ಲೆಕ್ಸಾಸ್ ಕಂಪನಿಯ ಹೊಸ ಕಾರ್ ಖರೀದಿಸಿದ ಡಿಸಿಎಂ ಡಿಕೆಶಿ : ಹೊಸ ಸದಸ್ಯನ ಸ್ವಾಗತಿಸಿದ DK Shivakumar ಪತ್ನಿ ಉಷಾ.

ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಮನೆಗೆ ಹೊಸ ಸದಸ್ಯರ ಆಗಮನವಾಗಿದೆ. ಅರ್ಥಾತ್ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಹೊಸ ಕಾರ್ ಖರೀದಿಸಿದ್ದಾರೆ.
ಡಿಕೆಶಿ ಮನೆಗೆ ಬಂತು ‘Lexus LM’ ಹೊಸ ಕಾರು
ಇಂದು ಬೆಂಗಳೂರಿನ ಸದಾಶಿವನಗರದಲ್ಲಿರುವ ಡಿ.ಕೆ. ಶಿವಕುಮಾರ್ ಅವರ ನಿವಾಸಕ್ಕೆ ಬ್ರಾಂಡ್ ನ್ಯೂ ಕಾರು ಡೆಲಿವರಿ ಆಗಿದೆ. ಲೆಕ್ಸಸ್ (Lexus) ಕಂಪನಿಯ Lexus LM 350h 7 ಸೀಟರ್ ಕಾರನ್ನು DK Shivakumar ಖರೀದಿಸಿದ್ದಾರೆ. ಈ ಕಾರಿನ ಬೆಲೆ ಬರೋಬ್ಬರಿ 2.8 ಕೋಟಿ ರೂಪಾಯಿ ಎನ್ನಲಾಗಿದೆ.
ಇದನ್ನು ಓದಿ : ಮಂತ್ರಾಲಯ ಹುಂಡಿ ಎಣಿಕೆ – 21 ದಿನಗಳಲ್ಲಿ 3 ಕೋಟಿಗೂ ಹೆಚ್ಚು ಕಾಣಿಕೆ ಸಂಗ್ರಹ

ಹೊಸ ಸದಸ್ಯನ ಸ್ವಾಗತಿಸಿದ ಡಿಕೆಶಿ ಪತ್ನಿ ಉಷಾ
ಬಿಳಿ ಬಣ್ಣದ ಈ ಲಗ್ಜರಿ ಕಾರು KA 03 NZ 6666 ನಂಬರ್ ಪ್ಲೇಟ್ ಹೊಂದಿದೆ. ವಿಶೇಷವೆಂದರೆ, ಲೆಕ್ಸಸ್ ಕಂಪನಿಯ ಶೋರೂಮ್ ಸಿಬ್ಬಂದಿಯೇ ಕಾರನ್ನು ಸದಾಶಿವನಗರದ ನಿವಾಸಕ್ಕೆ ಹೋಮ್ ಡೆಲಿವರಿ ಮಾಡಿದ್ದಾರೆ.
ಹೊಸ ಬ್ರಾಂಡ್ ನ್ಯೂ ಕಾರ್ ಅನ್ನು ಡಿ.ಕೆ.ಶಿವಕುಮಾರ್ ಪತ್ನಿ ಉಷಾ ಮನೆಗೆ ಬರಮಾಡಿಕೊಂಡಿದ್ದಾರೆ.

ಇದನ್ನು ನೋಡಿ : ಸಿಎಂ ಕುರ್ಚಿ ಕದನ: ಅಖಾಡಕ್ಕಿಳಿದ ಡಿಕೆ ಬ್ರದರ್ಸ್ ಮುಂದಿನ ನಡೆಯೇನು?




