ಬೆಂಗಳೂರುದಲ್ಲಿ ಮಾತನಾಡಿದ CM Siddaramaiah , ಸಿಎಂ ಬದಲಾವಣೆ ಚರ್ಚೆ ಕುರಿತು ಹೈಕಮಾಂಡ್ ಸೂಚನೆಯಂತೆ ನಡೆದುಕೊಳ್ಳುವುದಾಗಿ ಹೇಳಿದರು.

ಬೆಂಗಳೂರುದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ CM Siddaramaiah, ರಾಜ್ಯದಲ್ಲಿ ಸಿಎಂ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. “ನಾನಾಗಲಿ ಡಿಕೆ ಶಿವಕುಮಾರ್ ಅಗಲಿ, ಹೈಕಮಾಂಡ್ ಹೇಳಿದಂತೆ ನಡೆದುಕೊಳ್ಳಬೇಕು” ಎಂದು ಸ್ಪಷ್ಟಪಡಿಸಿದರು.
ಬಜೆಟ್ ಮಂಡನೆ ದಿನಾಂಕ ಶೀಘ್ರದಲ್ಲೇ
ಇದೇ ವೇಳೆ, ರಾಜ್ಯ ಬಜೆಟ್ ಮಂಡನೆ ದಿನಾಂಕವನ್ನು ಶೀಘ್ರದಲ್ಲೇ ಘೋಷಿಸಲಾಗುವುದು ಎಂದು ಸಿಎಂ ಹೇಳಿದರು. ಹಬ್ಬದ ನಂತರ ಅಧಿಕೃತವಾಗಿ ದಿನಾಂಕ ತಿಳಿಸಲಾಗುತ್ತದೆ ಎಂದು ತಿಳಿಸಿ, ಸಿದ್ಧತೆಗಳು ನಡೆಯುತ್ತಿರುವುದಾಗಿ ಸೂಚನೆ ನೀಡಿದರು.
ಇದನ್ನು ಓದಿ : ಇಬ್ಬರು ಮಕ್ಕಳಿರೋದನ್ನು ಮುಚ್ಚಿಟ್ಟು ಯುವಕ ನೊಂದಿಗೆ ವಿವಾಹವಾದ ಮಹಿಳೆ!

ಮಾಧ್ಯಮ ಪ್ರಶ್ನೆಗೆ ಸಿಎಂ ಪ್ರತಿಕ್ರಿಯೆ
ಪದವಿ ಬದಲಾವಣೆ ಕುರಿತು ಪದೇ ಪದೇ ಕೇಳಿದ ಪ್ರಶ್ನೆಗಳಿಗೆ ಸಿಎಂ ಸಿದ್ದರಾಮಯ್ಯ ಸಿಡಿಮಿಡಿಗೊಂಡರು. “ಪಟ್ಟದ ವಿಚಾರವಾಗಿ ಅದೇ ಪ್ರಶ್ನೆ ಕೇಳಬೇಡಿ, ಬೇರೆ ಪ್ರಶ್ನೆಗಳಿಲ್ಲವೇ? ಯಾರಿಗೆ ಕೇಳಬೇಕು ಅವರನ್ನೇ ಕೇಳಿ” ಎಂದು ಹೇಳಿದರು. ಡಿಕೆ ಸುರೇಶ್ ಹೇಳಿಕೆಗಳ ಬಗ್ಗೆ ಅವರನ್ನೇ ಸಂಪರ್ಕಿಸಬೇಕು ಎಂದು ಸೂಚಿಸಿದರು.

ಶಾಸಕರ ವಿದೇಶ ಪ್ರವಾಸ ಕುರಿತು ಅಭಿಪ್ರಾಯ
ಇನ್ನೊಂದೆಡೆ, ಶಾಸಕರ ವಿದೇಶ ಪ್ರವಾಸದ ಬಗ್ಗೆ ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿ, “ಸ್ವಂತ ಖರ್ಚಿನಲ್ಲಿ ಹೋಗುತ್ತಿದ್ದರೆ ಬೇಡ ಎನ್ನಲು ಸಾಧ್ಯವಿಲ್ಲ” ಎಂದು ಸಿಎಂ ಅಭಿಪ್ರಾಯಪಟ್ಟರು.
ಇದನ್ನು ನೋಡಿ : ಕೊಡಿಗೇನಹಳ್ಳಿ ಅಭಿವೃದ್ಧಿಪಡಿಸುವೆ ಕೆ.ಎನ್.ರಾಜಣ್ಣ ಜನತೆಗೆ ಭರವಸೆ




