Vijayapura : ರಾಜ್ಯದಲ್ಲಿ ಅಮಾನವೀಯ ಘಟನೆ : ತಂದೆ ತಾಯಿ ಕಾಲಿಗೆ ಬಿದ್ದರೂ, ಕೇಳದೆ ಮುಸ್ಲಿಂ ಯುವಕನೊಂದಿಗೆ ಯುವತಿ ಪರಾರಿ!

ಪ್ರೀತಿಸಿದ ಯುವಕನೊಂದಿಗೆ ಪರಾರಿಯಾಗಿ ಮದುವೆಯಾದ ಮಗಳಿಗಾಗಿ ಆಕೆಯ ಪೋಷಕರು ಪೊಲೀಸ್ ಠಾಣೆ ಮುಂದೆ ಕಣ್ಣೀರಿಟ್ಟ ಘಟನೆ Vijayapura ದಲ್ಲಿ ನಡೆದಿದೆ.
ಮುಸ್ಲಿಂ ಯುವಕನೊಂದಿಗೆ ಪರಾರಿ
ವಿಜಯಪುರದ ಯುವತಿಯೊಬ್ಬಳು ಮೊಹಮ್ಮದ್ ಸಲಿಂ ಸುತಾರ್ ಎಂಬ ಯುವಕನನ್ನು ಪ್ರೀತಿಸಿ, ಹೆತ್ತವರ ವಿರೋಧವನ್ನು ಲೆಕ್ಕಿಸದೆ ಆತನೊಂದಿಗೆ ಪರಾರಿಯಾಗಿದ್ದಳು. ಈ ಹಿನ್ನೆಲೆಯಲ್ಲಿ ಮಗಳು ಕಾಣೆಯಾಗಿದ್ದಾಳೆ ಎಂದು ಫೆಬ್ರವರಿ 2ರಂದು ಯುವತಿಯ ಪೋಷಕರು ವಿಜಯನಗರ ಮಹಿಳಾ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು.ಇದೀಗ ಅದೇ ಠಾಣೆಗೆ ಸ್ವಯಂಪ್ರೇರಿತವಾಗಿ ಪ್ರಿಯಕರನೊಂದಿಗೆ ಬಂದ ಯುವತಿ, ತಾನು ಮದುವೆಯಾಗಿರುವುದಾಗಿ ತಿಳಿಸಿದ್ದಾಳೆ.

ಇದನ್ನು ಓದಿ : ವಿಧಾನಸೌಧದಲ್ಲಿ ಸಚಿವರ ಕಚೇರಿಯಲ್ಲೇ 300 ಗ್ರಾಂ ಚಿನ್ನಾಭರಣ ಕಳವು!
ಮಗಳಿಗಾಗಿ ಪೊಲೀಸ್ ಠಾಣೆ ಮುಂದೆ ಗೋಳಾಡಿದ ತಂದೆ-ತಾಯಿ
ಈ ವೇಳೆ ಠಾಣೆಗೆ ಬಂದ ಪೋಷಕರು, ಎಷ್ಟೇ ಕರೆದರೂ ಒಪ್ಪದ ಮಗಳು ಗಂಡನೊಂದಿಗೇ ಹೋದಾಗ, ಆಕೆಯಿದ್ದ ಪೊಲೀಸ್ ವಾಹನಕ್ಕೂ ಅಡ್ಡಬಿದ್ದು ಮಗಳನ್ನು ಓಲೈಸಲು ಪೋಷಕರು ಪ್ರಯತ್ನಿಸಿದ್ದಾರೆ. ಮನೆಗೆ ವಾಪಸ್ ಬರುವಂತೆ ಮಗಳಲ್ಲಿ ಅಂಗಲಾಚಿದ್ದಾರೆ. ಆದರೆ ಯುವತಿ ಮಾತ್ರ ಹೆತ್ತವರ ಕಣ್ಣೀರಿಗೂ ಕರಗದೆ, ನಾನು ನನ್ನ ಗಂಡನ ಜೊತೆಗೆ ಹೋಗುತ್ತೇನೆ, ನಿಮ್ಮ ಜೊತೆ ಬರಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾಳೆ. ಇನ್ನು ಯುವತಿ ಪ್ರಾಪ್ತ ವಯಸ್ಸಿನವಳಾಗಿರುವುದರಿಂದ, ಕಾನೂನಿನ ಪ್ರಕಾರ ಪೊಲೀಸರು ಆಕೆಯನ್ನು ಪತಿಯ ಜೊತೆಗೆ ಕಳುಹಿಸಿಕೊಟ್ಟಿದ್ದಾರೆ.
ಕಾಲಿಗೆ ಬಿದ್ದು ಗೋಗರೆದರೂ ಕರಗದ ಮಗಳು!
ಆದರೂ ಹೆತ್ತ ಕರುಳಿಗೆ ಸಮಾಧಾನವಾಗದೇ ಪೊಲೀಸ್ ಠಾಣೆಯ ಮುಂದೇ ಕುಳಿತು ತಂದೆ ತಾಯಿಯಿಬ್ಬರೂ ಗೋಗರೆದಿದ್ದಾರೆ. ಮಗಳು ಮಾತ್ರ ತಂದೆ ತಾಯಿಯ ಮುಖವನ್ನೂ ನೋಡದೆ ಅನ್ಯಕೋಮಿನ ಪ್ರಿಯಕರನೊಂದಿಗೆ ಹೊರಟು ಹೋಗಿದ್ದಾಳೆ.

ಇದನ್ನು ನೋಡಿ : ಥೂ ಛೀ ಇವನೆಂತಾ ಕಿರಾತಕ ಗಂಡ ಪ್ರೀತಿಸಿ ಮದುವೆ ಆದವಳಿಗೆ ಕಿರುಕುಳ




