Bengaluru : ಡೈರೆಕ್ಟರ್ ಕಿಡ್ನ್ಯಾಪ್ ಕೇಸ್ನಲ್ಲಿ ಟ್ವಿಸ್ಟ್! ಭೀಮ ಸಿನಿಮಾ ನಟಿ ಅರೆಸ್ಟ್.

Bengaluru ನಗರದಲ್ಲಿ ನಿರ್ದೇಶಕ ಅನೀಶ್ ಕಿಡ್ನ್ಯಾಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ 11 ಆರೋಪಿಗಳನ್ನು ಇದೀಗ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಬೆಂಗಳೂರಿನ ಆಡುಗೋಡಿ ಠಾಣಾ ವ್ಯಾಪ್ತಿಯಲ್ಲಿ ಈ ಒಂದು ಘಟನೆ ನಡೆದಿತ್ತು.
ಜೀವನದ ಭಾಷೆ ಚಿತ್ರದ ನಿರ್ದೇಶನ
ನಿರ್ದೇಶಕ ಅನೀಶ್ ಕಳೆದ ವರ್ಷ ಜೀವನದ ಭಾಷೆ ಚಿತ್ರದ ನಿರ್ದೇಶನ ಮಾಡುತ್ತಿದ್ದರು, ಹಿಂದಿನ ಶಾರ್ಟ್ ಮೂವಿ ಭರವಸೆಯ ಜೀವನ ಸಹ ಅವರಿಂದ ನಿರ್ಮಾಣಗೊಂಡಿತ್ತು. ಸಿನಿಮಾ ಕಾರಣಾಂತರಗಳಿಂದ ಸ್ಥಗಿತಗೊಳ್ಳುವುದರಿಂದ ಅವರು ಮುಂಬೈಗೆ ಸ್ಥಳಾಂತರವಾಗಿದ್ದರು.
ಇದನ್ನು ಓದಿ : ವಾಟ್ಸಾಪ್ ಸ್ಟೇಟಸ್ ಹಾಕಿ ನೀರಿಗೆ ಬಿದ್ದು ವಿದ್ಯಾರ್ಥಿ Suicide

ಆಡುಗೋಡಿ ವ್ಯಾಪ್ತಿಯಲ್ಲಿ ಕಿಡ್ನ್ಯಾಪ್
ಇನ್ನು ಪೊಲೀಸರ ಮಾಹಿತಿ ಪ್ರಕಾರ, ದುನಿಯಾ ವಿಜಯ್ ಅಭಿನಯದ ಭೀಮ ಚಿತ್ರದ ನಟಿ ಐಶ್ವರ್ಯ ಮೂಲಕ ಆರೋಪಿಗಳು ನಿರ್ದೇಶಕನ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಅವರು ಕಾರು ಖರೀದಿ ಮಾಡುವಂತೆ ನಟಿಯ ಮೂಲಕ ಅನೀಶನನ್ನು ಕರೆಸಿದ್ದು, ನಂತರ ಆಡುಗೋಡಿ ವ್ಯಾಪ್ತಿಯಲ್ಲಿ ಕಿಡ್ನ್ಯಾಪ್ ಮಾಡಿದ್ದರು.
11 ಆರೋಪಿಗಳು ಅರೆಸ್ಟ್ – Bengaluru
ನಿರ್ದೇಶಕ ಅನೀಶ್ ಜೊತೆಗೆ ಐದು ಲಕ್ಷ ಹಣದ ವಿಚಾರಕ್ಕೆ ಜಗಳ ಆಗಿತ್ತು. ಇದೇ ವಿಚಾರಕ್ಕೆ ಪ್ಲಾನ್ ಮಾಡಿ ಕಿಡ್ನ್ಯಾಪ್ ಮಾಡಿರುವುದು ಪತ್ತೆಯಾಗಿದೆ. ಸದ್ಯ 11 ಆರೋಪಿಗಳನ್ನು ಬೆಂಗಳೂರಿನ ಆಡುಗೋಡಿ ಪೊಲೀಸರು ಅರೆಸ್ಟ್ ಮಾಡಿ, ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : MICRO FINANCE TORTURE | ಫೈನಾನ್ಸ್ ಬ್ಯಾಂಕ್ ಸಿಬ್ಬಂದಿಯಿಂದ ಕಿರುಕುಳ ಬೇಸತ್ತು ಮಹಿಳೆ ಆತ್ಮಹತ್ಯೆಗೆ ಯತ್ನ





