Haveri : ಗೆಳೆಯನಿಗೆ ‘ಹುಡುಗರು’ ಸ್ಟೈಲ್ನಲ್ಲಿ ಮದ್ವೆ ಮಾಡಿಸಲು ಮುಂದಾದ ಸ್ನೇಹಿತರು.. ಕಾರು ಆ್ಯಕ್ಸಿಡೆಂಟ್! ಗೆಳೆಯರ ಬಿಟ್ಟು ಕಾಲ್ಕಿತ್ತ ಗೆಳತಿ.

ಸೋಶಿಯಲ್ ಮಿಡಿಯಾ ಜಮಾನ ಬಂದ ಮೇಲಂತೂ ಪ್ರೀತಿ, ಪ್ರೇಮಗಳಂತಹ ಪ್ರಕರಣಗಳು ಹೆಚ್ಚಾಗುತ್ತಿವೆ. ಫೇಸ್ಬುಕ್, ಇನ್ಸ್ಸ್ಟಾಗ್ರಾಂನಲ್ಲೇ ಲವ್ ಸ್ಟಾಟ್ ಆಗ್ತಾ ಇದ್ದು, ಲವ್ನಲ್ಲಿ ಬಿದ್ದ ಯುವಕ – ಯುವತಿಯರು ಲೋಕವನ್ನೇ ಮರೆಯುತ್ತಿದ್ದಾರೆ. ಅಷ್ಟೇ ಯಾಕೆ ಪ್ರೀತಿಗೋಸ್ಕರ ಮನೆಯನ್ನು ಬಿಟ್ಟು ಹೋಗುವಂತಹ ಪ್ರಕರಣಗಳು ನಡೆಯುತ್ತಿವೆ.
ಲವರ್ಸ್ ಕಾರು ಅಪಘಾತ
ಈಗ ಅಂತಹದ್ದೇ ಘಟನೆ ಹಾವೇರಿಯಲ್ಲಿ ನಡೆದದ್ದು, ಲವ್ ಮ್ಯಾರೇಜ್ ಮಾಡಿಸಲು ಹೋಗ್ತಿದ್ದ ಕಾರು ಅಪಘಾತವಾವಾಗಿದ್ದು, ಮೂವರು ಯುವಕರಿಗೆ ಗಂಭೀರ ಗಾಯಗಳಾಗಿರೋ ಘಟನೆ Haveri ಜಿಲ್ಲೆ ಹೀರೆಕೆರೂರು ತಾಲೂಕಿನ ಚನ್ನಹಳ್ಳಿ ತಾಂಡ ಬಳಿ ನಡೆದಿದೆ.
ಬೆಂಗಳೂರಿನಿಂದ ಹಾವೇರಿಯ ಚನ್ನಹಳ್ಳಿ ಪ್ಲ್ಯಾಟ್ಗೆ ಮೂರು ಯುವಕರು ಹಾಗೂ ಓರ್ವ ಯುವತಿ ಶಿಫ್ಟ್ ಕಾರಿನಲ್ಲಿ ಬಂದಿದ್ರು. ಪ್ರೀತಿ ಮಾಡ್ತಿದ್ದ ಜೋಡಿಗೆ ಮದುವೆ ಮಾಡಿಸುವ ಸಂಭ್ರಮದಲ್ಲಿದ್ದ ಗೆಳೆಯರು ಸ್ಪೀಡ್ ಆಗಿ ಕಾರು ಚಲಾಯಿಸಿದ್ದಾರೆ. ಹಾವೇರಿ ಜಿಲ್ಲೆಯ ಹೀರೆಕೆರೂರು ತಾಲೂಕಿನ ಚನ್ನಹಳ್ಳಿ ತಾಂಡ ಬಳಿ ಕಾರು ಬರ್ತಿದ್ದಂತೆ ಇದ್ದಕ್ಕಿಂದಂತೆ ಪಲ್ಟಿಯಾಗಿದ್ದು, ಸಂಪೂರ್ಣ ಜಖಂ ಗೊಂಡಿದೆ.
ಇದನ್ನು ಓದಿ : 4 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ ಟೀಮ್ ಇಂಡಿಯಾ ಕ್ರಿಕೆಟಿಗ

ಯುವತಿ ಎಸ್ಕೇಪ್
ಅಪಘಾತದಲ್ಲಿ ಇರ್ಪಾನ್ , ಚಂದ್ರು ಮತ್ತು ಗುರುರಾಜ್ ಮೂವರು ಯುವಕರು ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಇನ್ನು ಕಾರು ಅಪಘಾತಕ್ಕೀಡಾಗ್ತಿದ್ದಂತೆ ಯುವತಿ ಎಸ್ಕೇಪ್ ಆಗಿದ್ದು, ಪ್ರೇಮಿಗಳಿಗೆ ಮದುವೆ ಮಾಡಿಸಲು ಬಂದ ಯುವಕರು ಕಕ್ಕಾಬಿಕ್ಕಿಯಾಗಿದ್ದಾರೆ.
ಪ್ರಕರಣ ದಾಖಲು
ಸದ್ಯ ಮೂರು ಗಾಯಾಳುಗಳಿಗೆ ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ದೇ ಈ ಸಂಬಂಧ ಹಿರೇಕೇರೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರೆದಿದೆ.

ಇದನ್ನು ನೋಡಿ : SIDDAGANGA OIL MILL – WHOLESALE ಬೆಲೆಯಲ್ಲಿ ಗಾಣದ ಎಣ್ಣೆ ಲಭ್ಯ!




