ತಿಪಟೂರಿನ SVP Vidyanidhi V Techno ಕಾಲೇಜಿನ ವಿದ್ಯಾರ್ಥಿಗಳು PUC Result 2026 ನಲ್ಲಿ ರಾಜ್ಯ ಮಟ್ಟದ ರ್ಯಾಂಕ್ ಗಳಿಸಿ ಅದ್ಭುತ ಸಾಧನೆ ಮಾಡಿದ್ದಾರೆ…

Tiptur ನಗರದ SVP Vidyanidhi V Techno ಕಾಲೇಜಿನ ವಿದ್ಯಾರ್ಥಿಗಳು ಈ ಬಾರಿಯ PUC Result 2026 ನಲ್ಲಿ ಅದ್ಭುತ ಸಾಧನೆ ಮಾಡಿ ರಾಜ್ಯದ ಗಮನ ಸೆಳೆದಿದ್ದಾರೆ. ಕಾಲೇಜಿನ ಸುಮಾರು ನಾಲ್ವರು ವಿದ್ಯಾರ್ಥಿಗಳು ಉನ್ನತ ಅಂಕಗಳನ್ನು ಗಳಿಸಿ ರಾಜ್ಯ ಮಟ್ಟದಲ್ಲಿ ರ್ಯಾಂಕ್ ಪಡೆದು ಟಾಪರ್ಸ್ ಆಗಿ ಹೊರಹೊಮ್ಮಿದ್ದಾರೆ.
ಈ ಸಾಧನೆಗೆ ಪೋಷಕರು, ಶಿಕ್ಷಕರು ಹಾಗೂ ಕಾಲೇಜು ಆಡಳಿತ ಮಂಡಳಿ ಹರ್ಷ ವ್ಯಕ್ತಪಡಿಸಿದ್ದು, ವಿದ್ಯಾರ್ಥಿಗಳ ಪರಿಶ್ರಮಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
MUST READ : PUC ಫಲಿತಾಂಶದಲ್ಲಿ ವಿಜಯ ಪತಾಕೆ ಹಾರಿಸಿದ ವಿಜಯ ಪಿಯು ಕಾಲೇಜು

ವಾಣಿಜ್ಯ ಮತ್ತು ವಿಜ್ಞಾನ ವಿಭಾಗದಲ್ಲಿ ಮಿಂಚಿದ ವಿದ್ಯಾರ್ಥಿಗಳು
ಈ ಬಾರಿ ಪಿಯುಸಿ ಫಲಿತಾಂಶದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.

ವಾಣಿಜ್ಯ ವಿಭಾಗ (Commerce):
- ಶ್ರೀ ರಕ್ಷಾ – 593 ಅಂಕ (ರಾಜ್ಯಕ್ಕೆ 7ನೇ ರ್ಯಾಂಕ್)
- ತೇಜಾ ಶ್ರೀ – 587 ಅಂಕ (ರಾಜ್ಯಕ್ಕೆ 13ನೇ ರ್ಯಾಂಕ್)

ವಿಜ್ಞಾನ ವಿಭಾಗ (Science):
- ಗುರುಪ್ರಿಯ – 589 ಅಂಕ (ರಾಜ್ಯಕ್ಕೆ 11ನೇ ರ್ಯಾಂಕ್)
- ರಚಿತಾ – 587 ಅಂಕ (ರಾಜ್ಯಕ್ಕೆ 13ನೇ ರ್ಯಾಂಕ್)
- ಸನ್ವಿ ಎಂಡಿ ಪಾಲ್ – 582 ಅಂಕ (ಟಾಪರ್ಸ್ ಪಟ್ಟಿಯಲ್ಲಿ ಸ್ಥಾನ)
ಈ ಸಾಧನೆಯ ಮೂಲಕ ಕಾಲೇಜಿನ ಹೆಸರು ರಾಜ್ಯ ಮಟ್ಟದಲ್ಲಿ ಮತ್ತಷ್ಟು ಪ್ರಸಿದ್ಧಿಯಾಗಿದೆ.

ವಿದ್ಯಾರ್ಥಿಗಳ ಪರಿಶ್ರಮ ಮತ್ತು ಶಿಕ್ಷಕರ ಮಾರ್ಗದರ್ಶನ
ವಿದ್ಯಾರ್ಥಿಗಳ ಕಠಿಣ ಪರಿಶ್ರಮ, ಉಪನ್ಯಾಸಕರ ಸಮರ್ಪಿತ ಮಾರ್ಗದರ್ಶನ ಹಾಗೂ ಪೋಷಕರ ನಿರಂತರ ಸಹಕಾರವೇ ಈ ಯಶಸ್ಸಿಗೆ ಪ್ರಮುಖ ಕಾರಣವಾಗಿದೆ.
ಈ ಫಲಿತಾಂಶದಿಂದ ವಿದ್ಯಾರ್ಥಿಗಳು, ಪೋಷಕರು ಮತ್ತು ಶಿಕ್ಷಕರಲ್ಲಿ ಸಂತಸದ ವಾತಾವರಣ ನಿರ್ಮಾಣವಾಗಿದೆ.

ರಾಜ್ಯದ ಗಮನ ಸೆಳೆದ ತಿಪಟೂರು ಕಾಲೇಜು
ಕೆವಲ ಟಾಪರ್ಸ್ ಮಾತ್ರವಲ್ಲದೆ, ಕಾಲೇಜಿನ ಬಹುತೇಕ ಎಲ್ಲಾ ವಿದ್ಯಾರ್ಥಿಗಳು ಉತ್ತಮ ಅಂಕಗಳನ್ನು ಗಳಿಸಿ ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಈ ಸಾಧನೆಯ ಮೂಲಕ ತಿಪಟೂರಿನ ಎಸ್ವಿಪಿ ವಿದ್ಯಾನಿಧಿ ವಿ ಟೆಕ್ನೋ ಕಾಲೇಜು ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ.
MUST WATCH :TOPPERS ಆದ ತಿಪಟೂರಿನ SVP Vidhyanidhi V-Techno College ಸ್ಟೂಡೆಂಟ್ಸ್ | TIPTUR BEST PU COLLEGE |




