Devanahalli : ಮೂತ್ರ ವಿಸರ್ಜನೆಗೆಂದು ಹೋದ ವ್ಯಕ್ತಿಗೆ ಕಂಡದ್ದು ಮಹಿಳೆಯ ಶವ – ಡಿಸಿಪಿ ಹೇಳಿದ್ದೇನು?

ಬೆಂಗಳೂರು ಗ್ರಾಮಾಂತರ ಜಿಲ್ಲೆಯ Devanahalli ಪಟ್ಟಣದ ಸ್ವರ್ಣಾರ್ಧಿ ಹೋಟೆಲ್ ಬಳಿ ರಸ್ತೆ ಬದಿಯ ಚರಂಡಿಯಲ್ಲಿ ಅಪರಿಚಿತ ಮಹಿಳೆಯ ಶವ ಪತ್ತೆ ಆಗಿದೆ. ಶವವು ಕತ್ತು ಕೊಯ್ದು ಸುಟ್ಟು ಹಾಕಿದ ಸ್ಥಿತಿಯಲ್ಲಿದ್ದು, ಹಂತಕರು ಬೇರೆಡೆ ಕೊಂದು ರಾತ್ರಿ ವೇಳೆ ಶವ ತಂದು ಬಿಸಾಕಿದ್ದು, ನಾಲ್ಕೈದು ದಿನಗಳ ಹಿಂದೆ ಮಹಿಳೆಯನ್ನು ಕೊಲೆ ಮಾಡಿರುವ ಶಂಕೆ ವ್ಯಕ್ತಪಡಿಸಲಾಗಿದೆ.
ಇದನ್ನು ಓದಿ : ತುಮಕೂರಿನಲ್ಲಿ ಮಳೆ ಮುನ್ಸೂಚನೆ – ಮೋಡ ಇದ್ರು ಬಿಸಿಲಿನ ತಾಪಮಾನ
ಮೂತ್ರ ವಿಸರ್ಜನೆಗೆಂದು ಹೋದವನಿಗೆ ಕಂಡದ್ದು ಮಹಿಳೆಯ ಶವ
ಮೂತ್ರ ವಿಸರ್ಜನೆಗೆ ಬಂದ ವ್ಯಕ್ತಿಯೋರ್ವನ ಕಣ್ಣಿಗೆ ಶವ ಕಾಣಿಸಿದೆ. ತಕ್ಷಣ ದೇವನಹಳ್ಳಿ ಪೊಲೀಸರು ಮಾಹಿತಿ ಪಡೆದಿದ್ದಾರೆ. ಸೋಕೋ ತಂಡ ಸ್ಥಳ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ದೇವನಹಳ್ಳಿ ತಾಲೂಕು ಆಸ್ಪತ್ರೆಯ ಶವಾಗಾರಕ್ಕೆ ಕಳುಹಿಸಲಾಗಿದೆ.
ಡಿಸಿಪಿ ಹೇಳಿದ್ದೇನು?
ಇನ್ನು ಈ ಬಗ್ಗೆ ಈಶಾನ್ಯ ವಿಭಾಗದ ಡಿಸಿಪಿ ಮಿಥುನ್ ಕುಮಾರ್ ಪ್ರತಿಕ್ರಿಯಿಸಿದ್ದು, “ಅಪರಿಚಿತ ಮಹಿಳೆಯ ಶವ ಪತ್ತೆಯಾಗಿದೆ. ಮೇಲ್ನೋಟಕ್ಕೆ ಕೊಲೆ ಮಾಡಲಾಗಿದ್ದು, ಶವವನ್ನು ಚರಂಡಿಯಲ್ಲಿ ಕತ್ತುಕೊಯ್ದು ಸುಟ್ಟ ಸ್ಥಿತಿಯಲ್ಲಿ ಕಂಡುಬಂದಿದೆ. ಮೃತ ಮಹಿಳೆಯ ವಯಸ್ಸು ಸುಮಾರು 30 ರಿಂದ 35 ವರ್ಷಗಳಾಗಿರಬಹುದು ಎಂದು ಹೇಳಿದ್ದಾರೆ.
ಇದನ್ನು ನೋಡಿ : ಲೋಕಾ ಬಲೆಗೆ ಬಿದ್ದ BJP MLA – ಲೋಕಾ ರೇಡ್ ಹಿಂದೆ ಸ್ವಾಮೀಜಿ ಕೈವಾಡ?




