ಶಾಸಕ Byrati Basavaraj ಗೆ ಮತ್ತೆ ಫೆ.26ರವರೆಗೆ ನ್ಯಾಯಾಂಗ ಬಂಧನ.

ಬಿಕ್ಲು ಶಿವ ಕೊಲೆ ಪ್ರಕರಣ ಸಂಬಂಧಿಸಿದಂತೆ ಶಾಸಕರಾದ ಬೈರತಿ ಬಸವರಾಜ್ ಅವರನ್ನು ಫೆಬ್ರವರಿ 26ರವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲು ಜನಪ್ರತಿನಿಧಿಗಳ ನ್ಯಾಯಾಲಯ ಆದೇಶ ಹೊರಡಿಸಿದೆ.
7 ದಿನಗಳ ಕಾಲ ಕಸ್ಟಡಿಗೆ
CID ಅಧಿಕಾರಿಗಳು ಮೊದಲು ಬೈರತಿ ಬಸವರಾಜ್ ಅವರನ್ನು ಬಂಧಿಸಿ ಏಳು ದಿನಗಳ ಕಾಲ ಕಸ್ಟಡಿಯಲ್ಲಿ ವಿಚಾರಣೆ ನಡೆಸಿದ್ದರು. ಬಳಿಕ ಇಂದು ಅವರನ್ನು 42ನೇ ಎಸಿಜೆಎಂ ಕೋರ್ಟ್ ಮುಂದೆ ಹಾಜರುಪಡಿಸಲಾಯಿತು.

ಇದನ್ನು ಓದಿ : ಪ್ರೇಮಿಗಳಿಗೆ ಮದುವೆ ಮಾಡಿಸಲು ಹೋಗ್ತಿದ್ದ ಕಾರು ಪಲ್ಟಿ! ಯುವತಿ ಕೊಟ್ಟಳು ಸಖತ್ Twist
ಹೃದಯ ಸಂಬಂಧಿತ ಕಾಯಿಲೆ
ವಿಚಾರಣೆ ವೇಳೆ Byrati Basavaraj ಅವರಿಗೆ ಹೃದಯ ಸಂಬಂಧಿತ ಕಾಯಿಲೆ ಇರುವುದಾಗಿ ಅವರ ಪರ ವಕೀಲರು ನ್ಯಾಯಾಲಯದ ಗಮನಕ್ಕೆ ತಂದರು. ಸೋಮವಾರ ಜಾಮೀನು ಅರ್ಜಿ ವಿಚಾರಣೆ ಇರುವುದರಿಂದ ಅದುವರೆಗೆ ಜಯದೇವ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುವಂತೆ ಮನವಿ ಮಾಡಿದರು.
ಜೈಲಿನಲ್ಲೇ ಅಗತ್ಯ ಚಿಕಿತ್ಸೆ
ಸಿಐಡಿ ಪರ ವಕೀಲ ಅಶೋಕ್ ನಾಯಕ್ ವಾದ ಮಂಡಿಸಿ, ಜಯದೇವ ಆಸ್ಪತ್ರೆಯ ವರದಿಯಲ್ಲಿ ಗಂಭೀರ ಆರೋಗ್ಯ ಸಮಸ್ಯೆ ಇಲ್ಲವೆಂದು ಉಲ್ಲೇಖಿಸಿರುವುದಾಗಿ ತಿಳಿಸಿದರು. ಅಗತ್ಯ ಚಿಕಿತ್ಸೆಯನ್ನು ಜೈಲಲ್ಲಿಯೇ ನೀಡಬಹುದೆಂದು ನ್ಯಾಯಾಲಯಕ್ಕೆ ಮನವಿ ಮಾಡಿದರು.

ಫೆ.26ರವರೆಗೆ ನ್ಯಾಯಾಂಗ ಬಂಧನ
ನ್ಯಾಯಾಲಯ ಬೈರತಿ ಬಸವರಾಜ್ ಅವರನ್ನು ಫೆಬ್ರವರಿ 26ರವರೆಗೆ ಪರಪ್ಪನ ಅಗ್ರಹಾರ ಜೈಲಿಗೆ ಕಳುಹಿಸಲು ಆದೇಶ ನೀಡಿದ್ದು, ಜಯದೇವ ಆಸ್ಪತ್ರೆ ಸೂಚಿಸಿದ ಆಹಾರ ಕ್ರಮವನ್ನು ಜೈಲಲ್ಲಿಯೇ ಮುಂದುವರಿಸಲು ಸೂಚಿಸಿದೆ.
ಇದನ್ನು ನೋಡಿ : ಮಹಿಳೆಯ ಯಡವಟ್ಟಿಗೆ ಗಂಡನಿಗೆ ಕೋಪ – ಚಾಲಕನ ಮೇಲೆ ಮಹಿಳೆ ಗಂಡನಿಂದ ಹಲ್ಲೆ




