Sirsi ಮಾರಿಕಾಂಬಾ ಜಾತ್ರೆ ಹಿನ್ನೆಲೆ ನೈಋತ್ಯ ರೈಲ್ವೆಯಿಂದ ಯಶವಂತಪುರ–ತಾಳಗುಪ್ಪ ನಡುವೆ ವಿಶೇಷ ರೈಲು ಸೇವೆ ಘೋಷಣೆ ಮಾಡಲಾಗಿದೆ…!!

ನಾಡಿನ ಪ್ರಸಿದ್ಧ Sirsi ಮಾರಿಕಾಂಬಾ ದೇವಸ್ಥಾನ ಜಾತ್ರಾ ಮಹೋತ್ಸವದ ಹಿನ್ನೆಲೆ ಭಕ್ತರಿಗೆ ಅನುಕೂಲ ಕಲ್ಪಿಸಲು ನೈಋತ್ಯ ರೈಲ್ವೆ ವಿಶೇಷ ರೈಲು ಸೇವೆಗಳನ್ನು ಘೋಷಿಸಿದೆ. ಎರಡು ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಸಾವಿರಾರು ಭಕ್ತರು ಆಗಮಿಸುವುದರಿಂದ ಹೆಚ್ಚುವರಿ ಪ್ರಯಾಣ ವ್ಯವಸ್ಥೆ ಮಾಡಲಾಗಿದೆ.

ಯಶವಂತಪುರ – ತಾಳಗುಪ್ಪ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲು
ನೈಋತ್ಯ ರೈಲ್ವೆ ವತಿಯಿಂದ ಯಶವಂತಪುರ ರೈಲು ನಿಲ್ದಾಣ ಮತ್ತು ತಾಳಗುಪ್ಪ ರೈಲು ನಿಲ್ದಾಣ ನಡುವೆ ವಿಶೇಷ ರೈಲು ಸೇವೆ ವ್ಯವಸ್ಥೆ ಮಾಡಲಾಗಿದೆ.
- ರೈಲು ಸಂಖ್ಯೆ 06587 ಫೆಬ್ರವರಿ 27 ರಾತ್ರಿ 10:45ಕ್ಕೆ ಯಶವಂತಪುರದಿಂದ ಹೊರಡಲಿದೆ.
- ಫೆಬ್ರವರಿ 28 ಮುಂಜಾನೆ 05:05ಕ್ಕೆ ತಾಳಗುಪ್ಪ ತಲುಪಲಿದೆ.
ವಾಪಸ್ ಪ್ರಯಾಣ ಸಮಯ
- ರೈಲು ಸಂಖ್ಯೆ 06588 ಫೆಬ್ರವರಿ 28 ಬೆಳಿಗ್ಗೆ 09:30ಕ್ಕೆ ತಾಳಗುಪ್ಪದಿಂದ ಹೊರಡಲಿದೆ.
- ಅದೇ ದಿನ ಸಂಜೆ 05:15ಕ್ಕೆ ಯಶವಂತಪುರ ತಲುಪಲಿದೆ.

20 ಬೋಗಿಗಳೊಂದಿಗೆ ವಿಶೇಷ ವ್ಯವಸ್ಥೆ
ಭಕ್ತರ ಹೆಚ್ಚಿನ ಸಂಖ್ಯೆಯನ್ನು ಗಮನದಲ್ಲಿಟ್ಟು ರೈಲಿನಲ್ಲಿ ಒಟ್ಟು 20 ಬೋಗಿಗಳನ್ನು ಒದಗಿಸಲಾಗಿದೆ.
- 1 ಪ್ರಥಮ ದರ್ಜೆ (AC 2 Tier)
- 2 AC 3 Tier
- 10 ಸ್ಲೀಪರ್ ಕ್ಲಾಸ್
- 5 ಸಾಮಾನ್ಯ ದರ್ಜೆ
- 2 ಎಸ್ಎಲ್ಆರ್ ಬೋಗಿಗಳು
ಇದರ ಮೂಲಕ ಹೆಚ್ಚಿನ ಭಕ್ತರು ಸುಲಭವಾಗಿ ಪ್ರಯಾಣಿಸಲು ಅವಕಾಶ ಕಲ್ಪಿಸಲಾಗಿದೆ.

ಮಾರ್ಚ್ 1ರಿಂದ ವಿಸ್ತರಿತ ರೈಲು ಸೇವೆ
ಇದಲ್ಲದೆ ಈಗಾಗಲೇ ಸಂಚರಿಸುತ್ತಿದ್ದ ರೈಲು ಸೇವೆಯನ್ನು ತಾಳಗುಪ್ಪದವರೆಗೆ ವಿಸ್ತರಿಸಲಾಗಿದೆ.
- ರೈಲು ಸಂಖ್ಯೆ 16581 ಮಾರ್ಚ್ 1ರಿಂದ ಮಧ್ಯರಾತ್ರಿ 12:15ಕ್ಕೆ ಯಶವಂತಪುರದಿಂದ ಹೊರಟು ಬೆಳಿಗ್ಗೆ 09:00ಕ್ಕೆ ತಾಳಗುಪ್ಪ ತಲುಪಲಿದೆ.
- ರೈಲು ಸಂಖ್ಯೆ 16582 ಮಾರ್ಚ್ 1 ರಾತ್ರಿ 10:00ಕ್ಕೆ ತಾಳಗುಪ್ಪದಿಂದ ಹೊರಟು ಮರುದಿನ ಮುಂಜಾನೆ 04:45ಕ್ಕೆ ಯಶವಂತಪುರ ತಲುಪಲಿದೆ.
ಜಾತ್ರೆ ಸಮಯದಲ್ಲಿ ಹೆಚ್ಚಿನ ಜನಸಂದಣಿ ನಿರೀಕ್ಷೆಯಿರುವುದರಿಂದ ಮುಂಚಿತವಾಗಿ ಟಿಕೆಟ್ ಕಾಯ್ದಿರಿಸಿಕೊಳ್ಳುವಂತೆ ರೈಲ್ವೆ ಇಲಾಖೆ ಭಕ್ತರಿಗೆ ಸಲಹೆ ನೀಡಿದೆ. ಈ ವಿಶೇಷ ರೈಲು ಸೇವೆಯಿಂದ ಶಿರಸಿ ಮಾರಿಕಾಂಬಾ ಜಾತ್ರೆಗೆ ತೆರಳುವ ಭಕ್ತರಿಗೆ ಪ್ರಯಾಣ ಮತ್ತಷ್ಟು ಸುಲಭವಾಗಲಿದೆ.




