Tumkur ನಗರದಲ್ಲಿ ನಿನ್ನೆಯಿಂದ ಮೋಡ ಕವಿದ ವಾತಾವರಣ – ಮೋಡ ಕವಿದ ವಾತಾವರಣದಿಂದ ಉಷ್ಣಾಂಶ ಹೆಚ್ಚಳ.

ರಾಜ್ಯದಲ್ಲಿ ಬೇಸಿಗೆ ಆರಂಭಕ್ಕೂ ಮುನ್ನವೇ ಬಿಸಿಲಿತ ತಾಪಮಾನ ಹೆಚ್ಚಾಗಿದ್ದು, ಜನರು ಕಂಗಾಲಾಗುತ್ತಿದ್ದಾರೆ. ಬೆಳಗ್ಗೆ 7 ಗಂಟೆಗೆ ಬಿಸಿಲು ಶುರುವಾಗುತ್ತಿದ್ದು, 11 ಗಂಟೆ ಸುಮಾರಿಗೆ ಬಿಸಿಲಿತ ತಾಪ ಹೆಚ್ಚಾಗುತ್ತಿದೆ.
ಉಷ್ಣಾಂಶ ಹೆಚ್ಚಳವಾಗ್ತಾ ಇದ್ದು, ಜನರು ಕೂಲ್ ಡ್ರಿಂಕ್ಸ್, ಕಲ್ಲಂಗಡಿ, ಎಳನೀರು ಮೊರೆ ಹೋಗ್ತಾ ಇದ್ದಾರೆ. ಅಲ್ದೇ ಬಿಸಿಲಿನಿಂದ ರಕ್ಷಣೆಗಾಗಿ ಛತ್ರಿಗಳನ್ನು ಬಳಸುತ್ತಿದ್ದಾರೆ. ಇನ್ನು ಬಿಸಿಲಿನ ತಾಪಮಾನ ಹೆಚ್ಚಾಗ್ತಾ ಇದೆ ಅನ್ನುವಷ್ಟರಲ್ಲಿ ಮಳೆ ಮುನ್ಸೂಚನೆ ಸಿಕ್ಕಿದೆ.
11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ರಾಜ್ಯದಲ್ಲಿ ಕೆಲ ಕಡೆಗಳಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ನಿನ್ನೆ ಗದಗ, ಕಲಬುರಗಿ, ವಿಜಯಪುರ ಸೇರಿ ನಾನಾ ಜಿಲ್ಲೆಗಳಲ್ಲಿ ಮಳೆ ಅಬ್ಬರಿಸಿದ್ರೆ, ಇಂದು ಕೂಡ ಮಳೆ ಆಗುವ ಸಾಧ್ಯತೆ ಇದ್ದು, ಇಂದು 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ನೀಡಿದೆ.
ಬೀದರ್, ಕಲಬುರಗಿ, ರಾಯಚೂರು, ವಿಜಯಪುರ, ಯಾದಗಿರಿ, ಚಿಕ್ಕಮಗಳೂರು, ಹಾಸನ, ಕೊಡಗು, ಮೈಸೂರು, ಮಂಡ್ಯ, ಚಾಮರಾಜನಗರ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ ಘೋಷಿಸಿದ್ದು, ಉಳಿದ ಜಿಲ್ಲೆಗಳಲ್ಲಿ ಸಾಧಾರಣ ಮಳೆ ಆಗುವ ಸಾಧ್ಯತೆ ಇದೆ.
ಇದನ್ನು ಓದಿ : 20 ಅಡಿ ಆಳದ ಗದ್ದೆಗೆ ಬಿದ್ದ ಕಾರು! ತಾಯಿ – ಮಗ ಸೇಫ್

ತುಮಕೂರಿನಲ್ಲಿ ಮಳೆ ಮುನ್ಸೂಚನೆ
ಇನ್ನು Tumkur ನಗರದನಲ್ಲಿ ನಿನ್ನೆಯಿಂದ ಮಳೆ ಮುನ್ಸೂಚನೆ ಇದೆ. ನಿನ್ನೆ ಆಗಾಗ ಮೋಡ ಕವಿದ ವಾತಾವರಣ ನಿರ್ಮಾಣ ಆಗಿದ್ದರ ಜೊತೆಗೆ ಉಷ್ಣಾಂಶ ಹೆಚ್ಚಾಗಿತ್ತು.
ಇನ್ನು ಇಂದು ಬೆಳ್ಳಗೆಯಿಂದಲೂ ತುಮಕೂರಿನಲ್ಲಿ ಕೊಂಚ ಬಿಸಿಲಿನ ಜೊತೆಗೆ ಮೋಡ ಕವಿದ ವಾತಾವರಣ ಇದ್ದು, ಉಷ್ಣಾಂಶ ಹೆಚ್ಚಾಗ್ತಾ ಇದೆ.
ತಾಪಮಾನ ಹೆಚ್ಚಾಗ್ತಾ ಇದ್ದು ಜನರು ಮನೆಯಲ್ಲಿ ಇರಲು ಒದ್ದಾಡುತ್ತಿದ್ದಾರೆ. ಅಲ್ದೇ ಕೂಲ್ಡ್ರಿಂಕ್ಸ್, ಫ್ಯಾನ್ಸ್ಗಳ ಮೊರೆ ಹೋಗ್ತಾ ಇದ್ದಾರೆ.
ಎಚ್ಚರ ವಹಿಸುವಂತೆ ವೈದ್ಯರ ಸೂಚನೆ
ಇನ್ನು ಈ ಸಮಯದಲ್ಲಿ ಹೀಟ್ ಸ್ಟ್ರೋಕ್ ಹಾಗೂ ಡಿಹೈಡ್ರೇಶನ್ ಅಪಾಯ ಇರುವುದರಿಂದ ವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಹೃದಯ ಸಂಬಂಧಿ ಕಾಯಿಲೆ ಇರುವವರು ವಿಶೇಷ ಎಚ್ಚರ ವಹಿಸುವಂತೆ ವೈದ್ಯರು ಸೂಚನೆ ನೀಡಿದ್ದಾರೆ.
ತುಮಕೂರಿನಲ್ಲಿ ಇಂದು ಮಳೆ ಆಗುವ ಸಾಧ್ಯತೆ ಇದ್ದು, ಮಳೆ ಬಂದರೆ ಉಷ್ಣಾಂಶ ಹೆಚ್ಚಾಗುವ ಸಾಧ್ಯತೆ ಇದೆ.

ಇದನ್ನು ನೋಡಿ : ಮಹಾನಗರ ಪಾಲಿಕೆಯಲ್ಲಿ ಅಧಿಕಾರಿಗಳ ವಾರ್ – CAMERAವನ್ನು ಕಿತ್ತುಹಾಕಿಸಿದ MANAGER




