Gold Rate : ಚಿನ್ನದ ಬೆಲೆಯಲ್ಲಿ ಇಂದು ಬರೋಬ್ಬರಿ 1200 ರೂಪಾಯಿ ಇಳಿಕೆ ಆಗಿದೆ, ಬೆಳ್ಳಿ ಬೆಲೆ 3 ಲಕ್ಷದ ಆಸುಪಾಸಲ್ಲಿ ಏರಿಕೆ ಇಳಿಕೆ ಆಗುತ್ತಿದೆ. ಸದ್ಯ ಜಾಗತಿಕ ರಾಜಕೀಯದಲ್ಲಿ ಉದ್ವಿಗ್ನತೆ ಕಡಿಮೆಯಾಗಿದ್ದು, ಇದು ಚಿನ್ನದ ಬೆಲೆ ಇಳಿಕೆಗೆ ಪೂರಕವಾಗಿದೆ.

Gold Rate : ಕಳೆದ ಫೆಬ್ರವರಿ 07ರಿಂದ ನಿರಂತರ ಏರಿಕೆ ಕಂಡು ಗ್ರಾಹಕರನ್ನು ಕಂಗಾಲಾಗಿಸಿದ್ದ ಚಿನ್ನದ ಬೆಲೆಯಲ್ಲಿ ಇಂದು ದಿಢೀರ್ ಕುಸಿತ ಕಂಡಿದೆ. ನಿನ್ನೆ 24 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ 15,960 ರೂಪಾಯಿಯಾಗಿದ್ದರೆ, 22 ಕ್ಯಾರಟ್ ಚಿನ್ನದ ಬೆಲೆ 14,630 ರೂಪಾಯಿಯಾಗಿತ್ತು.
ಇಂದು 24 ಕ್ಯಾರಟ್ ಚಿನ್ನದ ಬೆಲೆಯಲ್ಲಿ ಪ್ರತಿ ಗ್ರಾಮ್ಗೆ 120 ರೂಪಾಯಿ ಇಳಿಕೆಯಾಗಿದ್ದು, 10 ಗ್ರಾಮ್ಗೆ ಒಟ್ಟು 1,200 ರೂಪಾಯಿ ಕುಸಿತ ದಾಖಲಾಗಿದೆ. ಇದರಿಂದ 24 ಕ್ಯಾರಟ್ ಚಿನ್ನದ ಇಂದಿನ ಬೆಲೆ ಪ್ರತಿ ಗ್ರಾಮ್ಗೆ 15,840 ರೂಪಾಯಿಯಾಗಿದೆ.
ಇದೇ ವೇಳೆ ಆಭರಣ ಚಿನ್ನವಾದ 22 ಕ್ಯಾರಟ್ ಚಿನ್ನದ ಬೆಲೆಯಲ್ಲೂ ಇಳಿಕೆ ಕಂಡಿದೆ. ಪ್ರತಿ ಗ್ರಾಮ್ಗೆ 110 ರೂಪಾಯಿ ಕುಸಿತವಾಗಿದ್ದು, 10 ಗ್ರಾಮ್ಗೆ 1,100 ರೂಪಾಯಿ ಇಳಿಕೆಯಾಗಿದೆ. ಇಂದಿನ 22 ಕ್ಯಾರಟ್ ಚಿನ್ನದ ಬೆಲೆ ಪ್ರತಿ ಗ್ರಾಮ್ಗೆ 14,520 ರೂಪಾಯಿಗೆ ಇಳಿದಿದೆ.
ಇದನ್ನೂ ಓದಿ : ಮಂತ್ರಾಲಯ ಹುಂಡಿ ಎಣಿಕೆ – 21 ದಿನಗಳಲ್ಲಿ 3 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹ

ನಿರಂತರ ಏರಿಕೆಯಿಂದ ಆತಂಕಗೊಂಡಿದ್ದ ಚಿನ್ನದ ಖರೀದಿದಾರರು ಬೆಲೆ ಇಳಿಕೆಯಿಂದ ಕೊಂಚ ನೆಮ್ಮದಿ ಪಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಇನ್ನಷ್ಟು ಇಳಿಕೆ ಕಾಣುವ ಸಾಧ್ಯತೆ ಇದೆ ಎನ್ನಲಾಗ್ತಿದೆ.
ಇನ್ನೊಂದೆಡೆ, ಸಾಮಾನ್ಯವಾಗಿ ಚಿನ್ನದ ಬೆಲೆ ಇಳಿದಾಗ ಬೆಳ್ಳಿ ಬೆಲೆಯೂ ಕುಸಿಯುವ ಪ್ರವೃತ್ತಿ ಇದ್ದರೂ, ಇಂದು ಭಿನ್ನ ದೃಶ್ಯ ಕಂಡುಬಂದಿದೆ. ಫೆಬ್ರವರಿ 11ರಂದು ಪ್ರತಿ ಕೆಜಿ ಬೆಳ್ಳಿ ಬೆಲೆ 2,90,000 ರೂಪಾಯಿಯಾಗಿದ್ದರೆ, ಇಂದು 5,000 ರೂಪಾಯಿ ಏರಿಕೆ ಕಂಡು 2,95,000 ರೂಪಾಯಿಗೆ ಏರಿಕೆಯಾಗಿದೆ.
ಚಿನ್ನದ ಬೆಲೆಯಲ್ಲಿ ಇಳಿಕೆ ಮತ್ತು ಬೆಳ್ಳಿ ಬೆಲೆಯಲ್ಲಿ ಏರಿಕೆ ಮಾರುಕಟ್ಟೆಯಲ್ಲಿ ಕುತೂಹಲ ಹುಟ್ಟಿಸಿದೆ.
MUST WATCH : ಮನೆಗೆ ಬರ್ತಿದೆ ಗಲೀಜು ನೀರು- ಪಾಲಿಕೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ




