ಭರ್ಜರಿ ದಾಖಲೆ ಬರೆದ Smriti Mandhana.

ಟೀಮ್ ಇಂಡಿಯಾದ ಆರಂಭಿಕ ಆಟಗಾರ್ತಿ Smriti Mandhana ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭರ್ಜರಿ ಅರ್ಧಶತಕ ಸಿಡಿಸಿ ವಿಶೇಷ ದಾಖಲೆ ನಿರ್ಮಿಸಿದ್ದಾರೆ.
57 ಎಸೆತಗಳಲ್ಲಿ ಅರ್ಧಶತಕ
ಬ್ರಿಸ್ಬೇನ್ನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡಕ್ಕೆ ಮಂಧಾನ ಉತ್ತಮ ಆರಂಭ ಒದಗಿಸಿದರು. ಅವರು ಕೇವಲ 57 ಎಸೆತಗಳಲ್ಲಿ ಅರ್ಧಶತಕ ಪೂರೈಸಿ ತಂಡಕ್ಕೆ ಬಲವಾದ ನೆಲೆ ನೀಡಿದರು.

ಇದನ್ನು ಓದಿ : ಸರ್ಕಾರಿ ಹುದ್ದೆಗಳ ಭರ್ತಿಗೆ ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ
ವಿಶೇಷ ದಾಖಲೆ
ಈ ಅರ್ಧಶತಕದೊಂದಿಗೆ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಅತ್ಯಧಿಕ ಬಾರಿ 50+ ಸ್ಕೋರ್ ದಾಖಲಿಸಿದ ಏಷ್ಯನ್ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಸ್ಮೃತಿ ಮಂಧಾನ ಆಸ್ಟ್ರೇಲಿಯಾ ವಿರುದ್ಧ ಇದುವರೆಗೆ 22 ಏಕದಿನ ಪಂದ್ಯಗಳನ್ನಾಡಿದ್ದು, 4 ಶತಕ ಹಾಗೂ 7 ಅರ್ಧಶತಕಗಳನ್ನು ಬಾರಿಸಿದ್ದಾರೆ. ಈ ಮೂಲಕ ಆಸೀಸ್ ಪಡೆ ವಿರುದ್ಧ 50+ ಸ್ಕೋರ್ಗಳಲ್ಲಿ ಹೊಸ ಮೈಲಿಗಲ್ಲು ಸಾಧಿಸಿದ್ದಾರೆ.

Smriti Mandhana – ಮತ್ತೊಂದು ಮೈಲಿಗಲ್ಲು
ಹಾಗೆಯೇ, Mithali Raj ಬಳಿಕ ಆಸ್ಟ್ರೇಲಿಯಾ ವಿರುದ್ಧ ಏಕದಿನ ಕ್ರಿಕೆಟ್ನಲ್ಲಿ 1000 ರನ್ ಕಲೆಹಾಕಿದ ಎರಡನೇ ಭಾರತೀಯ ಮಹಿಳಾ ಬ್ಯಾಟರ್ ಎಂಬ ಹೆಗ್ಗಳಿಕೆಯನ್ನು ಮಂಧಾನ ಪಡೆದಿದ್ದಾರೆ. ಅವರು ಆಸೀಸ್ ವಿರುದ್ಧ ಇದುವರೆಗೆ 1,078 ರನ್ ಗಳಿಸಿದ್ದಾರೆ.
ಇದನ್ನು ನೋಡಿ : TRACTOR, CAR, BUS ನಡುವೆ ಅಪಘಾ* – ರಕ್ಷಣೆಗೆ ಮುಂದಾದ ವ್ಯಕ್ತಿ ದಾರುಣ ಸಾ*




