Bengaluru ರಾಜ್ಕುಮಾರ್ ರಸ್ತೆಯಲ್ಲಿ 27 ವರ್ಷದ ಯುವತಿ ಯೋಗೇಶ್ವರಿ ಮೃತಪಟ್ಟಿದ್ದಾರೆ..

Bengaluru ನಗರದಲ್ಲಿ ವೇಗವಾಗಿ ಬಂದ ಬುಲೆಟ್ ಬೈಕ್ ಡಿಕ್ಕಿ ಹೊಡೆದ ಪರಿಣಾಮ 27 ವರ್ಷದ ಯುವತಿ ಮೃತಪಟ್ಟಿರುವ ದುರ್ಘಟನೆ ನಡೆದಿದೆ. ಈ ಘಟನೆ ರಾಜ್ಕುಮಾರ್ ರಸ್ತೆಯ ಎಚ್ಡಿಎಫ್ಸಿ ಬ್ಯಾಂಕ್ ಸಮೀಪ ನಿನ್ನೆ ಮಧ್ಯಾಹ್ನ ಸುಮಾರು 12 ಗಂಟೆಗೆ ಸಂಭವಿಸಿದೆ.
ಮೃತರನ್ನು ಯೋಗೇಶ್ವರಿ (27) ಎಂದು ಗುರುತಿಸಲಾಗಿದೆ. ಲಗ್ಗೆರೆ ಬಳಿಯ ಕೆಂಪೇಗೌಡ ಲೇಔಟ್ ನಿವಾಸಿಯಾಗಿದ್ದ ಅವರು, ತಮ್ಮ ಕೆಲಸದ ಸ್ಥಳದ ಸಮೀಪ ಸ್ನೇಹಿತರೊಂದಿಗೆ ಊಟಕ್ಕೆ ತೆರಳಲು ರಸ್ತೆ ದಾಟುತ್ತಿದ್ದರು.
ಆ ವೇಳೆ ಅತಿ ವೇಗದಲ್ಲಿ ಬಂದ ಬುಲೆಟ್ ಬೈಕ್ ಸವಾರ ಡಿಕ್ಕಿ ಹೊಡೆದಿದ್ದಾನೆ.
ಇದನ್ನು ಓದಿ : ಖ್ಯಾತ ರಿಯಾಲಿಟಿ ಶೋ ಸ್ಪರ್ಧಿಯ ಖಾಸಗಿ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ಮೇಲ್..!

ಆಸ್ಪತ್ರೆಗೆ ದಾಖಲಿಸಿದರೂ ಫಲಕಾರಿಯಾಗಲಿಲ್ಲ
ಅಪಘಾತದ ರಭಸಕ್ಕೆ ಯೋಗೇಶ್ವರಿ ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಿಸದೆ ಅವರು ಕೊನೆಯುಸಿರೆಳೆದಿದ್ದಾರೆ.

ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆ ಗೆ ರವಾನಿಸಲಾಗಿದೆ.
ಘಟನಾ ಸ್ಥಳಕ್ಕೆ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೈಕ್ ಸವಾರನ ಪತ್ತೆಗಾಗಿ ತನಿಖೆ ಮುಂದುವರಿಸಿದ್ದಾರೆ.
ಇದನ್ನು ನೋಡಿ : ನಟ ಯಶ್ ತಾಯಿಗೆ ಮೊದಲ ಜಯ ಜಾಗದ ವಿಚಾರಕ್ಕೆ ಸ್ಟೇ ಕೊಟ್ಟ ಕೋರ್ಟ್




