Tumakuru : ತುಮಕೂರು ಜಿಲ್ಲೆಯ ಒಂದೇ ಕುಟುಂಬದ ನಾಲ್ವರು ಬಿಹಾರದ ಧರ್ಮಶಾಲೆಯೊಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವಗಳಾಗಿ ಪತ್ತೆಯಾಗಿದ್ದಾರೆ.

Tumakuru : ತುಮಕೂರಿನ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಸದಸ್ಯರು ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್ನ ಧರ್ಮಶಾಲೆಯೊಂದರಲ್ಲಿ ಅನುಮಾನಾಸ್ಪದ ಸ್ಥಿತಿಯಲ್ಲಿ ಶವವಾಗಿ ಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಮೃತರನ್ನು ತಾಯಿ ಜಿ.ಆರ್. ಸುಮಂಗಲಾ (78), ಪುತ್ರ ಜಿ.ಆರ್. ನಾಗಪ್ರಸಾದ್ (50) ಹಾಗೂ ಪುತ್ರಿಯರಾದ ಜಿ.ಆರ್. ಶಿಲ್ಪಾ (48) ಮತ್ತು ಜಿ.ಆರ್. ಶ್ರುತಾ (43) ಎಂದು ಗುರುತಿಸಲಾಗಿದೆ.
ರಾಜಗೀರ್ ಬೌದ್ಧ ಹಾಗೂ ಜೈನ ಧರ್ಮೀಯರಿಗೆ ಪವಿತ್ರ ಯಾತ್ರಾ ಸ್ಥಳವಾಗಿದ್ದು, ಈ ನಾಲ್ವರೂ ನೇಪಾಳ ಪ್ರವಾಸಕ್ಕೆ ತೆರಳುವ ಉದ್ದೇಶದಿಂದ ಜನವರಿ 30ರಂದು ರಾಜಗೀರ್ ಧರ್ಮಶಾಲೆಯೊಂದರಲ್ಲಿ ಕೊಠಡಿ ಬುಕ್ ಮಾಡಿಕೊಂಡಿದ್ದರು.
ಬಳಿಕ ನಾಲಂದಾ ಜಿಲ್ಲೆಯ ಪಾವಾಪುರಿಗೆ ತೆರಳಲು ರೆಡಿಯಾಗಿದ್ದರು ಎನ್ನಲಾಗಿದೆ. ಬೆಳಿಗ್ಗೆ 9:40ರ ವೇಳೆಗೆ ಕೊಠಡಿಯಿಂದ ದುರ್ವಾಸನೆ ಬರುತ್ತಿದ್ದ ಹಿನ್ನೆಲೆ, ಧರ್ಮಶಾಲೆಯ ವ್ಯವಸ್ಥಾಪಕರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ : ಹೆತ್ತೇನಹಳ್ಳಿ ದೇವಸ್ಥಾನದಲ್ಲಿ ಕಳ್ಳತನ.! ಚಿನ್ನಾಭರಣ ದೋಚಿ ಕಳ್ಳರು ಎಸ್ಕೇಪ್.!
ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ, ನಾಲ್ವರೂ ಒಂದೇ ಕೊಠಡಿಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹಗಳಾಗಿ ಪತ್ತೆಯಾಗಿದ್ದಾರೆ. ಕಳೆದ ಮೂರು ದಿನಗಳಿಂದ ಕೊಠಡಿಯ ಬಾಗಿಲು ತೆರೆಯದೇ ಇದ್ದುದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.
ದಾಖಲೆಗಳು ಮತ್ತು ವಸ್ತುಗಳ ವಶ
ಮೃತರಿಗೆ ಸೇರಿದ ಮೊಬೈಲ್ ಫೋನ್ಗಳು, ಆಧಾರ್ ಕಾರ್ಡ್, ಪಾನ್ ಕಾರ್ಡ್, ಎಟಿಎಂ ಕಾರ್ಡ್ಗಳು ಸೇರಿದಂತೆ ಹಲವು ದಾಖಲೆಗಳು, ₹1,18,000 ನಗದು ಹಣ ಹಾಗೂ ದೊಡ್ಡ ಪ್ರಮಾಣದ ನಿದ್ರೆ ಮಾತ್ರೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಮೃತರು ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನವರು ಎನ್ನಲಾಗಿದೆ. ವಿಷಯ ತಿಳಿದ ತಕ್ಷಣ ಕರ್ನಾಟಕ ಪೊಲೀಸರನ್ನು ಸಂಪರ್ಕಿಸಲಾಗಿದ್ದು, ಗುಬ್ಬಿ ಪೊಲೀಸರ ಸಹಕಾರದೊಂದಿಗೆ ಮೃತರ ಕುಟುಂಬಕ್ಕೆ ಮಾಹಿತಿ ನೀಡಲಾಗಿದೆ.
ನಾಲ್ವರು ಮೃತದೇಹಗಳನ್ನು ನಾಲಂದಾ ಜಿಲ್ಲೆಯ ಬಿಹಾರ್ ಶರೀಫ್ನಲ್ಲಿರುವ ಸದರ್ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ. ನಾಲಂದಾ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ.
MUST WATCH : ಹೆತ್ತ ತಾಯಿಯ ಕರುಳು ಹಿಂಡುವ ಕಥೆ | CHIKKABALLAPURA NEWS




