
ಪೊಲೀಸಪ್ಪನ ಕಾಟಕ್ಕೆ ಬೇಸತ್ತ ವಿಧವೆ ಮಹಿಳೆಯೊಬ್ಬಳು ವಾಟ್ಸಪ್ನಲ್ಲಿ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿ ನಡೆದಿದೆ.
ಇಬ್ಬರು ಹೆಣ್ಣು ಮಕ್ಕಳು ಅನಾಥ
ಸಿದ್ದಾಪುರ ಗ್ರಾಮದ ಸ್ವಾತಿ ಎಂಬ ವಿಧವಾ ಮಹಿಳೆ, ಗಂಡನ ಬಳಿಕ ಆಕೆಯೂ ನೇಣಿಗೆ ಕೊರಳೊಡ್ಡಿ Suicide ಮಾಡಿಕೊಂಡಿದ್ದಾರೆ. ಅಪ್ಪ- ಅಮ್ಮನ ಸಾವಿನಿಂದ ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದು, ಮಕ್ಕಳ ಆಕ್ರಂದನ ಮುಗಿಲು ಮುಟ್ಟಿತ್ತು.

ಜೀವನದಲ್ಲಿ ಜಿಗುಪ್ಸೆಗೊಂಡು Suicide
ಮೃತ ಸ್ವಾತಿಗೆ ಮದುವೆ ಆಗಿ ಸುಮಾರು ಏಳು ವರ್ಷ ಆಗಿದ್ದು, ಇಬ್ಬರು ಮುದ್ದಾದ ಹೆಣ್ಣು ಮಕ್ಕಳು ಇದ್ದರು. ಸುಖ ಸಂಸಾರ ನಡೆಸುತ್ತಿದ್ದ ಸ್ವಾತಿ ಹಾಗೂ ಜಗದೀಶ್ ಬಾಳಲ್ಲಿ ವಿಧಿ ಕ್ರೂರಿಯಾಗಿದ್ದು, ಒಂದು ವಾರದ ಹಿಂದೆಯಷ್ಟೇ ಅಂದ್ರೆ ಫೆಬ್ರವರಿ 14 ರಂದು ಸ್ವಾತಿಯ ಗಂಡ ಜಗದೀಶ್, ಮದ್ಯವಸ್ಯನ ಮತ್ತು ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು.
ಗಂಡ ಇಲ್ಲದನ್ನೇ ಬಂಡವಾಳ ಮಾಡಿಕೊಂಡ ತೀರ್ಥಹಳ್ಳಿ ಪೊಲೀಸ್ ಠಾಣೆಯ ಸಿಬ್ಬಂದಿ ಮೋಹನ್ ಫೇಸ್ಬುಕ್ನಲ್ಲಿ ಸ್ವಾತಿಗೆ ಕೆಟ್ಟ ಕೆಟ್ಟದಾಗಿ ಮೆಸೇಜ್ ಮಾಡ್ತಿದ್ದ. ಹೀಗಾಗಿ ಸ್ವಾತಿ ಪೊಲೀಸ್ ಮೋಹನ್ ಅಕೌಂಟ್ನನ್ನು ಬ್ಲಾಕ್ ಮಾಡಿದ್ದರು.
ಇದಕ್ಕೆ ಕೋಪಗೊಂಡ ಪೊಲೀಸಪ್ಪ ಬೇರೆ ಅಕೌಂಟ್ನಿಂದ ಸ್ವಾತಿ ಬಗ್ಗೆ ಅಪಪ್ರಚಾರ ಮಾಡಿದ್ದ. ಇದರಿಂದ ಪೊಲೀಸಪ್ಪನ ಕಾಟ ತಾಳಲಾರದೇ ಸ್ವಾತಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಲಾಗಿದೆ.
ಇದನ್ನು ಓದಿ : ದಾಖಲೆಯ ವೀವ್ಸ್ ಗಳಿಸಿದ ‘Toxic’ನ ರಣರೋಚಕ ಟೀಸರ್

Sorry ಅಮ್ಮ
ಇನ್ನು ಸ್ವಾತಿ ಆತ್ಮಹತ್ಯೆಗೂ ಮುನ್ನ ವಾಟ್ಸಪ್ನಲ್ಲಿ Death Note ಬರೆದಿಟ್ಟಿದ್ದು, Sorry ಅಮ್ಮ ನನ್ನ ಬಗ್ಗೆ ಇಲ್ಲದೆ ಇರುವುದು ಎಲ್ಲಾ ಕೆಟ್ಟದಾಗಿ ಜನಗಳ ಹತ್ತಿರ ಮೋಹನ್ ಹೇಳಿದ್ದಾರೆ.
ನನಗೆ ತಡಿಯುವುದಕ್ಕೆ ಆಗುತ್ತಿಲ್ಲ. ನನ್ನ ಗಂಡ ಸತ್ತಿದು ಫುಲ್ ಡ್ರಿಂಕ್ಸ್ ಮಾಡಿ. ಈ ಮೋಹನ್ ಎನ್ನುವ ಪೊಲೀಸ್ ನನ್ನ ಬಗ್ಗೆ ಕೆಟ್ಟದಾಗಿ ಜನಗಳ ಹತ್ತಿರ ಏನೇನೋ ಹೇಳಿರುವುದು ನನಗೆ ಬೆಳಿಗ್ಗೆ ವಿಷಯ ಗೊತಾಯ್ತು.
ಅವರು ಯಾರು ಅಂತಾನೆ ನಂಗೆ ಗೊತ್ತಿಲ್ಲ. ಫೇಸ್ಬುಕ್ನಲ್ಲಿ ಮೆಸೇಜ್ ಮಾಡಿದ್ದರು. ನಾನು ಬ್ಲಾಕ್ ಮಾಡಿದೆ. ಅದೇ ಸಿಟ್ಟಿಗೆ ಏನೇನೋ ಹೇಳಿದ್ದಾರೆ.
ನನ್ನ ಮಕ್ಕಳನ್ನ ಚೆನ್ನಾಗಿ ನೋಡಿಕೊಳ್ಳಿ. ದಯವಿಟ್ಟು ಸ್ವಾರಿ ಅಮ್ಮ ಎಂದು ಸ್ವಾತಿ ಡೆತ್ ನೋಟ್ ಬರೆದಿಟ್ಟು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ.

ಟಾರ್ಚರ್ ಕೊಟ್ಟ ಪೋಲಿಸ್ ವಿರುದ್ಧ ಕ್ರಮಕ್ಕೆ ಆಗ್ರಹ
ತಂದೆ- ತಾಯಿ ಇಬ್ಬರನ್ನು ಕಳೆದುಕೊಂಡ ಇಬ್ಬರು ಹೆಣ್ಣು ಮಕ್ಕಳು ಅನಾಥರಾಗಿದ್ದು, ಕುಟುಂಬಸ್ಥರ ಆಕ್ರಂಧನ ಮುಗಿಲು ಮುಟ್ಟಿತ್ತು. ಸದ್ಯ ಮೃತಳ ಹೆತ್ತವರುಟಾರ್ಚರ್ ಕೊಟ್ಟ ಪೋಲಿಸ್ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ.

ಇದನ್ನು ನೋಡಿ : ಮುಸ್ಲಿಂ ಯುವಕರಿಂದ ನೈತಿಕ ಪೊಲೀಸ್ ಗಿರಿ ದಲಿತ ಕ್ರಿಶ್ಚಿಯನ್ ಬಾಲಕನ ಮೇಲೆ ಹಲ್ಲೆ

