Weather Report : ರಾಜ್ಯದಲ್ಲಿ ಇಂದು ಮತ್ತೆ ಮಳೆ ಸಾಧ್ಯತೆ – ಹಲವೆಡೆ ಮೋಡ ಕವಿದ ವಾತಾವರಣ. ಕೆಲವೆಡೆ ತುಂತುರು ಮಳೆ .

Weather Report : ರಾಜ್ಯದಲ್ಲಿ ಬೇಸಿಗೆ ಆರಂಭವಾಗ್ತಿದ್ದು, ದಿನೇ ದಿನೇ ತಾಪಾಮಾನ ಹೆಚ್ಚಾಗ್ತಾ ಇದೆ. ಉಷ್ಣಾಂಶ ಹೆಚ್ಚಳದಿಂದಾಗಿ ಜನರು ಈಗಾಗಲೇ ಕಂಗೆಟ್ಟಿದ್ದು, ತಂಪು ಪಾನೀಯ, ಎಳನೀರಿನ ಮೊರೆ ಹೋಗ್ತಿದ್ದಾರೆ.
ಈ ಮಧ್ಯೆ ರಾಜ್ಯದಲ್ಲಿ ಕಳೆದ ಮೂರು ದಿನಗಳಿಂದ ಅಲ್ಲಲ್ಲಿ ಮಳೆ ಆಗ್ತಾ ಇದ್ರೆ, ಇನ್ನು ಕೆಲವೆಡೆ ಮೋಡ ಕವಿದ ವಾತಾವರಣ ಹಾಗೂ ಒಣ ಹವೆ ಹೆಚ್ಚಾಗಿದೆ.
ಇಂದು ಮತ್ತೆ ರಾಜ್ಯದ ಹಲವೆಡೆ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ.
ಭಾರೀ ಮಳೆಯಾಗುವ ಜಿಲ್ಲೆಗಳು
ಹಾಸನ, ಮೈಸೂರು, ಕೊಡಗು ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರೀ ಮಳೆ ಆಗುವ ಮುನ್ಸೂಚನೆ ಇದ್ದು, ಈ ಮೂರು ಜಿಲ್ಲೆಗಳಿಗೆ ಹವಾಮಾನ ಇಲಾಖೆ ಯೆಲ್ಲೋ ಅಲರ್ಟ್ ಘೋಷಣೆ ಮಾಡಿದೆ. ರಾಜ್ಯದಲ್ಲಿ ಸುಮಾರು 39 ಡಿಗ್ರಿಯಷ್ಟು ತಾಪಾಮಾನ ಹೆಚ್ಚಾಗಿದ್ದು, ಜನರು ಕಂಗೆಟ್ಟಿದ್ದಾರೆ.
ಇದನ್ನು ಓದಿ : ಭೀಮಾ ನದಿಯಲ್ಲಿ ಮುಳುಗಿ 7 ವರ್ಷದ ಬಾಲಕಿ ಸಾವು

ಮೋಡ ಕವಿದ ವಾತಾವರಣದ ಜೊತೆ ತುಂತುರು ಮಳೆ
ಇತ್ತ ತುಮಕೂರಿನಲ್ಲಿ ಕಳೆದ ಎರಡು ದಿನಗಳಿಂದ ಮೋಡ ಕವಿದ ವಾತಾವರಣದ ಜೊತೆ ತುಂತುರು ಮಳೆ ಆಗ್ತಾ ಇದೆ. ನಿನ್ನೆ ಸಂಜೆ ವೇಳೆಗೆ ತುಮಕೂರು ನಗರದ ಅಲ್ಲಲ್ಲಿ ತುಂತುರು ಮಳೆ ಆಗಿದ್ರೆ, ಇಂದು ಬೆಳ್ಳಗ್ಗೆ ಕೂಡ ಮೋಡ ಕವಿದ ವಾತಾವರಣ ಮುಂದುವರೆದಿತ್ತು.
ಆಗಾಗ ಸುಡು ಬಿಸಿಲು ಇದ್ರೆ, ಮತ್ತೆ ಕೆಲವೊಂದು ಮೋಡಕವಿದ ವಾತಾವರಣ ಸೃಷ್ಟಿಯಾಗ್ತಿದೆ. ಅಲ್ದೇ ಒಣ ಹವೆ ಹೆಚ್ಚಾಗಿದ್ದು, ಉಷ್ಣಾಂಶ ಮಾತ್ರ ಕಡಿಮೆ ಆಗ್ತಾ ಇಲ್ಲ. ಇದ್ರಿಂದ ಜನರು ಬಸವಳಿದು ಹೋಗಿದ್ದಾರೆ.
ನೀರು ಹೆಚ್ಚಾಗಿ ಸೇವನೆ ಮಾಡಿ
ಇನ್ನು ತಾಪಮಾನ ಹೆಚ್ಚಳದಿಂದಾಗಿ ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಭೀತಿ ಸೃಷ್ಟಿಯಾಗಿದೆ.
ಹೀಗಾಗಿ ಜನರು ಆದಷ್ಟು ತಂಪು ಪಾನೀಯ, ಎಳನೀರು, ಹಣ್ಣುಗಳು ಹಾಗೂ ನೀರು ಹೆಚ್ಚಾಗಿ ಸೇವನೆ ಮಾಡಿ ಎಂದು ವೈದ್ಯರು ಸಲಹೆ ನೀಡ್ತಿದ್ದಾರೆ.
ಅಲ್ದೇ ಬೆಳಗ್ಗೆ 11 ಗಂಟೆಯಿಂದ 4 ಗಂಟೆವರೆಗೂ ಅನಾವಶ್ಯಕವಾಗಿ ಹೊರಹೋಗದಂತೆ ವೈದ್ಯರು ಸೂಚನೆ ನೀಡಿದ್ದಾರೆ.

ಇದನ್ನು ನೋಡಿ : GUBBI | ಗುಬ್ಬಿಯಪ್ಪನ ಅದ್ದೂರಿ ರಥೋತ್ಸವ- ಇಷ್ಟಾರ್ಥ ಸಿದ್ದಿಗೆ ಭಕ್ತರ ಪ್ರಾರ್ಥನೆ




