ಮಂಚೇನಹಳ್ಳಿ ತಾಲೂಕಿನ ಗಿಡಿಗಾನಹಳ್ಳಿಯಲ್ಲಿ ಮನೆ ತೆರವು ವಿವಾದ ಹಿನ್ನೆಲೆ ಡೆತ್ನೋಟ್ ಬರೆದು ವ್ಯಕ್ತಿಯೊಬ್ಬ Suicide ಗೆ ಯತ್ನಿಸಿದ ಘಟನೆ ನಡೆದಿದೆ.

ಜಮೀನು ಮತ್ತು ಮನೆ ತೆರವು ವಿಚಾರವಾಗಿ ಮನಸ್ತಾಪಗೊಂಡ ವ್ಯಕ್ತಿಯೊಬ್ಬ ಡೆತ್ನೋಟ್ ಬರೆದು Suicide ಗೆ ಯತ್ನಿಸಿದ ಘಟನೆ ಬೆಳಕಿಗೆ ಬಂದಿದೆ. ಈ ಘಟನೆ ಮಂಚೇನಹಳ್ಳಿ ತಾಲೂಕಿನ ಗಿಡಿಗಾನಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗಿಡಿಗಾನಹಳ್ಳಿ ಗ್ರಾಮದ ನಿವಾಸಿ ರಾಮಕೃಷ್ಣ ತಮ್ಮ ಜಮೀನಿನಲ್ಲಿ ಸಾಲ ಮಾಡಿಕೊಂಡು ಕನಸಿನ ಮನೆ ಕಟ್ಟಿಸಿದ್ದರು. ಆದರೆ ಆ ಮನೆಯನ್ನು ತೆರವುಗೊಳಿಸಲು ಅಧಿಕಾರಿಗಳು ಮುಂದಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಸ್ಥಳೀಯ ತಹಶೀಲ್ದಾರ್ ಪೂರ್ಣಿಮಾ ಅವರ ಹೆಸರು ಡೆತ್ನೋಟ್ನಲ್ಲಿ ಉಲ್ಲೇಖಿಸಿ, ಮಾತ್ರೆಗಳನ್ನು ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎನ್ನಲಾಗಿದೆ.
ವ್ಯಕ್ತಿಯ ಆರೋಪದಂತೆ, ಮನೆ ತೆರವುಗೊಳಿಸುವ ಬಗ್ಗೆ ಗ್ಯಾರಂಟಿ ನೀಡಲಾಗಿದ್ದು, ಅಲ್ಲದೆ ಯಾವುದೇ ಪೂರ್ವ ನೋಟಿಸ್ ಇಲ್ಲದೆ ಬೆಸ್ಕಾಂ ಮೂಲಕ ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಲಾಗಿದೆ ಎಂದು ಹೇಳಲಾಗಿದೆ. ಇದರಿಂದ ಮನೆಯನ್ನು ಹಂತ ಹಂತವಾಗಿ ಧ್ವಂಸಗೊಳಿಸುತ್ತಾರೆ ಎಂಬ ಭಯದಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರೆಂದು ತಿಳಿದು ಬಂದಿದೆ.
ಇದನ್ನು ಓದಿ : ನನ್ನ ಮದುವೆ April 1ಕ್ಕೆ..! – ವದಂತಿಗಳಿಗೆ ತೆರೆ ಎಳೆದ Mrunal Thakur ..!!

ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ
ಆತ್ಮಹತ್ಯೆಗೆ ಯತ್ನಿಸಿದ ನಂತರ ತೀವ್ರ ಅಸ್ವಸ್ಥಗೊಂಡಿದ್ದ ರಾಮಕೃಷ್ಣ ಅವರನ್ನು ಸ್ಥಳೀಯರು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಪ್ರಸ್ತುತ ಅವರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಘಟನೆ ಕುರಿತು ಹೆಚ್ಚಿನ ತನಿಖೆ ನಡೆಯುತ್ತಿದೆ. ಮೇಲಾಧಿಕಾರಿಗಳು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುತ್ತಾರೆಯೇ ಎಂಬುದನ್ನು ಸ್ಥಳೀಯರು ಕಾದುನೋಡುತ್ತಿದ್ದಾರೆ.
ಇದನ್ನು ನೋಡಿ : ATM ನಲ್ಲಿ ಹಣ ದೋಚಲು ಕಳ್ಳರು ಮಾಡಿದ ಪ್ಲಾನ್ ಗೆ ಪೊಲೀಸರೇ ಶಾಕ್




