೇ ಪೋನ್ ಮಾಡಿದ್ರೂ, ಪೋನ್ ಸ್ವೀಕರಿಸದ ಕಾರಣ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
READ THIS : Gadag| ಮರಕ್ಕೆ ಟಾಟಾ ಏಸ್ ಡಿಕ್ಕಿ – ಇಬ್ಬರು ಸ್ಥಳದಲ್ಲೇ ಸಾವು..!!

ಅಡಿಕೆ ತೋಟವೊಂದರಲ್ಲಿ ಶವ ಪತ್ತೆ
ಇನ್ನು ಪ್ರಕರಣದ ದಾಖಲಿಸಿಕೊಂಡ ಪೊಲೀಸರು ತನಿಖೆ ಆರಂಭಿಸಿದ್ದು, ತನಿಖೆ ವೇಳೆ ಚಿಕ್ಕಕೊಟ್ಟಗಿಹಳ್ಳಿ ಬಳಿ ರಸ್ತೆ ಸಮೀಪ ಮನ್ಸೂರ್ ಅವರ ಆಟೋ ರಿಕ್ಷಾ ಪತ್ತೆಯಾಗಿದ್ದು, ಆಟೋ ನಿಂತಿದ್ದ ಸ್ಥಳದಿಂದ ಸ್ವಲ್ಪ ದೂರದ ಅಡಿಕೆ ತೋಟವೊಂದರಲ್ಲಿ ಅವರ ಶವ ಪತ್ತೆಯಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ತಿಪಟೂರು ಸಾರ್ವಜನಿಕ ಆಸ್ಪತ್ರೆಗೆ ಸಾಗಿಸಲಾಗಿದೆ.
ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ
ಮೃತ ಮನ್ಸೂರ್ ಕೇವಲ ಎರಡು ತಿಂಗಳ ಹಿಂದಷ್ಟೇ ವಿವಾಹವಾಗಿದ್ದು. ಹತ್ಯೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಸದ್ಯ ಈ ಸಂಬಂಧ ತಿಪಟೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

MUAT WATCH : ಮನೆ ಕಾಂಪೌಂಡ್ ಒಳಗೆ ನುಗ್ಗಿದ ಲಾರಿ ಸ್ವಲ್ಪದರಲ್ಲೇ ತಪ್ಪಿದ ಭಾರೀ ಅನಾಹುತ




