Accident : ಬಾಣಾವರ (Banavar) ಗೇಟ್ ಬಳಿ ಸಂಜೆ ಮೂರು ಕಾರುಗಳ (Car) ಮಧ್ಯೆ ಸಂಭವಿಸಿದ ಅಪಘಾತದಲ್ಲಿ (Accident) ಇಬ್ಬರು ಮೃತಪಟ್ಟಿದ್ದು, ಐದು ಜನ ಗಾಯಗೊಂಡಿದ್ದಾರೆ.

Accident : ತುಮಕೂರು- ಕುಣಿಗಲ್ ರಸ್ತೆಯ ಬಾಣಾವಾರದ ರೈಸ್ ಮಿಲ್ ಬಳಿ ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ತುಮಕೂರು- ಕುಣಿಗಲ್ ಮುಖ್ಯರಸ್ತೆಯಲ್ಲಿ ಭೀಕರ ಅಪಘಾತ
ಹೊನ್ನುಡಿಕೆ ಹ್ಯಾಂಡ್ಪೋಸ್ಟ್ನಿಂದ ಸ್ವಲ್ಪ ದೂರದಲ್ಲಿರುವ ಬಾಣವಾರದ ರೈಸ್ ಮಿಲ್ ಬಳಿ ಮೂರು ಕಾರುಗಳ ನಡುವೆ ಸರಣಿ ಅಪಘಾತ ಸಂಭವಿಸಿದ್ದು, ಇಬ್ಬರು ಸಾವನ್ನಪ್ಪಿದ್ರೆ, ಐವರಿಗೆ ಗಾಯಗಳಾಗಿದ್ದು, ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ.
ಇಬ್ಬರು ಸಾವು, ಹಲವರಿಗೆ ಗಾಯ
ಯಾದವ ನಗರದ ಸುರೇಶ್ (55), ಮುರಳಿ (60) ಮೃತರು. ಸುರೇಶ್ ಗುಬ್ಬಿ ತಾಲೂಕು ಪಂಚಾಯಿತಿ ಮಾಜಿ ಸದಸ್ಯರಾಗಿದ್ದರು. ಅಪಘಾತದಲ್ಲಿ ಸೈಬರ್ ಠಾಣೆಯ ಇನ್ಸ್ಪೆಕ್ಟರ್ ರಾಮಕೃಷ್ಣಪ್ಪ, ಜೆಡಿಎಸ್ ವಕ್ತಾರ ಜಯಣ್ಣ, ಮಂಜುನಾಥ್ ಸೇರಿದಂತೆ ಐವರಿಗೆ ಗಾಯಗಳಾಗಿವೆ.

ತುಮಕೂರು ಕಡೆಯಿಂದ ಬರ್ತಿದ್ದ ಟಯೋಟಾ ಕಾರು, ಕುಣಿಗಲ್ ಕಡೆಯಿಂದ ಬರ್ತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ಕಾರುಗಳು ನಜ್ಜುಗುಜ್ಜಾಗಿವೆ.
ಇದನ್ನೂ ಓದಿ: ಸರಗಳ್ಳರಿಂದ ಬಿಡಿಸಿಕೊಳ್ಳಲು ಹೋಗಿ ಬಿದ್ದು ಮಹಿಳೆ ಸಾವು
ಓವರ್ ಟೇಕ್ ಮಾಡಲು ಹೋಗಿ ಕಾರಿಗೆ ಡಿಕ್ಕಿ
ಇನ್ನು ತುಮಕೂರು ಕಡೆಯಿಂದ ತೆರಳುತ್ತಿದ್ದ ಕಾರು ಮುಂದೆ ಚಲಿಸುತ್ತಿದ್ದ ಮತ್ತೊಂದು ಕಾರಿಗೆ ಡಿಕ್ಕಿಯಾಗಿ ಎದುರುಗಡೆ ಬರುತ್ತಿದ್ದ ರಾಮಕೃಷ್ಣಪ್ಪ ಅವರಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯರು ಆರೋಪಿಸಿದ್ರು.
ರಾಮಕೃಷ್ಣಪ್ಪ ಸ್ನೇಹಿತರ ಜತೆಗೆ ಆದಿಚುಂಚನಗಿರಿಗೆ ಹೋಗಿ ಕುಣಿಗಲ್ ಮಾರ್ಗವಾಗಿ ವಾಪಸ್ ಆಗುತ್ತಿದ್ದರು. ಇದೇ ಕಾರಿನಲ್ಲಿದ್ದ ಸುರೇಶ್, ಮುರಳಿ ಮೃತಪಟ್ಟಿದ್ದಾರೆ.
ಓವರ್ ಟೇಕ್ ಮಾಡಲು ಹೋಗಿಯೇ ಅಪಘಾತ ಸಂಭವಿಸಿದೆ ಎಂದು ಅಪಘಾತದದ ಭೀಕರತೆಯನ್ನು ಸ್ಥಳೀಯರು ತಿಳಿಸಿದ್ರು. ಇನ್ನು ಅಪಘಾತದಿಂದ ಕುಣಿಗಲ್- ತುಮಕೂರು ರಸ್ತೆಯಲ್ಲಿ ಕೆಲ ಕಾಲ ಟ್ರಾಫಿಕ್ ಜಾಮ್ ಉಂಟಾಗಿತ್ತು.

ಸ್ಥಳಕ್ಕೆ ಹೆಬ್ಬೂರು ಪೊಲೀಸ್ ಸಬ್ ಇನ್ಸ್ಪೆಕ್ಟರ್ ನವೀನ್ ಕುಮಾರ್ ಹಾಗೂ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
MUST WATCH : TUMKUR ಹೊರವಲಯದ ಬಳಿ ಕಾರುಗಳ ನಡುವೆ ಸರಣಿ ಆಕ್ಸಿಡೆಂ* – ಓವರ್ ಟೇಕ್ ಮಾಡಲು ಹೋಗಿ ಅವಘಡ




