Kitchen Recipe : ಚೈನೀಸ್ ಸ್ಟೈಲ್ ಸ್ಪೈಸಿ ಟಚ್ನೊಂದಿಗೆ ತಯಾರಿಸುವ ಈ ಕ್ಯಾಪ್ಸಿಕಂ ಎಗ್ ಚಿಲ್ಲಿ, ಸೈಡ್ ಡಿಶ್ ಆಗಿಯೂ ಸ್ಟಾರ್ಟರ್ ಆಗಿಯೂ ಸೂಪರ್ ಆಗಿರುತ್ತದೆ. ಕಡಿಮೆ ಸಮಯದಲ್ಲಿ ಸುಲಭವಾಗಿ ಮಾಡಬಹುದಾದ ರೆಸಿಪಿ ಇದು.

Kitchen Recipe : ಬೇಕಾಗುವ ಪದಾರ್ಥಗಳು
- ಮೊಟ್ಟೆ – 4 (ಬೇಯಿಸಿ ಸಿಪ್ಪೆ ತೆಗೆದಿದ್ದು)
- ಎಣ್ಣೆ – ಕರಿಯಲು ಅಗತ್ಯವಿರುವಷ್ಟು
- ಬೆಳ್ಳುಳ್ಳಿ – 1 ಚಮಚ (ಸಣ್ಣಗೆ ಕತ್ತರಿಸಿದ)
- ಶುಂಠಿ – 1 ಚಮಚ (ಸಣ್ಣಗೆ ಕತ್ತರಿಸಿದ)
- ಈರುಳ್ಳಿ – 1 (ಸಣ್ಣಗೆ ಕತ್ತರಿಸಿದ)
- ಕ್ಯಾಪ್ಸಿಕಂ – 1 (ಸಣ್ಣಗೆ ಕತ್ತರಿಸಿದ)
- ಉಪ್ಪು – ರುಚಿಗೆ ತಕ್ಕಷ್ಟು
- ಸಕ್ಕರೆ – ಸ್ವಲ್ಪ
- ಖಾರದ ಪುಡಿ – 2 ಚಮಚ
- ಕಾಳುಮೆಣಸಿನ ಪುಡಿ – 1 ಚಮಚ
ಬ್ಯಾಟರ್ಗೆ:
- ಮೈದಾ – ½ ಬಟ್ಟಲು
- ಕಾರ್ನ್ ಫ್ಲೋರ್ – ½ ಬಟ್ಟಲು
- ಬೇಕಿಂಗ್ ಪೌಡರ್ – 1 ಟೀ ಚಮಚ
ಸಾಸ್ ಮಿಶ್ರಣಕ್ಕೆ:
- ಟೊಮೆಟೊ ಕೆಚಪ್ – 3 ಚಮಚ
- ಸೋಯಾ ಸಾಸ್ – 1 ಚಮಚ
- ವಿನೇಗರ್ – 1½ ಚಮಚ
- ಗ್ರೀನ್ ಚಿಲ್ಲಿ ಸಾಸ್ – 2 ಚಮಚ
ಮಾಡುವ ವಿಧಾನ
1: ಸಾಸ್ ಮಿಶ್ರಣ ತಯಾರಿ
ಮೊದಲು ಒಂದು ಬೌಲ್ಗೆ ಟೊಮೆಟೊ ಕೆಚಪ್, ಸೋಯಾ ಸಾಸ್, ವಿನೇಗರ್ ಮತ್ತು ಗ್ರೀನ್ ಚಿಲ್ಲಿ ಸಾಸ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಪಕ್ಕಕ್ಕೆ ಇಟ್ಟುಕೊಳ್ಳಿ.
2: ಮೊಟ್ಟೆ ಫ್ರೈ ಮಾಡಲು ಬ್ಯಾಟರ್
ಇನ್ನೊಂದು ಬೌಲ್ನಲ್ಲಿ ಮೈದಾ, ಕಾರ್ನ್ ಫ್ಲೋರ್, ಬೇಕಿಂಗ್ ಪೌಡರ್ ಮತ್ತು ಉಪ್ಪು ಸೇರಿಸಿ. ನಂತರ ಸ್ವಲ್ಪಸ್ವಲ್ಪವಾಗಿ ನೀರು ಹಾಕಿ ದಪ್ಪ ಪೇಸ್ಟ್ ತಯಾರಿಸಿ.
3: ಮೊಟ್ಟೆ ಫ್ರೈ
ಬೇಯಿಸಿದ ಮೊಟ್ಟೆಗಳನ್ನು ಎರಡು ಭಾಗಗಳಾಗಿ ಕತ್ತರಿಸಿ ಬ್ಯಾಟರ್ನಲ್ಲಿ ಅದ್ದಿ ಬಿಸಿ ಎಣ್ಣೆಯಲ್ಲಿ ಹೊಂಬಣ್ಣ ಬರುವವರೆಗೆ ಕರಿಯಿರಿ.
4: ಮಸಾಲಾ ತಯಾರಿ
ಪ್ಯಾನ್ನಲ್ಲಿ 1 ಟೀ ಚಮಚ ಎಣ್ಣೆ ಬಿಸಿ ಮಾಡಿ. ಮೊದಲು ಬೆಳ್ಳುಳ್ಳಿ ಮತ್ತು ಶುಂಠಿ ಹಾಕಿ 1 ನಿಮಿಷ ಫ್ರೈ ಮಾಡಿ. ನಂತರ ಈರುಳ್ಳಿ ಸೇರಿಸಿ ಕೆಂಪಾಗುವವರೆಗೆ ಹುರಿಯಿರಿ. ಬಳಿಕ ಕ್ಯಾಪ್ಸಿಕಂ ಸೇರಿಸಿ 2 ನಿಮಿಷ ಕೈಯಾಡಿಸಿ.
5: ಅಂತಿಮ ಮಿಕ್ಸ್
ಇದಕ್ಕೆ ಸಾಸ್ ಮಿಶ್ರಣ, ಖಾರದ ಪುಡಿ, ಕಾಳುಮೆಣಸಿನ ಪುಡಿ, ಉಪ್ಪು ಮತ್ತು ಸಕ್ಕರೆ ಸೇರಿಸಿ ದಪ್ಪವಾಗುವವರೆಗೆ ಕಲಸಿ. ಕೊನೆಯಲ್ಲಿ ಫ್ರೈ ಮಾಡಿದ ಮೊಟ್ಟೆ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿದರೆ ರುಚಿಕರವಾದ ಕ್ಯಾಪ್ಸಿಕಂ ಎಗ್ ಚಿಲ್ಲಿ ಸಿದ್ಧ.
ಸರ್ವಿಂಗ್ ಸಲಹೆಗಳು
- ಫ್ರೈಡ್ ರೈಸ್ ಅಥವಾ ನೂಡಲ್ಸ್ ಜೊತೆ ಸರ್ವ್ ಮಾಡಿದರೆ ಹೆಚ್ಚು ರುಚಿ
- ಸ್ಟಾರ್ಟರ್ ಆಗಿಯೂ ಅಥವಾ ಸಂಜೆ ಸ್ನ್ಯಾಕ್ ಆಗಿಯೂ ಸೂಕ್ತ
- ಬಿಸಿ ಬಿಸಿ ಸರ್ವ್ ಮಾಡಿದರೆ ಸ್ಪೈಸಿ ಫ್ಲೇವರ್ ಹೆಚ್ಚುತ್ತದೆ




