Loka Raid : ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದರು. ಈ ವೇಳೆ ಕೋಟಿ ಕೋಟಿ ಹಣ ಜಪ್ತಿ ಮಾಡಲಾಗಿದೆ.

Loka Raid : ರಾಜ್ಯದ ವಿವಿದೆಡೆ ಲೋಕಾಯುಕ್ತ ಅಧಿಕಾರಿಗಳು ಆದಾಯ ಮೀರಿದ ಆಸ್ತಿಗಳಿಕೆ ಆರೋಪದಡಿ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
ಎಚ್.ಎಂ. ಜನಾರ್ಧನ್ ಮನೆ ಮೇಲೆ ದಾಳಿ – ಕೋಟಿ ಕೋಟಿ ನಗದು ಪತ್ತೆ
ಕರ್ನಾಟಕ ರೆಸಿಡೆನ್ಷಿಯಲ್ ಎಜುಕೇಷನಲ್ ಇನ್ಸ್ಟಿಟ್ಯೂಷನ್ ಸೊಸೈಟಿ (KREIS) ಇಂಜಿನಿಯರ್ ಎಚ್.ಎಂ. ಜನಾರ್ಧನ್ ಅವರ ಬೆಂಗಳೂರಿನ ನಿವಾಸ ಹಾಗೂ ಕಚೇರಿಯಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಜನಾರ್ಧನ್ ಈ ಹಿಂದೆ ಲೋಕೋಪಯೋಗಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕಾರ್ಯ ನಿರ್ವಹಿಸಿದ್ದು, ಬಳಿಕ ಕ್ರೈಸ್ಗೆ ವರ್ಗಾವಣೆಯಾಗಿದ್ದರು. ದಾಳಿ ವೇಳೆ ಜನಾರ್ಧನ್ ಮನೆಯಲ್ಲಿ ಕೋಟಿ ಕೋಟಿ ನಗದು ಹಣ ಪತ್ತೆಯಾಗಿದೆ.

ಅವರ ಸ್ನೇಹಿತನ ಫ್ಲ್ಯಾಟ್ನಲ್ಲಿ 1 ಕೋಟಿ 70 ಲಕ್ಷ ರೂ. ನಗದು ಪತ್ತೆಯಾಗಿದೆ. ಹಣ ಎಣಿಸಲು ಲೋಕಾಯುಕ್ತ ಅಧಿಕಾರಿಗಳು ಹಣ ಎಣಿಸುವ ಯಂತ್ರವನ್ನು ಬಳಸಿದ್ದಾರೆ. ಜನಾರ್ಧನ್ ಗಳಿಸಿದ ಆದಾಯಕ್ಕಿಂತ ಶೇ.216 ರಷ್ಟು ಅಧಿಕ ಆಸ್ತಿಪಾಸ್ತಿ ಹೊಂದಿರುವುದು ಬೆಳಕಿಗೆ ಬಂದಿದೆ.
ಒಟ್ಟಾರೆ ಅವರ ಆಸ್ತಿಪಾಸ್ತಿ ಮೌಲ್ಯವನ್ನು ಪ್ರಾಥಮಿಕ ಅಂದಾಜು ಪ್ರಕಾರ ₹4.42 ಕೋಟಿ ಎಂದು ಲೋಕಾಯುಕ್ತ ಅಧಿಕಾರಿಗಳು ತಿಳಿಸಿದ್ದಾರೆ.
ಪುರುಷೋತ್ತಮ ದಾಸ್ ಹೆಗಡೆ ಮನೆ ಸೇರಿದಂತೆ 11 ಕಡೆ ದಾಳಿ
ಲೋಕೋಪಯೋಗಿ ಇಲಾಖೆ ಚೀಫ್ ಇಂಜಿನಿಯರ್ ಹಾಗೂ ಪ್ರಸ್ತುತ ಕರ್ನಾಟಕ ಸ್ಟೇಟ್ ಹೈವೇ ಡೆವಲಪ್ಮೆಂಟ್ ಪ್ರಾಜೆಕ್ಟ್ನಲ್ಲಿ ಕಾರ್ಯನಿರ್ವಹಿಸುತ್ತಿರುವ ಪುರುಷೋತ್ತಮ ದಾಸ್ ಹೆಗಡೆ ಸಹ ಲೋಕಾ ಬಲೆಗೆ ಬಿದ್ದಿದ್ದಾರೆ.
ಮೈಸೂರಿನಲ್ಲಿ 5 ಹಾಗೂ ಬೆಂಗಳೂರಿನಲ್ಲಿ 6 ಸ್ಥಳಗಳಲ್ಲಿ ಸೇರಿ ಒಟ್ಟು 11 ಕಡೆಗಳಲ್ಲಿ ಶೋಧ ಕಾರ್ಯಾಚರಣೆ ನಡೆದಿದೆ. ಬೆಂಗಳೂರಿನ ಪದ್ಮನಾಭನಗರದಲ್ಲಿರುವ ಅವರ ನಿವಾಸ ಸೇರಿದಂತೆ ವಿವಿಧೆಡೆ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.
ಇದನ್ನೂ ಓದಿ : ಬೆಳ್ಳಂಬೆಳಗ್ಗೆ ಹಲವು ಜಿಲ್ಲೆಗಳಲ್ಲಿ ಲೋಕಾಯುಕ್ತ ದಾಳಿ..!

ಇತ್ತೀಚೆಗೆ ‘ಪರ್ಜನ್ಯ’ ಎಂಬ ಹೆಸರಿನ ಮೂರು ಅಂತಸ್ತಿನ ಐಷಾರಾಮಿ ಮನೆಯನ್ನು ನಿರ್ಮಿಸಿರುವುದು ಹಾಗೂ ಪುರುಷೋತ್ತಮ ದಾಸ್ ಹೆಗಡೆ ಎರಡು ಶಾಲೆಗಳ ಮಾಲೀಕರೂ ಆಗಿರುವುದು ತಿಳಿದುಬಂದಿದೆ.
ಇತರರ ಮೇಲೂ ದಾಳಿ
ದಾವಣಗೆರೆಯ ಬೆಸ್ಕಾಂ ಅಸಿಸ್ಟೆಂಟ್ ಎಕ್ಸಿಕ್ಯುಟೀವ್ ಇಂಜಿನಿಯರ್ ಅರ್ಜುನ್ ಆರ್.ಎಚ್. ಹಾಗೂ ಧಾರವಾಡದ ಲ್ಯಾಂಡ್ ರೆಕಾರ್ಡ್ಸ್ ಇಲಾಖೆಯ ಸರ್ವೇಯರ್ ಸೋಮಲಿಂಗಪ್ಪ ಅವರ ಮೇಲೂ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
MUST WATCH : ಶಾಸಕ ಭೈರತಿ ಬಸವರಾಜ್ಗೆ ಬಂಧನ ಭೀತಿ ಜೈಲು ಪಾಲಾಗ್ತಾರಾ ಬಿಜೆಪಿ ಶಾಸಕ




