ಟಾಲಿವುಡ್ನ ಬಹುನಿರೀಕ್ಷಿತ ತಾರಾಜೋಡಿ Vijay Devarakonda ಹಾಗೂ Rashmika Mandanna ಇದೀಗ ಅಧಿಕೃತವಾಗಿ ಸತಿ-ಪತಿಯಾಗಿದ್ದಾರೆ.

ದಕ್ಷಿಣ ಭಾರತದ ಸ್ಟಾರ್ ಜೋಡಿ ರಶ್ಮಿಕಾ ಮಂದಣ್ಣ ಮತ್ತು ವಿಜಯ್ ದೇವರಕೊಂಡ ನಿನ್ನೆಯಷ್ಟೇ ರಾಜಸ್ಥಾನದ ಉದಯಪುರ್ನಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಯ ನಂತರ ಪೋಟೊಗಳನ್ನ ರಶ್ಮಿಕಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ನಿಜವಾದ ಪ್ರೀತಿ ಹೇಗಿರುತ್ತೇ ಅಂತ ನನಗೆ ಕಲಿಸಿದ ವ್ಯಕ್ತಿ ಇವರು
ಈ ಕ್ಯೂಟ್ ಜೋಡಿಗೆ ಅಭಿಮಾನಿಗಳು ಶುಭಹಾರೈಸಿದ್ದಾರೆ. ಮದುವೆ ಬಳಿಕ ರಶ್ಮಿಕಾ ಮಂದಣ್ಣ ನನ್ನ ಗಂಡ, ಮಿಸ್ಟರ್ ವಿಜಯ್ ದೇವರಕೊಂಡ ಅವರನ್ನು ನಿಮಗೆ ಪರಿಚಯಿಸುತ್ತಿದ್ದೇನೆ. ನಿಜವಾದ ಪ್ರೀತಿ ಹೇಗಿರುತ್ತೇ ಅಂತ ನನಗೆ ಕಲಿಸಿದ ವ್ಯಕ್ತಿ ಇವರು, ನೆಮ್ಮದಿಯಿಂದ ಇರುವುದು ಹೇಗಿರುತ್ತೇ ಎಂದು ತೋರಿಸಿಕೊಟ್ಟವರು.
ಇದನ್ನು ಓದಿ : ನಾಳೆಯಿಂದ ದ್ವಿತೀಯ PUC ಪರೀಕ್ಷೆ – ಅಕ್ರಮ ತಡೆಗೆ ಪರೀಕ್ಷಾ ಬೋರ್ಡ್ ಹದ್ದಿನ ಕಣ್ಣು

ನಾನಾಗಿಯೇ ಇರಲು ಅವಕಾಶ ಕೊಟ್ಟಿದ್ದೀರಿ – Rashmika Mandanna
ನಾನು ಕನಸು ಕಂಡ ಜೀವನ ಇದು. ನೀವು ನನ್ನನ್ನು ನಾನಾಗಿಯೇ ಇರಲು ಅವಕಾಶ ಕೊಟ್ಟಿದ್ದೀರಿ. ನಿಮ್ಮ ಹೆಂಡತಿ ಯಾಗಿರುವುದು ನನಗೆ ಆಶೀರ್ವಾದ ಎಂದು ಬರೆದುಕೊಂಡಿದ್ದಾರೆ. ಹಲವು ವರ್ಷಗಳಿಂದ ಕದ್ದು ಮುಚ್ಚಿ ಪ್ರೀತಿಸ್ತಾ ಇದ್ದ ಜೋಡಿ, ಇದೀಗ ಹೊಸ ಜೀವನಕ್ಕೆ ಕಾಲಿಟ್ಟಿದೆ.

ಇದನ್ನು ನೋಡಿ : KORATAGERE | ಜಿಲ್ಲಾ ರಾಗಿ ಖರೀದಿ ಕೇಂದ್ರಗಳಿಗೆ ಜಿಲ್ಲಾಧಿಕಾರಿ ವಿಸಿಟ್




