ವಸಂತ ನರಸಾಪುರದಲ್ಲಿ Fire Accident – ದಟ್ಟ ಹೊಗೆ ಕಂಡು ಬೆಚ್ಚಿಬಿದ್ದ ಜನ.

ತುಮಕೂರು ಹೊರವಲಯದ ವಸಂತ ನರಸಾಪುರದಲ್ಲಿ ಅದ್ಯಾಕೋ ಇತ್ತೀಚಿನ ದಿನಗಳಲ್ಲಿ ಅಗ್ನಿ ಅವಘಡಗಳು ಸರ್ವೇ ಸಾಮಾನ್ಯವಾಗಿಬಿಟ್ಟಿವೆ. ಈಗ ಮತ್ತೊಂದು ದುರಂತ ಸಂಭವಿಸಿದ್ದು, ಭಾರೀ ಅನಾಹುತ ತಪ್ಪಿದೆ.
ಹೌದು ವೆಸ್ಟೇಜ್ ರಿಸೈಕಲಿಂಗ್ ಫ್ಯಾಕ್ಟರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡಿದ್ದು, ಬೆಂಕಿ ಕೆನ್ನಾಲಿಗೆಗೆ ದಟ್ಟವಾಗಿ ಹೊಗೆ ಆವರಿಸಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿತ್ತು.

ವಸಂತ ನರಸಾಪುರದಲ್ಲಿ ಭಾರೀ Fire Accident
ತುಮಕೂರು ನಗರದ ಹೊರವಲಯದ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ವೆಸ್ಟೇಜ್ ರಿಸೈಕಲಿಂಗ್ ಫ್ಯಾಕ್ಟರಿಯಲ್ಲಿ Fire Accident ಸಂಭವಿಸಿದೆ. ಸುಮಾರು ಒಂದು ಎಕರೆ ಪ್ರದೇಶದಲ್ಲಿ ವೆಸ್ಟೇಜ್ ವಸ್ತುಗಳನ್ನ ಶೇಖರಣೆ ಮಾಡಿ ಇಡಲಾಗಿದ್ದು, ಇಂದು ಸಂಜೆ 4 ಗಂಟೆ ಸುಮಾರಿಗೆ ಏಕಾಏಕಿಯಾಗಿ ಬೆಂಕಿ ಕಾಣಿಸಿಕೊಂಡಿದೆ.
ಎರಡು ಗಂಟೆಗೂ ಹೆಚ್ಚು ಕಾಲ ಬೆಂಕಿ ಹೊತ್ತಿ ಉರಿದಿದೆ. ಬೆಂಕಿಯ ಕೆನ್ನಾಲಗೆಗೆ ಫ್ಯಾಕ್ಟರಿಯಲ್ಲಿ ಸಂಗ್ರಹಿಸಿ ಇಟ್ಟಿದ್ದ ವೆಸ್ಟೇಜ್ ವಸ್ತುಗಳು ಸುಟ್ಟು ಭಸ್ಮವಾಗಿದ್ರೆ, ದಟ್ಟವಾದ ಹೊಗೆ ಸುತ್ತಮುತ್ತಲ ಪ್ರದೇಶದಲ್ಲಿ ಆವರಸಿತ್ತು.
ಇದನ್ನು ಓದಿ : ಸರಗಳ್ಳರಿಂದ ಬಿಡಿಸಿಕೊಳ್ಳಲು ಹೋಗಿ ಬಿದ್ದು ಮಹಿಳೆ ಸಾವು

ದಟ್ಟ ಹೊಗೆ ಕಂಡು ಬೆಚ್ಚಿಬಿದ್ದ ಜನ
ಇನ್ನು ಬೆಂಕಿ ಅವಘಡದಿಂದ ಲಕ್ಷಾಂತರ ಮೌಲ್ಯದ ವೆಸ್ಟೇಜ್ ವಸ್ತುಗಳು ಬೆಂಕಿಗೆ ಆಹುತಿಯಾಗಿದ್ದು, ಘಟನೆಯಿಂದ ಯಾವುದೇ ಸಾವು ನೋವು ಸಂಭವಿಸಿಲ್ಲ.
ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಹಾಗೂ ಪೊಲೀಸರು ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಅಗ್ನಿ ದುರಂತಕ್ಕೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ ಬಳಿಕ ಬೆಂಕಿ ದುರಂತಕ್ಕೆ ಕಾರಣ ತಿಳಿದುಬರಲಿದೆ.

ಇದನ್ನು ನೋಡಿ : ಹಿಂದೂಪುರ- ಮಧುಗಿರಿ ರಸ್ತೆ ಒತ್ತುವರಿ ಕೆಡಿಪಿ ಸಭೆ ನಡೆಸಿ ತೆರವಿಗೆ ವಾರ್ನಿಂಗ್




