
KANTARA CHAPTER 1 : ಘೋಷಣೆಯಾದಾಗಿನಿಂದಲೇ ಕುತೂಹಲ ಕೆರಳಿಸಿ, ಟ್ರೈಲರ್ ಮೂಲಕ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದ ʼಕಾಂತಾರ: ಚಾಪ್ಟರ್ 1ʼ (Kantara: Chapter 1) ಚಿತ್ರತಂಡ ಇದೀಗ ಅಭಿಮಾನಿಗಳಿಗೆ ಮತ್ತೊಂದು ಗುಡ್ನ್ಯೂಸ್ ನೀಡಿದೆ. ಈ ಚಿತ್ರವು ಅಕ್ಟೋಬರ್ 2 ರಂದು ವಿಶ್ವದಾದ್ಯಂತ ಬಿಡುಗಡೆಗೊಳ್ಳಲಿದೆ. ಸಿನಿಮಾತಂಡ ಕರ್ನಾಟಕದಲ್ಲಿ ಅಡ್ವಾನ್ಸ್ ಟಿಕೆಟ್ ಬುಕ್ಕಿಂಗ್ ಆರಂಭವಾಗಲಿರುವ ದಿನಾಂಕವನ್ನು ಅಧಿಕೃತವಾಗಿ ಘೋಷಿಸಿದೆ.
ಸೆಪ್ಟೆಂಬರ್ 26, ಮಧ್ಯಾಹ್ನ 12:29ಕ್ಕೆ, ‘ಕಾಂತಾರ: ಚಾಪ್ಟರ್ 1’ ಚಿತ್ರದ ಟಿಕೆಟ್ ಬುಕ್ಕಿಂಗ್ ಕರ್ನಾಟಕದ ಎಲ್ಲ ಮುಖ್ಯ ಥಿಯೇಟರ್ಗಳಲ್ಲಿ ಆರಂಭವಾಗಲಿದೆ. ಸೋಶಿಯಲ್ ಮೀಡಿಯಾ ಮೂಲಕ ಈ ವಿಷಯವನ್ನು ಚಿತ್ರತಂಡ ತಿಳಿಸಿದ್ದು, ಕನ್ನಡ ಚಿತ್ರರಸಿಕರಲ್ಲಿ ವಿಶೇಷ ಕುತೂಹಲ ಮೂಡಿಸಿದೆ. “ಮೊದಲ ಅಧ್ಯಾಯದ ಆರಂಭ!” ಎಂಬ ಶೀರ್ಷಿಕೆಯಲ್ಲಿ ಚಿತ್ರದ ಟೀಮ್ ಪ್ರಕಟಣೆ ನೀಡಿದ್ದು, ಟ್ರೈಲರ್ ಮೂಲಕ ಜನರಲ್ಲಿ ಮೂಡಿದ ಉತ್ಸಾಹವನ್ನು ಮತ್ತಷ್ಟು ಹೆಚ್ಚಿಸಿದೆ.
ಈ ಚಿತ್ರವನ್ನು ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ, ನಾಯಕನ ಪಾತ್ರದಲ್ಲೂ ಕಾಣಿಸಿ ಕೊಂಡಿದ್ದಾರೆ. ಈ ಬಾರಿ ಕೂಡಾ ಅವರು ತುಳುನಾಡಿನ ವಿಶಿಷ್ಟ ಭೂತಾರಾಧನೆ ಮತ್ತು ಸ್ಥಳೀಯ ಸಂಸ್ಕೃತಿಯೊಂದಿಗೆ ಚಿತ್ರವನ್ನು ಹೆಣೆದಿದ್ದಾರೆ ಎಂಬುದು ಟ್ರೈಲರ್ ನೋಡಿ ಸ್ಪಷ್ಟವಾಗಿದೆ.
ಇನ್ನು ಇತರೆ ರಾಜ್ಯಗಳಲ್ಲಿ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ advance booking ಶೀಘ್ರದಲ್ಲೇ ಆರಂಭವಾಗಲಿದೆ ಎನ್ನಲಾಗಿದೆ.




