
GADAG NEWS : ಪೊಲೀಸ್ ಜೀಪ್ಗೆ ಅಡ್ಡಲಾಗಿ ಬಂದ ಕತ್ತೆಕಿರುಬಕ್ಕೆ (Hyena) ಡಿಕ್ಕಿ ಹೊಡೆದು, ಜೀಪ್ ಕಂದಕಕ್ಕೆ ಉರುಳಿದ ಪರಿಣಾಮ ಮೂವರು ಪೊಲೀಸ್ ಅಧಿಕಾರಿಗಳಿಗೆ ಗಾಯಗೊಂಡಿದ್ದರು. ಇದೀಗ ಗಂಭೀರ ಗಾಯಗೊಂಡಿದ್ದ ಎಎಸ್ಐ (ASI) ಮೃತಪಟ್ಟಿದ್ದಾರೆ..
ಸೆಪ್ಟೆಂಬರ್ 23ರಂದು ಬೆಳಿಗ್ಗೆ ಗದಗ ಜಿಲ್ಲೆಯ ಲಕ್ಷ್ಮೇಶ್ವರ ಸಮೀಪದಲ್ಲಿ, ಸಮ್ರಾಟ್ ಗಣೇಶ ವಿಸರ್ಜನೆ ಬಂದೋಬಸ್ತ್ ಕಾರ್ಯಾಚರಣೆಯಿಂದ ವಾಪಾಸಾಗುತ್ತಿದ್ದ ಪೊಲೀಸ್ ಅಧಿಕಾರಿ ಗಳ ವಾಹನಕ್ಕೆ ಸೊರಟೂರ ಗ್ರಾಮದ ಬಳಿ ಅಡ್ಡಗದ್ದಲವಾಗಿ ಕತ್ತೆಕಿರುಬಕ್ಕೆ (ಹೈನಾ) ಡಿಕ್ಕಿ ಹೊಡೆದಿತ್ತು. ಈ ಡಿಕ್ಕಿಯ ಪರಿಣಾಮವಾಗಿ ಪೊಲೀಸ್ ಜೀಪ್ ನಿಯಂತ್ರಣ ತಪ್ಪಿ ಕಂದಕಕ್ಕೆ ಉರುಳಿತ್ತು. ಈ ಅಪಘಾತದಲ್ಲಿ ಇನ್ಸ್ ಪೆಕ್ಟರ್ ಉಮೇಶ್ ಗೌಡ ಪಾಟೀಲ್, ಎಎಸ್ಐ ಕಾಶಿಮ್ ಸಾಬ್ ಮತ್ತು ಚಾಲಕ ಓಂನಾಥ್ ಅವರಿಗೆ ಗಾಯಗಳು ಉಂಟಾಗಿದ್ದವು.
ಇನ್ನು ಗಾಯಾಳುಗಳನ್ನು ತಕ್ಷಣ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದ ಎಎಸ್ಐ ಕಾಶಿಮ್ ಸಾಬ್ ಅವರು ಚಿಕಿತ್ಸೆ ಫಲಕಾರಿ ಯಾಗದೇ ಇಂದು ಮೃತ ಪಟ್ಟಿದ್ದಾರೆ. ಅವರು ನಿವೃತ್ತಿಗೆ ಕೇವಲ 5 ತಿಂಗಳು ಮಾತ್ರ ಬಾಕಿಯಾಗಿತ್ತು.




