ರಾಜ್ಯದಲ್ಲಿ ನಾಳೆಯಿಂದ ದ್ವಿತೀಯ PUC ಪರೀಕ್ಷೆ ಆರಂಭವಾಗಲಿದೆ.

Bengaluru : ರಾಜ್ಯದಲ್ಲಿ ನಾಳೆಯಿಂದ ದ್ವಿತೀಯ PUC ಪರೀಕ್ಷೆ ಆರಂಭವಾಗಲಿದ್ದು, ಈ ವೇಳೆ ಯಾವುದೇ ರೀತಿಯ ಅಕ್ರಮ ನಡೆಯದಂತೆ ಪರೀಕ್ಷಾ ಬೋರ್ಡ್ ಹದ್ದಿನ ಕಣ್ಣಿಟ್ಟಿದೆ. ನಾಳೆಯಿಂದ ಮಾ.17ರವರೆಗೆ ಪರೀಕ್ಷೆ ನಡೆಯಲಿದ್ದು, 7,10,363 ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ. 1,217 ಪರೀಕ್ಷಾ ಕೇಂದ್ರಗಳಲ್ಲಿ ಬೆಳಗ್ಗೆ 10ರಿಂದ ಮಧ್ಯಾಹ್ನ 1ರವರೆಗೆ ಪರೀಕ್ಷೆಗಳು ನಡೆಯಲಿವೆ.
ಇನ್ನು ಪರೀಕ್ಷೆಯಲ್ಲಿ ಯಾವುದೇ ರೀತಿಯ ಅಕ್ರಮ ನಡೆಯದಂತೆ ಮಂಡಳಿ ಹದ್ದಿನ ಕಣ್ಣಿಟ್ಟಿದ್ದು, ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ಜಾರಿಗೆ ತಂದಿದೆ.
ಭದ್ರತಾ ಕ್ರಮಗಳವಿವರ
- ಪರೀಕ್ಷೆ ನಡೆಯುವ ದಿನಗಳಲ್ಲಿ ಪರೀಕ್ಷಾ ಕೇಂದ್ರಗಳ ಸುತ್ತ 200 ಮೀಟರ್ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ
- ಕೇಂದ್ರಗಳ ಸುತ್ತಮುತ್ತ ಇರುವ ಜೆರಾಕ್ಸ್ ಅಂಗಡಿ, ಸೈಬರ್ ಸೆಂಟರ್, ಕಂಪ್ಯೂಟರ್ ಅಂಗಡಿಗಳನ್ನು ಮುಚ್ಚುವ ಕ್ರಮ
- ಹಿಂದಿನ ಅಕ್ರಮಗಳಲ್ಲಿ ಭಾಗಿಯಾಗಿದ್ದವರ ಮೇಲೆ ಪೊಲೀಸ್ ಇಲಾಖೆಯಿಂದ ವಿಶೇಷ ನಿಗಾ
- ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ
- ಸುಳ್ಳು ಸುದ್ದಿ ತಡೆಯಲು ಪೊಲೀಸ್ ನೇತೃತ್ವದಲ್ಲಿ ವಿಶೇಷ ತಂಡ
- ಇಡೀ ಪರೀಕ್ಷಾ ವ್ಯವಸ್ಥೆಯ ಮೇಲ್ವಿಚಾರಣೆಗಾಗಿ ವೆಬ್ಕಾಸ್ಟಿಂಗ್ ವ್ಯವಸ್ಥೆ
- ಪ್ರತಿ ಜಿಲ್ಲೆಯಲ್ಲಿ ಡಿಸಿಗಳು ಹಾಗೂ ಎಸ್ಪಿಗಳಿಂದ ನೇರ ಮಾನಿಟರಿಂಗ್
- ಪ್ರಶ್ನೆಪತ್ರಿಕೆ ಖಜಾನೆಯಿಂದ ಕೇಂದ್ರಗಳಿಗೆ ಸಾಗಿಸುವ ವೇಳೆ ಬಿಗಿ ಪೊಲೀಸ್ ಭದ್ರತೆ ಹಾಗೂ ವಿಡಿಯೋ ಚಿತ್ರೀಕರಣ
- ನಿಗದಿತ ಸಮಯಕ್ಕಿಂತ ಮೊದಲು ಪ್ರಶ್ನೆಪತ್ರಿಕೆ ತೆರೆಯಲು ಸಂಪೂರ್ಣ ನಿಷೇಧ
- ಪ್ರಶ್ನೆಪತ್ರಿಕೆ ಜವಾಬ್ದಾರಿಗಳ ಮೇಲೆ ಕಾನೂನು ಕ್ರಮದ ಎಚ್ಚರಿಕೆ
- ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು, ಸಿಬ್ಬಂದಿ, ಅಧಿಕಾರಿಗಳಿಗೆ ಮೊಬೈಲ್ ಫೋನ್ ನಿಷೇಧ
- ವಾಚ್ ಸೇರಿದಂತೆ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳ ನಿಷೇಧ
- ಪ್ರತಿ ಕೇಂದ್ರಕ್ಕೆ ಪೊಲೀಸ್ ಭದ್ರತೆ, ಸಿಟ್ಟಿಂಗ್ ಸ್ಕ್ವಾಡ್ ಮತ್ತು ಫ್ಲೈಯಿಂಗ್ ಸ್ಕ್ವಾಡ್ ನಿಯೋಜನೆ
ಮಂಡಳಿಯು ಪ್ರಶ್ನೆಪತ್ರಿಕೆ ಸೋರಿಕೆ ಸೇರಿದಂತೆ ಯಾವುದೇ ಅಕ್ರಮ ಕಂಡುಬಂದಲ್ಲಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಎಚ್ಚರಿಕೆ ನೀಡಿದೆ.

ಇದನ್ನು ಓದಿ : ಅಮುಕು ಡುಮುಕು ನಿಜಕ್ಕೂ ಪೆಟ್ರೋಲ್ ಕುಡಿದರಾ? ಸಿನಿಮಾ ಪ್ರಚಾರಕ್ಕೆ ಚೀಪ್ ಗಿಮಿಕ್
ದ್ವಿತೀಯ PUC ಪರೀಕ್ಷಾ ವೇಳಾಪಟ್ಟಿ
- ಫೆಬ್ರವರಿ 28 – ಕನ್ನಡ, ಅರೇಬಿಕ್
- ಮಾರ್ಚ್ 2 – ಭೂಗೋಳಶಾಸ್ತ್ರ, ಸಂಖ್ಯಾಶಾಸ್ತ್ರ, ಮನಃಶಾಸ್ತ್ರ
- ಮಾರ್ಚ್ 3 – ಇಂಗ್ಲೀಷ್
- ಮಾರ್ಚ್ 4 – ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
- ಮಾರ್ಚ್ 5 – ಇತಿಹಾಸ
- ಮಾರ್ಚ್ 6 – ಭೌತಶಾಸ್ತ್ರ
- ಮಾರ್ಚ್ 7 – ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
- ಮಾರ್ಚ್ 9 – ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲ ಗಣಿತ
- ಮಾರ್ಚ್ 10 – ಅರ್ಥಶಾಸ್ತ್ರ
- ಮಾರ್ಚ್ 11 – ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹ ವಿಜ್ಞಾನ
- ಮಾರ್ಚ್ 12 – ಹಿಂದಿ
- ಮಾರ್ಚ್ 13 – ರಾಜ್ಯಶಾಸ್ತ್ರ
- ಮಾರ್ಚ್ 14 – ಲೆಕ್ಕಶಾಸ್ತ್ರ, ಗಣಿತ
- ಮಾರ್ಚ್ 16 – ಸಮಾಜಶಾಸ್ತ್ರ, ಜೀವಶಾಸ್ತ್ರ, ಗಣಕ ವಿಜ್ಞಾನ
- ಮಾರ್ಚ್ 17 – ಹಿಂದುಸ್ತಾನಿ, ಸಂಗೀತ, ರೀಟೇಲ್ ಆಟೋಮೊಬೈಲ್, ಆರೋಗ್ಯ ರಕ್ಷಣೆ
ವಿದ್ಯಾರ್ಥಿಗಳು ಸಮಯಕ್ಕೆ ಸರಿಯಾಗಿ ಪರೀಕ್ಷಾ ಕೇಂದ್ರಗಳಿಗೆ ಆಗಮಿಸುವಂತೆ ಹಾಗೂ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಮಂಡಳಿ ತಿಳಿಸಿದೆ.

ಇದನ್ನು ನೋಡಿ : ನಾಳೆಯಿಂದ ಪಿಯು ಪರೀಕ್ಷೆ ಶುರು ಪರೀಕ್ಷಾ ವಿದ್ಯಾರ್ಥಿಗಳಿಗೆ GOOD NEWS




