Gubbi : ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ – ಬೆಳ್ಳಂ ಬೆಳಗ್ಗೆ ಶವ ಕಂಡು ಬೆಚ್ಚಿ ಬಿದ್ದ ಪ್ರಯಾಣಿಕರು.

ಗುಬ್ಬಿ ತಾಲೂಕಿನ ನಿಟ್ಟೂರು ಬಸ್ ನಿಲ್ದಾಣದಲ್ಲಿ ಇಂದು ವ್ಯಕ್ತಿಯೋರ್ವನ ಶವ ಪತ್ತೆಯಾಗಿದ್ದು, ಬೆಳ್ಳಂ ಬೆಳಗ್ಗೆ ಪ್ರಯಾಣಿಕರು ಬಸ್ ನಿಲ್ದಾಣದಲ್ಲಿ ಶವ ಕಂಡು ಬೆಚ್ಚಿ ಬಿದ್ದಿದ್ದಾರೆ. ಇನ್ನು ಬಸ್ ನಿಲ್ದಾಣದಲ್ಲಿ ಕೆಲ ಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ಇದನ್ನು ಓದಿ : ಮನೆಯ ಮೇಲ್ಛಾವಣಿ ತೆಗೆದು ಕಳ್ಳತನ – ಕಳ್ಳರ ಕೃತ್ಯಕ್ಕೆ ಬೆಚ್ಚಿಬಿದ್ದ ಗ್ರಾಮಸ್ಥರು.!

ಬಸ್ ನಿಲ್ದಾಣದಲ್ಲಿ ವ್ಯಕ್ತಿಯ ಶವ ಪತ್ತೆ – Gubbi
ಇನ್ನು ನಿಟ್ಟೂರು ಬಸ್ ನಿಲ್ದಾಣದಲ್ಲಿ ಶವವಾಗಿ ಪತ್ತೆಯಾಗಿರುವ ವ್ಯಕ್ತಿಯನ್ನು , Gubbi ತಾಲೂಕಿನ ನಿಟ್ಟೂರು ಹೋಬಳಿಯ ಶಿವಸಂದ್ರ ಗ್ರಾಮದ , ಸುಮಾರು 70 ವರ್ಷದ ಕಲ್ಲೇಶಯ್ಯ ಎಂದು ಹೇಳಲಾಗುತ್ತಿದೆ.
ಮದ್ಯ ವ್ಯಸನಿಯಾಗಿದ್ದ ಕಲ್ಲೇಶಯ್ಯ ಪ್ರತಿನಿತ್ಯ ನಿಟ್ಟೂರು ಬಸ್ ನಿಲ್ದಾಣ ಸೇರಿದಂತೆ ಹಲವು ಕಡೆಗಳಲ್ಲಿ ಸಂಚಾರ ಮಾಡುತ್ತಿದ್ದು , ಅಲ್ಲಿಯೇ ತಂಗುತ್ತಿದ್ದ ಎನ್ನಲಾಗಿದೆ.ಈತನ ಕುಟುಂಬದವರು ಬೆಂಗಳೂರಿನಲ್ಲಿ ವಾಸವಾಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದ್ದು ಇನ್ನೂ ಈತನ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ.

ಗುಬ್ಬಿ ಸಾರ್ವಜನಿಕ ಆಸ್ಪತ್ರೆಗೆ ಶವ ರವಾನೆ
ಇನ್ನು ಶವ ಪತ್ತೆಯ ವಿಷಯ ತಿಳಿದ ಕೂಡಲೇ ಗುಬ್ಬಿ ಪೊಲೀಸರು ಸ್ಥಳಕ್ಕೆ ದಾವಿಸಿದ್ದು, ಮೃತನ ಶವವನ್ನು ಗುಬ್ಬಿ ಸಾರ್ವಜನಿಕ ಆಸ್ಪತೆಗೆ ರವಾನಿಸಿದ್ದು,ಮುಂದಿನ ಕ್ರಮಕ್ಕೆ ಮುಂದಾಗಿದ್ದಾರೆ.
ಇದನ್ನು ನೋಡಿ : BESCOM ಅಧಿಕಾರಿಗಳಿಂದ ಎಣ್ಣೆ PARTY – ಪಾರ್ಟಿ ಮಾಡಿ ಪೈಲ್ ಚೆಕ್ ಮಾಡಿದ್ರು




