Mantralaya ದಲ್ಲಿ ಗುರುರಾಘವೇಂದ್ರ ಸ್ವಾಮಿಗಳ ಗುರುವೈಭವೋತ್ಸವ ಅಂಗವಾಗಿ ಅದ್ದೂರಿಯಾಗಿ ತೆಪ್ಪೋತ್ಸವ ನೆರವೇರಿತು.

Mantralaya : ಸಾವಿರಾರು ಭಕ್ತರ ಸಮ್ಮುಖದಲ್ಲಿ ಧಾರ್ಮಿಕ ಕಾರ್ಯಕ್ರಮಗಳು, ರಥೋತ್ಸವ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿವೆ. ಫೆಬ್ರವರಿ 24ರಂದು 431ನೇ ರಾಯರ ವರ್ಧಂತಿ ಉತ್ಸವ ನಡೆಯಲಿದೆ.
ಭಕ್ತಿಭಾವ ಮತ್ತು ಧಾರ್ಮಿಕ ಉತ್ಸಾಹದ ನಡುವೆ ಮಂತ್ರಾಲಯ ನಲ್ಲಿ ಗುರುರಾಯರ ಗುರುವೈಭವೋತ್ಸವ ಭಾರೀ ಸಂಭ್ರಮದಿಂದ ನಡೆಯುತ್ತಿದೆ. ಮಠದ ಅಂಗಳದಲ್ಲಿರುವ ಪುಷ್ಕರಣಿಯಲ್ಲಿ ರಾತ್ರಿ ವೇಳೆ ನಡೆದ ತೆಪ್ಪೋತ್ಸವ ಭಕ್ತರ ಮನಸೆಳೆದ ಪ್ರಮುಖ ಆಕರ್ಷಣೆಯಾಯಿತು.

ಗುರುರಾಯರ ಪಟ್ಟಾಭಿಷೇಕ ಮಹೋತ್ಸವದ ಅಂಗವಾಗಿ ಆಯೋಜಿಸಿದ್ದ ತೆಪ್ಪೋತ್ಸವದಲ್ಲಿ ಸಾವಿರಾರು ಭಕ್ತರು ಭಾಗವಹಿಸಿದರು. ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಪುಷ್ಕರಣಿಯಲ್ಲಿ ಉತ್ಸವ ಮೂರ್ತಿ ಪ್ರಹ್ಲಾದರಾಯರ ಮೆರವಣಿಗೆ ನಡೆಸಲಾಗಿದ್ದು, ಭಕ್ತರು ಭಕ್ತಿಭಾವದಿಂದ ಪೂಜೆ ಸಲ್ಲಿಸಿದರು.
ಗುರುವೈಭವೋತ್ಸವದಿಂದ ಕಳೆಕಟ್ಟಿದ ಮಂತ್ರಾಲಯ
ಭಕ್ತರ ಆರಾಧ್ಯರಾದ ರಾಘವೇಂದ್ರ ಸ್ವಾಮಿ ಅವರ ಗುರುವೈಭವೋತ್ಸವ ಹಿನ್ನೆಲೆ ಮಂತ್ರಾಲಯ ಸಂಪೂರ್ಣ ಧಾರ್ಮಿಕ ವಾತಾವರಣದಲ್ಲಿ ಮಿಂಚುತ್ತಿದೆ. ಬೆಳಗ್ಗೆಯಿಂದಲೇ ವಿಶೇಷ ಪೂಜೆ, ಧಾರ್ಮಿಕ ವಿಧಿವಿಧಾನಗಳು ಹಾಗೂ ಪ್ರವಚನಗಳು ನಡೆಯುತ್ತಿವೆ.
ಇದನ್ನು ಓದಿ : `Toxic’ ನ ರಣರೋಚಕ ಟೀಸರ್ ರಿಲೀಸ್ – ದ್ವಿಪಾತ್ರದಲ್ಲಿ ಕಾಣಿಸಿಕೊಂಡ ಯಶ್

ಇನ್ನೊಂದೆಡೆ ಸಂಜೆ ವೇಳೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳು ಭಕ್ತರನ್ನು ರಂಜಿಸುತ್ತಿವೆ. ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಗಣ್ಯರನ್ನು ಮಠದ ವತಿಯಿಂದ ಸನ್ಮಾನಿಸಲಾಗುತ್ತಿದೆ. ಇದರೊಂದಿಗೆ ರಥೋತ್ಸವ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ಭಕ್ತರ ಗಮನ ಸೆಳೆಯುತ್ತಿವೆ.
ಫೆಬ್ರವರಿ 24ರಂದು 431ನೇ ರಾಯರ ವರ್ಧಂತಿ ಉತ್ಸವ
ಫೆಬ್ರವರಿ 18ರಿಂದ ಆರಂಭವಾದ ಗುರುವೈಭವೋತ್ಸವವು ಫೆಬ್ರವರಿ 24ರವರೆಗೆ ಏಳು ದಿನಗಳ ಕಾಲ ನಡೆಯಲಿದೆ. ಇದೇ ದಿನ 431ನೇ ರಾಯರ ವರ್ಧಂತಿ ಉತ್ಸವ ಭಕ್ತಿಭಾವದಿಂದ ಆಚರಿಸಲಾಗುತ್ತದೆ ಎಂದು ಮಠದ ಮೂಲಗಳು ತಿಳಿಸಿವೆ.
ಇದನ್ನು ನೋಡಿ : ತುಮಕೂರು ಜಿಲ್ಲಾಸ್ಪತ್ರೆಯಲ್ಲಿ ರೋಗಿಗಳು ಪರದಾಟ- ಸೇವೆ ಸಿಗದೇ ಕಂಗಾಲಾದ್ರು




