Bengaluru : ಸಿನಿಮಾ ಪ್ರಚಾರಕ್ಕಾಗಿ ಹೈ ಡ್ರಾಮ ಸೃಷ್ಟಿಸಿದ ʼಅಮುಕು ಡುಮುಕುʼ ಮಂಜು FIR ಬೆನ್ನಲೆ ಯೂಟರ್ನ್!

Bengaluru : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುವ ಸಲುವಾಗಿ, ಇತ್ತೀಚೆಗೆ ಕೆಲ ಅ ಭಿಮಾನಿಗಳು ತಮ್ಮ ನೆಚ್ಚಿನ ನಟರ ಸಿನಿಮಾ ಪ್ರಚಾರಕ್ಕಾಗಿ ಎಷ್ಟು ಕೀಳು ಮಟ್ಟಕ್ಕಿಳಿಯುತ್ತಾರೆ ಎಂಬುದು ಅಮುಕು ಡುಮುಕು ಮಂಜು ಮಾಡಿರುವ ಘಟನೆ ತಾಜ ಊದಹರಣೆಯಾಗಿದೆ.

ಅಂದಾಭಿಮಾನ ಮೆರೆದ ಅಮುಕು ಡುಮುಕು!
ಸೂರಿ ಅಣ್ಣ ಸಿನಿಮಗಾಗಿ ಅಮುಕು ಡುಮುಕು ಮಂಜ ಪೆಟ್ರೋಲ್ ಕುಡಿದಂತೆ ಡ್ರಾಮಾ ಮಾಡಿ ಅಂದಾಭಿಮಾನ ಮೆರೆದಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಮೆಜೆಸ್ಟಿಕ್ ಥಿಯೇಟರ್ ಒಂದರಲ್ಲಿ ಸೂರಿ ಅಣ್ಣ ಫಿಲ್ಮ್ ಹೀರೋ ಮುಂದೆ ನಕಲಿ ಪೆಟ್ರೋಲ್ ಕುಡಿದು ಮಂಜು ಆತ್ಮಹತ್ಯೆಗೆ ಯತ್ನಿಸಿದಂತೆ ನಾಟಕವಾಡಿದ್ದಾನೆ. ಈ ವೀಡಿಯೊ ವೈರಲ್ ಆದ ಬೆನ್ನಲೇ ಉಪ್ಪಾರಪೇಟೆ ಪೊಲೀಸ್ ಠಾಣೆಯಲ್ಲಿ ಮಂಜು ವಿರುದ್ದ ಕೇಸ್ ದಾಖಲಗಿದೆ. ಆತ್ಮಹತ್ಯೆಗೆ ಯತ್ನಿಸಿರುವ ಆರೋಪದ ಅಡಿಯಲ್ಲಿ FIR ದಾಖಲಾಗಿದೆ.
ಇದನ್ನು ಓದಿ : ಗಂಡ ಸತ್ತ 16 ದಿನಕ್ಕೆ ಹೆಂಡ್ತಿ ಮದುವೆ – 23 ದಿನಗಳ ಬಳಿಕ ಶವ ಹೊರತೆಗೆದು ಮರಣೋತ್ತರ ಪರೀಕ್ಷೆ!

ಕೀಳುಮಟ್ಟದ ಪ್ರಚಾರ – Bengaluru
ಇನ್ನೂ ಮಂಜು ವಿರುದ್ಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ತಾನು ಮಾಡಿದ್ದೆಲ್ಲವೂ ಡ್ರಾಮಾ ಎನ್ನುವ ಮತ್ತೊಂದು ವಿಡಿಯೋ ರಿಲೀಸ್ ಮಾಡಿದ್ದಾನೆ. ನಾನು ಪ್ರಾಂಕ್ ಮಾಡ್ತಿರೋದಾಗಿ ಮೊದಲೇ ಮಾಡಿದ್ದ ವಿಡಿಯೋ ಬಿಡುಗಡೆ ಮಾಡಿದ್ದಾನೆ. ಜೇನು ತುಪ್ಪ, ಜೀರಾ ಪಾನಿಯಾ ಮಿಕ್ಸ್ ಮಾಡಿ, ಪೆಟ್ರೋಲ್ ರೀತಿಯಲ್ಲಿ ಕಾಣುವಂತೆ ಪಾನೀಯ ತಯಾರಿಸಿದ್ದ ಅಮುಕು ಡುಮುಕು, ಕೇಸ್ ದಾಖಲಾಗ್ತಿದ್ದಂತೆ ವಿಡಿಯೋ ಹಂಚಿಕೊಂಡಿದ್ದಾನೆ.

ಇದನ್ನು ನೋಡಿ : HAVERI | ಸ್ಮಶಾನ ಜಾಗ ಒತ್ತುವರಿ ಆರೋಪ ಶವವಿಟ್ಟು ಪ್ರತಿಭಟಿಸಿ ಗ್ರಾಮಸ್ಥರ ಆಕ್ರೋಶ




