ಗೆಲುವಿನ ಇನಿಂಗ್ಸ್ ಆಡಿ ಕೊಹ್ಲಿಯ ದಾಖಲೆ ಮುರಿದ Suryakumar Yadav.

2026ರ ಐಸಿಸಿ ಟಿ20 ವಿಶ್ವಕಪ್ನ ಮೊದಲ ಪಂದ್ಯದಲ್ಲೇ ನಾಯಕ ಸೂರ್ಯಕುಮಾರ್ ಯಾದವ್ ಅಮೂಲ್ಯ ಅರ್ಧಶತಕ ಸಿಡಿಸಿ ಭಾರತಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಇದರೊಂದಿಗೆ ಟಿ20ಐ ಕ್ರಿಕೆಟ್ನಲ್ಲಿ ವಿರಾಟ್ ಕೊಹ್ಲಿಯ ಮಹತ್ವದ ದಾಖಲೆಯೊಂದನ್ನು ಮುರಿದು ಹೊಸ ಇತಿಹಾಸ ನಿರ್ಮಿಸಿದ್ದಾರೆ.
105 ಪಂದ್ಯಗಳಿಂದ 17 ಪಂದ್ಯಶ್ರೇಷ್ಠ ಪ್ರಶಸ್ತಿ
49 ಎಸೆತದಲ್ಲಿ 10 ಬೌಂಡರಿ, 4 ಸಿಕ್ಸರ್ನೊಂದಿಗೆ ಔಟಾಗದೆ 84 ರನ್ ಸಿಡಿಸಿ ತಂಡವನ್ನು ಸುರಕ್ಷಿತ ಮೊತ್ತ ತಲುಪಿಸಿದ ಸೂರ್ಯ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದೇ ವೇಳೆ ಭಾರತ ಪರ ಟಿ20ಐಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದ ವಿರಾಟ್ ಕೊಹ್ಲಿಯ ದಾಖಲೆ ಮುರಿರು. ಕೊಹ್ಲಿ 124 ಪಂದ್ಯಗಳನ್ನಾಡಿ 16 ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದಿದ್ದರು. ಇದೀಗ ಸೂರ್ಯಕುಮಾರ್ ಕೇವಲ 105* ಪಂದ್ಯಗಳಿಂದ 17* ಪಂದ್ಯಶ್ರೇಷ್ಠ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ಮೂರನೇ ಸ್ಥಾನದಲ್ಲಿ Suryakumar Yadav
ಒಟ್ಟಾರೆಯಾಗಿ ವಿಶ್ವ ಕ್ರಿಕೆಟ್ನಲ್ಲಿ ಸೂರ್ಯಕುಮಾರ್ ಮೂರನೇ ಸ್ಥಾನದಲ್ಲಿದ್ದಾರೆ. ಸಾರ್ವಕಾಲಿಕ ಪಟ್ಟಿಯಲ್ಲಿ ಮಲೇಷ್ಯಾದ ವೀರಂದೀಪ್ ಸಿಂಗ್(22) ಮತ್ತು ಜಿಂಬಾಬ್ವೆಯ ಸಿಕಂದರ್ ರಾಜಾ(19) ಮೊದಲೆಡರು ಸ್ಥಾನದಲ್ಲಿದ್ದಾರೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 9 ವಿಕೆಟ್ ನಷ್ಟಕ್ಕೆ 161 ರನ್ ಕಲೆಹಾಕಿತು. ಗುರಿ ಬೆನ್ನತ್ತಿದ ಅಮೆರಿಕ ತಂಡ 20 ಓವರ್ಗಳಲ್ಲಿ 8 ವಿಕೆಟ್ಗೆ 132 ರನ್ ಗಳಿಸಿ ಸೋಲೊಪ್ಪಿಕೊಳ್ತು. ಭಾರತ ಪರ ಅರ್ಶ್ದೀಪ್ ಸಿಂಗ್, ಮೊಹಮ್ಮದ್ ಸಿರಾಜ್ ಮತ್ತು ಅಕ್ಷರ್ ಪಟೇಲ್ ತಲಾ ಎರಡು ವಿಕೆಟ್ ಕಿತ್ತರು.
ಇದನ್ನು ಓದಿ : ರೆಡ್ ಬರ್ಡ್ ಖಾಸಗಿ ಜೆಟ್ ಪತನ : ಇಬ್ಬರಿಗೆ ಗಂಭೀರ ಗಾಯ!

ಭಾರತ ಪರ ಟಿ20ಐಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳು
• ಸೂರ್ಯಕುಮಾರ್ ಯಾದವ್ – 17
• ವಿರಾಟ್ ಕೊಹ್ಲಿ – 16
• ರೋಹಿತ್ ಶರ್ಮಾ – 14
• ಅಕ್ಷರ್ ಪಟೇಲ್ – 8
ಟಿ20ಐಗಳಲ್ಲಿ ಅತಿ ಹೆಚ್ಚು ಪಂದ್ಯಶ್ರೇಷ್ಠ ಪ್ರಶಸ್ತಿಗಳು
• ವೀರಂದೀಪ್ ಸಿಂಗ್ – 22
• ಸಿಕಂದರ್ ರಾಜಾ – 19
• ಸೂರ್ಯಕುಮಾರ್ ಯಾದವ್ – 17
• ವಿರಾಟ್ ಕೊಹ್ಲಿ – 16
• ಸಾಮಿ ಸೊಹೈಲ್ – 16
ಇದನ್ನು ನೋಡಿ : ಜೆಡಿಎಸ್ ನಿಂದ ಜಿ.ಟಿ ದೇವೇಗೌಡ ಗೇಟ್ ಪಾಸ್ ಹೆಚ್.ಡಿ ಕುಮಾರಸ್ವಾಮಿ ಶಾಕಿಂಗ್ ಹೇಳಿಕೆ




