
ವಿಶ್ವದಲ್ಲಿ ಆಕ್ಸಿಜೆನ್ ಉತ್ಪಾದನೆ ಇನ್ನು ಸಾಧ್ಯವಾಗಿಲ್ಲ. ಕೈಗಾರಿಕೆಗಳ ಹಾಗೂ ಆಧುನಿಕತೆಯಲ್ಲಿ ಮನುಕುಲದ ಉಳಿವಿಗಾಗಿ ಅರಣ್ಯ ಅಭಿವೃದ್ಧಿಯಾಗಲೇಬೇಕೆಂದು ಶಾಸಕ ಕೆ.ಎನ್.ರಾಜಣ್ಣ ಮಧುಗಿರಿಯಲ್ಲಿ ತಿಳಿಸಿದರು.
ತಾಲೂಕಿನ ತಿಮ್ಮಲಾಪುರ ಕರಡಿ ವನ್ಯಧಾಮದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಉದ್ಘಾಟಿಸಿ, ಚಾಲನೆ ನೀಡಿ ಮಾತನಾಡಿದ ಅವರು, ಈ ತಿಮ್ಮಲಾಪುರ ವನ್ಯಧಾಮ ಹಿಂದೆ ಇಷ್ಟು ಅಭಿವೃದ್ಧಿ ಕಂಡಿರಲಿಲ್ಲ. ನನ್ನ ಕಳೆದ ಅವಧಿಯಲ್ಲಿ ಈ ಬಗ್ಗೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಂತೆ ಈಗ ಪ್ರವಾಸಿ ತಾಣವಾಗಿ ಮಾರ್ಪಟ್ಟಿದ್ದು, ತಾಲೂಕಿಗೆ ಹೆಮ್ಮಯ ಸಂಗತಿಯಾಗಿದೆ. ಈ ಅರಣ್ಯವು ನನಗೆ ಹಳೆಯ ನೆನಪನ್ನು ತರುತ್ತದೆ. ನಾನು ಹಿಂದೆ ಈ ಕಾಡಿನಲ್ಲೇ ಹಲವಾರು ದಿನಗಳನ್ನು ಕಳೆದಿದ್ದೇನೆ. ಈ ಕಾಡಿನಲ್ಲಿ ಹಲವಾರು ರೀತಿಯ ವನ್ಯ ಮೃಗಗಳು ವಾಸವಿದ್ದು ಮೂಲಭೂತ ಸೌಕರ್ಯಗಳನ್ನು ಈಗ ಕಲ್ಪಿಸಲಾಗಿದೆ.

ಇನ್ನು ಸೂತ್ತಲಿನ ಗ್ರಾಮದಲ್ಲಿ ಹಿಂದೆ ಗುಡಿಸಲುಗಳಿದ್ದು ಈಗ ಮನೆಗಳು ನಿರ್ಮಾಣಗೊಂಡಿವೆ. ಮತ್ತಷ್ಟೂ ಮನೆಗಳ ಅವಶ್ಯಕತೆಯಿದ್ದರೆ ಕೊಡಿಸುತ್ತೇನೆ. ನಾನು ಜಾತಿ ಆಧಾರದಲ್ಲಿ ಮತ ಕೇಳಿಲ್ಲ. ಎಲ್ಲ ವರ್ಗದ ಬಡವರ ಪರವಾಗಿ ರಾಜಕೀಯ ಮಾಡಿಕೊಂಡು ಬಂದವನು. ಅದಕ್ಕಾಗಿ 35 ಸಾವಿರ ಮತಗಳ ಬಹುಮತ ಬಂದಿದ್ದು ಹೇಗೆ ನಿಮ್ಮ ಋಣ ತೀರಿಸುವುದು ಎಂಬುದೇ ಚಿಂತೆಯಾಗಿದ್ದು ಅದಕ್ಕಾಗಿ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳು ಶ್ರಮಿಸುವುದಾಗಿ ತಿಳಿಸಿದರು. ಇದೇ ವೇಳೆ 2 ಸೋಲಾರ್ ಬೋರ್ವೆಲ್, ವೀಕ್ಷಣಾಗೋಪುರ, ಹಾಗೂ ವನ್ಯಜೀವಿಗಳಿಗೆ ಕುಡಿಯುವ ನೀರಿನ ಮೂಲಗಳ ಕಾಮಗಾರಿಯನ್ನು ಲೋಕಾರ್ಪಣೆಗೊಳಿಸಿದರು




