
ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ 2024-25ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಆಯೋಜಿಸಲಾಗಿತ್ತು. ಆದ್ರೆ, ಕೆಲವು ಸದಸ್ಯರು ನಮಗೆ ಆಹ್ವಾನ ಪತ್ರಿಕೆಯನ್ನು ನೀಡದೆ ವಾರ್ಷಿಕ ಸಭೆಯನ್ನು ನಡೆಸಲಾಗುತ್ತಿದೆ ಎಂದು ವಿಎಸ್ಎಸ್ ಎನ್ ಎರಡು ಬಣದ ಸದಸ್ಯರ ನಡುವೆ ಮಾತಿನ ಜಟಾಪಟಿ ನಡೆಯಿತು.ಇನ್ನುನ ಮಾವತ್ತೂರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಸಭೆ ಆರಂಭವಾಯಿತು. ಈ ವೇಳೆ ವಿಎಸ್ಎಸ್ ಎನ್ ಬಣದಲ್ಲಿಯೇ ಗಲಾಟೆ ಪ್ರಾರಂಭವಾಯಿತು. ನಮನ್ನು ಆಹ್ವಾನ ಪತ್ರಿಕೆಯಲ್ಲಿ ಕಡೆಗಣಿಸಲಾಗಿದೆ ಎಂದು ಖ್ಯಾತೆ ತೆಗೆದು, ಸಭೆಯಲ್ಲಿ ದೊಡ್ಡ ಗಲಾಟೆಯೇ ನಡೆಯಿತು.
30 ಸಾವಿರಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ ಆಯೋಜಿಸಿದ್ದ ಸರ್ವ ಸದಸ್ಯರ ವಾರ್ಷಿಕ ಮಹಾಸಭೆಯು ಇಬ್ಬರ ಜಗಳದಲ್ಲಿ ವ್ಯರ್ಥವಾಯಿತು ಅನ್ನೋ ಮಾತುಗಳು ಕೇಳಿಬಂದವು. ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ವಿಫಲರಾಗಿದ್ದಾರೆ. ಸದಸ್ಯರಿಗೆ 15 ದಿನ ಮುಂಚೆಯೇ ವಾರ್ಷಿಕ ಮಹಾಸಭೆಯ ಆಹ್ವಾನ ಪತ್ರಿಕೆ ನೀಡಬೇಕು. ವಾರ್ಷಿಕ ಮಹಾಸಭೆ ಎರಡು ಮೂರು ದಿನ ಇದ್ದಂತೆ ಆಹ್ವಾನ ಪತ್ರಿಕೆ ನೀಡಲು ಬರುತ್ತಾರೆ ನೀಡುತ್ತಾರೆ ಎಂದು ಕೆಲವು ಸದಸ್ಯರು ವಾಗ್ವಾದ ನಡೆಸಿದರು.
ಈ ಹಿಂದೆ ನಾನು ಅಧ್ಯಕ್ಷ ಆಗಿದ್ದ ಸಂದರ್ಭದಲ್ಲಿ, ಸಹಕಾರ ಸಂಘದ ಜಿಲ್ಲಾ ಅಧ್ಯಕ್ಷರಾದ ಕೆ.ಎನ್.ರಾಜಣ್ಣ ಅವರನ್ನ ಭೇಟಿ ಮಾಡಿ, ಸಾಲ ಮಂಜೂರು ಮಾಡಿಕೊಂಡು ಬಂದಿದ್ದೆ. ಆದರೆ, ಈಗಿನ ಅಧ್ಯಕ್ಷರಾದ ಧನಂಜಯ ಅವರು ರಾಜಣ್ಣ ಅವರ ಅಪ್ಪನ ಮನೆಯಿಂದ ಕೊಡಲ್ಲ ಎಂದು ಉದ್ದಟನದ ಮಾತನಾಡಿದ್ದಾರೆ. ಇಲ್ಲಿಯವರೆಗೂ ಒಂದು ರೂಪಾಯಿ ಸಾಲ ಮಂಜೂರು ಆಗಿಲ್ಲ ಎಂದು ವಿಎಸ್ಎಸ್ಎನ್ ಮಾಜಿ ಅಧ್ಯಕ್ಷ ಶಂಕರಣ್ಣ ಆರೋಪ ಮಾಡಿದರು. ಆದರೆ ಕಾರ್ಯನಿರ್ವಾಹಣಾಧಿಕಾರಿ ಮತ್ತು ಅಧ್ಯಕ್ಷರ ಬೇಜಾವಬ್ದಾರಿ ತನವೇ ಇಂದಿನ ಸಭೆ ರದ್ದಾಗಲು ಕಾರಣ ಎಂದರು.
ಒಟ್ಟಿನಲ್ಲಿ ವಿಎಸ್ಎಸ್ಎನ್ ನಲ್ಲಿ ನಡೆಯುತ್ತಿದ್ದ ವಾರ್ಷಿಕ ಸಭೆಯು ಕೇವಲ ಆಹ್ವಾನ ನೀಡಿಲ್ಲ ಅನ್ನೋ ವಿಚಾರವಾಗಿ ಗಲಾಟೆ ಶುರುವಾಗಿ ಇಡೀ ಸಭೆಯೇ ರದ್ದಾಗಿರುವ ಘಟನೆ ನಡೆದಿರುವುದು ಶೋಚನೀಯ




