ಲೋಕಾಯುಕ್ತ ಅಧಿಕಾರಿಗಳನ್ನೇ 4 ಗಂಟೆ ಕಾಯಿಸಿ ಮನೆ ಬಾಗಿಲು ತೆರೆದ Hassan ಮಹಾನಗರಪಾಲಿಕೆ ಇಂಜಿನಿಯರ್!

ಇತ್ತೀಚೆಗೆ ಕರ್ನಾಟಕದಾದ್ಯಂತ ಭ್ರಷ್ಟಾಚಾರದ ಆರೋಪ ಹೊತ್ತಿರುವ ಸರ್ಕಾರಿ ಅಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ನಿರಂತರ ದಾಳಿ ನಡೆಸುತ್ತಿದ್ದಾರೆ. ಇದೀಗ ಆದಾಯಕ್ಕಿಂತ ಅಧಿಕ ಆಸ್ತಿಗಳಿಕೆ ಆರೋಪದಡಿ Hassan ಮಹಾನಗರಪಾಲಿಕೆ ಎಇಇ ಅವರ ಮನೆ ಮೇಲೆ ದಾಳಿ ನಡೆಸಿದ್ದು, ಈ ವೇಳೆ ಮನೆ ಬಾಗಿಲು ತೆರೆಯದೇ ಲೋಕಾಯುಕ್ತ ಸಿಬ್ಬಂದಿಯನ್ನೇ ಕಾಯಿಸಿರುವ ಘಟನೆ ನಡೆದಿದೆ.
ಮನೆ ಬಾಗಿಲು ತೆರೆಯದೆ ಹೈಡ್ರಾಮ
ಕರ್ನಾಟಕದಲ್ಲಿ ಭ್ರಷ್ಟಾಚಾರ ಆರೋಪದಡಿ ಲೋಕಾಯುಕ್ತ ಅಧಿಕಾರಿಗಳು ಹಲವು ಜಿಲ್ಲೆಗಳಲ್ಲಿ ಏಕಕಾಲಕ್ಕೆ ದಾಳಿ ನಡೆಸಿದ್ದು, ಅಧಿಕಾರಿಗಳು ಶಾಕ್ ಆಗಿದ್ದಾರೆ. ಇತ್ತ ಹಾಸನ ಮಹಾನಗರ ಪಾಲಿಕೆಯ ಎಇಇ ಎಂ.ಸಿ ಸತ್ಯನಾರಾಯಣ ಅವರ ರಕ್ಷಣಾಪುರಂನಲ್ಲಿರುವ ಮನೆ ಮೇಲೆ ಲೋಕಾ ದಾಳಿ ನಡೆಸಿದರು. ಅಕ್ರಮ ಆಸ್ತಿಗಳಿಕೆ ಆರೋಪಕ್ಕೆ ಸಂಬಂಧಿಸಿದಂತೆ ದೂರು ದಾಖಲಿಸಿಕೊಂಡು, ಸರ್ಚ್ ವಾರಂಟ್ ಪಡೆದು ಬೆಳಗ್ಗೆ 5.30ಕ್ಕೆ ಲೋಕಾ ತಂಡ ಆಗಮಿಸಿದ್ರು. ಆದ್ರೆ ಸತ್ಯನಾರಾಯಣ ಅವರು ಅಧಿಕಾರಿಗಳು ಬಂದಾಗ ಮನೆ ಬಾಗಿಲು ತೆರೆಯದೆ ಹೈಡ್ರಾಮ ಸೃಷ್ಟಿಸಿದ್ದಾರೆ.
READ THIS : ಸಿನಿಮಾಗಳಿಗೆ ದೇವತೆಗಳ ಹೆಸರಿಡುವಂತಿಲ್ಲ? ಸೆನ್ಸಾರ್ ಅಘೋಷಿತ ನಿಯಮ?

ಅಧಿಕಾರಿಗಳನ್ನೇ 4 ಗಂಟೆ ಕಾಯಿಸಿದ AEE – Hassan
ಲೋಕಾಯುಕ್ತ ಡಿವೈಎಸ್ಪಿ ಸುರೇಶ್ ಕುಮಾರ್ ಇನ್ಸ್ಪೆಕ್ಟರ್ ಶಿಲ್ಪಾ ನೇತೃತ್ವದಲ್ಲಿ ಅಧಿಕಾರಿಗಳ ತಂಡ ದಾಳಿ ನಡೆಸಿತ್ತು, ಆದ್ರೆ ಅಧಿಕಾರಿಗಳು ಬಿಲ್ಡಿಂಗ್ ಹತ್ತಿ ಕಿಟಕಿ ಬಡಿದು, ಕೂಗಿದರು ಕೂಡ ಸತ್ಯನಾರಾಯಣ ಮನೆ ಬಾಗಿಲು ತೆರೆದಿಲ್ಲ.
ಬಳಿಕ ಸುಮಾರು ನಾಲ್ಕು ಗಂಟೆ ಬಳಿಕ ಮನೆಯ ಡೋರ್ ಓಪನ್ ಮಾಡಿದ್ದು, ಮನೆಯೊಳಗೆ ಎಂಟ್ರಿ ಕೊಟ್ಟಿರುವ ಲೋಕಾಯುಕ್ತ ಟೀಂ ಆಸ್ತಿ ದಾಖಲೆಗಳು, ಆದಾಯ ಮತ್ತು ಸಂಪಾದಿಸಿದ ಆಸ್ತಿಗಳ ಪರಿಶೀಲನೆ ನಡೆಸುತ್ತಿದೆ.

MUST WATCH : INTERCAST MARRIAGEಗೆ ಪೋಷಕರ ವಿರೋಧ – ಸಿನಿಮಾ ಸ್ಟೈಲ್ನಲ್ಲೇ ಮಗಳನ್ನು ಎತ್ತಾಕಿಕೊಂಡು ಹೋದ್ರು..!




