
BENGALURU : ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ತಮ್ಮ ಪ್ರೀತಿಯ ನಿರ್ದೇಶಕ ವಿಜಯ್ ಕಾರ್ತಿಕೇಯನ್ ಅವರಿಗೆ ಬೆಲೆ ಬಾಳುವ ಐಷಾರಾಮಿ ಕಾರು ‘ಸ್ಕೋಡಾ ಕೈಲಾಕ್’ (Skoda Kodiaq) ಉಡುಗೊರೆ ನೀಡಿದ್ಧಾರೆ.
ವಿಜಯ್ ಕಾರ್ತಿಕೇಯನ್ ನಿರ್ದೇಶನ ಮಾಡಿದ ಮ್ಯಾಕ್ಸ್ ಚಿತ್ರ, ಕಿಚ್ಚ ಸುದೀಪ್ ಅವರಿಗೆ ಭಾರೀ ಯಶಸ್ಸು ತಂದುಕೊಟ್ಟಿತ್ತು. ಈ ಯಶಸ್ಸನ್ನು ಮೆಚ್ಚಿದ ಸುದೀಪ್, ತಮ್ಮ ನಿವಾಸಕ್ಕೆ ನಿರ್ದೇಶಕ ನನ್ನು ಆಹ್ವಾನಿಸಿ, ಸರ್ಪ್ರೈಸ್ ಉಡುಗೊರೆಯಾಗಿ ಕಾರನ್ನು ಕೊಟ್ಟರು.
ಸ್ಕೋಡಾ ಕಂಪನಿಯ ‘ಕಾರ್ಬನ್ ಸ್ಟೀಲ್’ ಕಪ್ಪು ಬಣ್ಣದ ಕೈಲಾಕ್ ಕಾರನ್ನು ವಿಜಯ್ ಕಾರ್ತಿಕೇಯನ್ ಅವರಿಗೆ ಗಿಫ್ಟ್ ಆಗಿ ನೀಡಲ್ಪಟ್ಟಿದೆ. ಈ ಕಾರಿನ ಬೆಸಿಕ್ ಮೈಸೂರಿನ ಶೋರೂಂ ಬೆಲೆ ಸದ್ಯಕ್ಕೆ ₹9.10 ಲಕ್ಷವಾಗಿದ್ದು, ಹೆಚ್ಚು ಆಪ್ಷನ್ಗಳ ಜೊತೆಗೆ ಇದೊಂದು ಐಷಾರಾಮಿ ಕಾರಾಗಿದೆ.
ಇದು ವಿಜಯ್ ಕಾರ್ತಿಕೇಯನ್ ಅವರ ಮೊದಲ ಸಿನಿಮಾ ಆದರೂ, ಕಿಚ್ಚನಿಗೆ ತುಂಬಾ ಇಷ್ಟವಾಗುವಂತ ಹ ನಿರ್ದೇಶನ ನೀಡಿದ ಕಾರಣ, ಈ ಗಿಫ್ಟ್ ಮೂಲಕ ಸುದೀಪ್ ತಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿದ್ದಾರೆ. ಸದ್ಯ ‘ಮಾರ್ಕ್’ ಎಂಬ ಹೊಸ ಚಿತ್ರವೂ ನಿರ್ದೇಶಕ ವಿಜಯ್ ಅವರಿಂದ ಬರುತ್ತಿದ್ದು, ಇದಲ್ಲಿಯೂ ಸುದೀಪ್ ಪ್ರಮುಖ ಪಾತ್ರದಲ್ಲಿ ಕಾಣಿಸಲಿ ದ್ದಾರೆ.




