Tumakuru : ಗಂಡ ಸತ್ತು ಕೇವಲ 16 ದಿನಕ್ಕೆ ಮತ್ತೊಂದು ಮದುವೆ ಆದ ಹೆಂಡತಿ..! – ಸಾವಿನ ಬಗ್ಗೆ ಅನುಮಾನ.

ಕಳೆದ ತಿಂಗಳು ಅಂದ್ರೆ ಜನವರಿ 30 ರಂದು Tumakuru ಜಿಲ್ಲೆ ಹೆಬ್ಬೂರು ಹೋಬಳಿಯ ದಾಸರಹಳ್ಳಿಯ ತೋಟದ ಮನೆಯಲ್ಲಿ ಹೆಂಡ್ತಿ- ಮಕ್ಕಳೊಂದಿಗೆ ಇದ್ದ ವ್ಯಕ್ತಿಯೋರ್ವ ಅನುಮಾನ್ಪದವಾಗಿ ಸಾವನ್ನಪ್ಪಿದ್ದು, ಅಂತ್ಯಸಂಸ್ಕಾರವೂ ಕೂಡ ನೆರವೇರಿತ್ತು.
ಆದರೆ ವ್ಯಕ್ತಿಯ ಸಾವಿನ ಬಗ್ಗೆ ಅನುಮಾನಗೊಂಡ ಸಹೋದರಿಯರು ದೂರು ನೀಡಿದ್ದು, ದೂರಿನ ಆಧಾರದ ಮೇಲೆ ಇಂದು ತಹಶೀಲ್ದಾರ್, ಪೊಲೀಸರ ಸಮ್ಮುಖದಲ್ಲಿ ಸಮಾಧಿಯಲ್ಲಿದ್ದ ಮೃತದೇಹವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹಾಗಾದ್ರೆ ಸಾವಿನ ಬಗ್ಗೆ ಅನುಮಾನಗೊಳ್ಳಲು ಕಾರಣವಾಗಿರುವ ವಿಚಾರ ಮಾತ್ರ ಭಯಾನಕವಾಗಿದೆ.
ಸಹೋದರಿಯರಿಗೆ ಅನುಮಾನ
ಹೌದು ಹೆಬ್ಬೂರು ಹೋಬಳಿಯ ದಾಸರಹಳ್ಳಿ ಗ್ರಾಮದ ನಿವಾಸಿಯಾಗಿರೋಪರಮೇಶ್ವರ್ ಅವರು ಕಳೆದ ಜನವರಿ 30ರಂದು ಸಾವನ್ನಪ್ಪಿದ್ದು, ಹೃದಯಾಘಾತವಾಗಿದೆ ಎಂದು ಹೇಳಲಾಗಿತ್ತು. ಅಲ್ದೇ ಸಾರ್ವಜನಿಕರು ಹಾಗೂ ಸಂಬಂಧಿಕರ ಸಮುಖದಲ್ಲಿ ಅಂತ್ಯಸಂಸ್ಕಾರ ನೆರವೇರಿಸಲಾಗಿತ್ತು. ಆದರೆ ಗಂಡ ಸತ್ತು ಕೇವಲ 16 ದಿನಕ್ಕೆ ಪರಮೇಶ್ ಹೆಂಡತಿ ಆಶಾ ಮತ್ತೊಂದು ಮದುವೆ ಆಗಿದ್ದು, ಸಾವಿನ ಬಗ್ಗೆ ಸಹೋದರಿಯರಿಗೆ ಅನುಮಾನ ಬಂದಿದ್ದು, ಈ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನೋವಿನಲ್ಲೇ ಅಂತ್ಯಸಂಸ್ಕಾರ
ಇನ್ನು ಮೃತ ಪರಮೇಶ್ವರ್ಗೆ 50 ವರ್ಷ ವಯಸ್ಸಾಗಿದ್ದು, ಹೆಬ್ಬೂರಿನ ವೆಲ್ಡಿಂಗ್ ಶಾಪ್ನಲ್ಲಿ ಕೆಲಸ ಮಾಡ್ತಾ ಇದ್ದು, ದಾಸರಹಳ್ಳಿಯ ತೋಟದಲ್ಲಿ ಮನೆ ಕಟ್ಟಿಸಿಕೊಂಡಿದ್ರು. ತೋಟದ ಮನೆಯಲ್ಲಿ ಹೆಂಡ್ತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಸಂಸಾರ ಮಾಡ್ತಾ ಇದ್ದ ಪರಮೇಶ್ ಇದ್ದಕ್ಕಿದ್ದ ಹಾಗೆ ಸಾವನ್ನಪ್ಪಿದ್ರು. ಪರಮೇಶ್ ಸಾವನ್ನಪ್ಪಿರುವ ಬಗ್ಗೆ ತಮ್ಮನಾದ ಜಗದೀಶ್, ಅವರ ಸಹೋದರಿಯರಾದ ನಾಗಮ್ಮ, ಜಯಮ್ಮಗೆ ಮಾಹಿತಿ ನೀಡಿದ್ರು. ಸಹೋದರ ಸಾವಿನ್ನಪ್ಪಿರೋ ವಿಷಯ ಕೇಳಿ ದುಃಖಿತರಾದ ಸಹೋದರಿಯರು, ನೋವಿನಲ್ಲೇ ಅಂತ್ಯಸಂಸ್ಕಾರ ನೆರವೇರಿಸಿದ್ರು.

ಇದನ್ನು ಓದಿ : ನಿರ್ದೇಶಕ ಅನೀಶ್ ಕಿಡ್ನಾಪ್ ಕೇಸ್ – ನಟಿ Aishwarya ಸೇರಿ 11 ಆರೋಪಿಗಳು ಅರೆಸ್ಟ್!
ಹೆಂಡ್ತಿ ಮೇಲೆ ಅನುಮಾನ
ಇನ್ನು ಪರಮೇಶ್ ಮೃತಪಟ್ಟು ಕೇವಲ 16 ದಿನ ಮಾತ್ರ ಆಗಿತ್ತು, ಪರಮೇಶ್ ಹೆಂಡ್ತಿ ಆಶಾ ಸದ್ದಿಲ್ಲದೇ ಕುಣಿಗಲ್ ತಾಲೂಕಿನ ಯಡಿಯೂರು ದೇವಸ್ಥಾನದಲ್ಲಿ ಮತ್ತೊಂದು ಮದುವೆ ಆಗಿದ್ದು, ಗಂಡನ ಮನೆಗೆ ತನ್ನ ಮಕ್ಕಳೊಂದಿಗೆ ವಾಸವಾಗಿದ್ಳು. ಇನ್ನು ಅದ್ಯಾವಾಗ ಸಹೋದರನ ಹೆಂಡ್ತಿ ಮತ್ತೊಂದು ಮದುವೆ ಆಗಿರುವ ವಿಡಿಯೋ, ಫೋಟೋ ಸಿಕ್ಕಿದ್ದವೋ ಪರಮೇಶ್ ಸಹೋದರಿಯರಿಗೆ ಆತನ ಹೆಂಡ್ತಿ ಮೇಲೆ ಅನುಮಾನ ಶುರುವಾಗಿದೆ.
ಹೆಬ್ಬೂರು ಪೊಲೀಸ್ ಠಾಣೆಗೆ ದೂರು!
ಅಲ್ದೇ ಶವಸಂಸ್ಕಾರದ ವೇಳೆ ಮೃತದೇಹಕ್ಕೆ ಸ್ನಾನ ಮಾಡಿಸುವ ವೇಳೆ ಪರಮೇಶನ ಮೂಗು ಹಾಗೂ ಗುಪ್ತಾಂಗದ ಮೇಲೆ ಗಾಯ ಆಗಿರೋದನ್ನ ನೋಡಿದ್ರು. ಆದ್ರೆ ಮೊದಲೇ ಸಾವಿನ ನೋವು ಹಾಗೂ ಪರಮೇಶಗೆ ಮಕ್ಕಳಿದ್ದು, ಸುಮ್ಮನೆ ಪೊಲೀಸು, ಕೇಸು ಯಾಕೆ ಅಂತಾ ಸುಮ್ಮನೆ ಆಗಿದ್ರಂತೆ. ಆದ್ರೆ ಅದ್ಯಾವಾಗ ಪರಮೇಶ್ ಹೆಂಡ್ತಿ ಗಂಡ ಸತ್ತು 16 ದಿನಕ್ಕೆ ಮತ್ತೊಂದು ಮದುವೆ ಆದ್ಳೋ, ಸಹೋದರಿಯರ ಅನುಮಾನ ಹೆಚ್ಚಾಗಿತ್ತು.. ಹೀಗಾಗಿ ಇದೇ ತಿಂಗಳ 22 ರಂದು ಹೆಬ್ಬೂರು ಪೊಲೀಸ್ ಠಾಣೆಗೆ ದೂರು ನೀಡಿದ್ರು.
ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ
ಇನ್ನು ದೂರು ದಾಖಲಾಗುತ್ತಿದ್ದಂತೆ ಪೊಲೀಸರು ಕ್ರಮಕ್ಕೆ ಮುಂದಾಗಿದ್ದು, ತಹಶೀಲ್ದಾರ್ ರಾಜೇಶ್ವರಿ ಹಾಗೂ ಪೊಲೀಸರ ಸಮ್ಮುಖದಲ್ಲಿ ಸಮಾಧಿಯನ್ನು ಅಗೆದು ಮೃತದೇಹವನ್ನು ಹೊರತೆಗೆದು, ತುಮಕೂರು ಜಿಲ್ಲಾಸ್ಪತ್ರೆಗೆ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಲಾಯ್ತು.
ಕೊಲೆಯೋ.? ಸಹಜ ಸಾವೋ..?
ವ್ಯಕ್ತಿಯ ಸಾವಿನ ಬಗ್ಗೆ ಅನುಮಾನ ಬೆನ್ನಲ್ಲೇ ಮೃತದೇಹವನ್ನು ಹೊರತೆಗೆಯಲಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು. ಪರಮೇಶ ಅವರದ್ದು ಕೊಲೆಯೋ.? ಸಹಜ ಸಾವೋ..? ಅನ್ನೋದನ್ನ ತನಿಖೆ ಬಳಿಕ ಸತ್ಯ ಹೊರಬರಲಿದೆ. ಇತ್ತ ಗಂಡ ಸತ್ತು ಕೇವಲ 16 ದಿನಕ್ಕೆ ಹೆಂಡ್ತಿ ಆಶಾ ಮತ್ತೊಂದು ಮದುವೆ ಆಗಿದ್ದು, ಹೆಂಡ್ತಿ ನಡವಳಿಕೆ ಮೇಲೆ ಸಿಕ್ಕಾಪಟ್ಟೆ ಅನುಮಾನ ಶುರುವಾಗಿದ್ದು, ಪೊಲೀಸರ ತನಿಖೆ ಬಳಿಕ ಅಸಲಿ ಸತ್ಯ ಹೊರಬರಬೇಕಿದೆ.

ಇದನ್ನು ನೋಡಿ : ಹೆದ್ದಾರಿ ಪಕ್ಕದಲ್ಲಿದ್ದ TAJ DARBAR HOTELಗೆ ಬೆಂಕಿ- ಕ್ಷಣಾರ್ಧದಲ್ಲೇ ಹೊತ್ತಿ ಉರಿಯಿತು




