ಟೀಂ ಇಂಡಿಯಾ ಆಟಗಾರ Rahul Chahar – ಇಶಾನಿ ವಿಚ್ಛೇದನ.

ಟೀಂ ಇಂಡಿಯಾ ಕ್ರಿಕೆಟಿಗ ರಾಹುಲ್ ಚಹರ್ ತಮ್ಮ ಪತ್ನಿ ಇಶಾನಿ ಜೋಹರ್ ಜೊತೆಗಿನ ನಾಲ್ಕು ವರ್ಷದ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡಿದ್ದು, ವಿಚ್ಛೇದನ ಪಡೆದಿರುವುದಾಗಿ ಘೋಷಿಸಿದ್ದಾರೆ.

Rahul Chahar – ಇಶಾನಿ ವಿಚ್ಛೇದನ
2022ರಲ್ಲಿ ರಾಹುಲ್ ಚಹರ್ ಮತ್ತು ಇಶಾನಿ ಜೋಹರ್ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಇದೀಗ ಇಬ್ಬರೂ ತಮ್ಮ ದಾಂಪತ್ಯ ಜೀವನಕ್ಕೆ ವಿಚ್ಛೇದನ ಪಡೆದುಕೊಂಡಿದ್ದಾರೆ.
ಇದನ್ನು ಓದಿ : ಪೊಲೀಸಪ್ಪನ ಕಾಟಕ್ಕೆ ವಿಧವೆ ಮಹಿಳೆ Suicide? ಡೆತ್ನೋಟ್ನಲ್ಲಿ ಏನಿದೆ?

ಅಧಿಕೃತವಾಗಿ ಅಧ್ಯಾಯ ಕೊನೆಗೊಂಡಿದೆ
ಈ ಬಗ್ಗೆ ಇನ್ಸ್ಟಾಗ್ರಾಮ್ನಲ್ಲಿ ರಾಹುಲ್ ಮಾಹಿತಿ ಹಂಚಿಕೊಂಡಿದ್ದಾರೆ. `ನಾನು ನನ್ನ ಜೀವನ ಅರ್ಥ ಮಾಡಿಕೊಳ್ಳುವ ಮೊದಲೇ ಮದುವೆಯಾಗಿದ್ದೆ. ಆ ಬಳಿಕ ನಿರೀಕ್ಷಿಸದ ಪಾಠಗಳು ಎದುರಾಗಿತ್ತು.
ಕೆಲವು ಸಂಬಂಧಗಳು ಶಾಶ್ವತವಾಗಿ ನಮ್ಮೊಂದಿಗೆ ಉಳಿಯದಿದ್ದರೂ ಕೂಡ ಆ ಸಂಬಂಧಗಳಿಂದ ಕಲಿತ ಪಾಠ ಎಂದಿಗೂ ನಮ್ಮೊಂದಿಗೆ ಇರುತ್ತದೆ. ನಾನು ಬುದ್ಧಿವಂತವಾಗಿ, ಹೆಚ್ಚು ಅರಿವಿನೊಂದಿಗೆ ಜೀವನ ಮುಂದುವರಿಸಲು ಇಷ್ಟಪಡುತ್ತೇನೆ. ಈಗ ಅಧಿಕೃತವಾಗಿ ಅಧ್ಯಾಯ ಕೊನೆಗೊಂಡಿದೆ’ ಎಂದು ಬರೆದುಕೊಂಡಿದ್ದಾರೆ.

ಇದನ್ನು ನೋಡಿ : ತುಮಕೂರು ಗ್ರಾಮಾಂತರದಲ್ಲಿ ನಿಖಿಲ್ ಅಬ್ಬರ ಹೇಗಿದೆ ಗೊತ್ತಾ ಕಾರ್ಯಕರ್ತರ ಸಿದ್ದತೆ




