Bengaluru : ಸಾಲು ಸಾಲು ಬೆಲೆ ಏರಿಕೆಗಳ ನಡುವೆಯೇ ವಿದ್ಯುತ್ ದರ ಹಾಗೂ ನೀರಿನ ದರ ಏರಿಕೆ ಶಾಕ್ ಕೊಡಲು ಇಲಾಖೆಗಳು ಮುಂದಾಗಿದೆ.

ಬಜೆಟ್ ಬಳಿಕ ರಾಜ್ಯದ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಬಿಸಿ ತಟ್ಟುತ್ತಲೇ ಇದೆ. ಮೆಟ್ರೋ ಪ್ರಯಾಣ ದರ ಏರಿಕೆ ಬಳಿಕ ದಿನನಿತ್ಯ ಬಳಸುವ ದಿನಸಿ ಸಾಮಾಗ್ರಿಗಳ ಬೆಲೆ ಗಗನಕ್ಕೇರಿದ್ದು, ಜನರ ಜೇಬಿಗೆ ಪದೇಪದೆ ಕತ್ತರಿ ಬೀಳುತ್ತಿದೆ.
ಇದರ ನಡುವೆ ವಿದ್ಯುತ್ ದರ ಹಾಗೂ ನೀರಿನ ದರ ಏರಿಕೆ ಕೂಡ ಕಾದಿದ್ದು, ದುಬಾರಿ ಜೀವನ ಸಾಗಿಸುತ್ತಿರುವ ಜನರಿಗೆ ಇದು ಗಾಯದ ಮೇಲೆ ಬರೆ ಎಳೆದಂತಾಗಿದೆ.
ನೀರಿನ ದರ ಏರಿಕೆ ಸಾಧ್ಯತೆ
Bengaluru ಜಲಮಂಡಳಿ ಪ್ರತೀ ವರ್ಷದಂತೆ ಈ ವರ್ಷವೂ ನೀರಿನ ದರ ಏರಿಕೆ ಮಾಡುವ ಚಿಂತನೆ ನಡೆಸಿದೆ. ಮಾರ್ಚ್ ತಿಂಗಳಲ್ಲಿ ನೀರಿನ ದರ ಶೇಕಡಾ 3ರಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ವಿದ್ಯುತ್ ದರವೂ ಏರಿಕೆ?
ಇನ್ನು ಮುಂದಿನ ತಿಂಗಳಲ್ಲಿ ವಿದ್ಯುತ್ ದರ ಏರಿಕೆಯಾಗುವ ಸಾಧ್ಯತೆಯಿದೆ. ಬೆಸ್ಕಾಂ ಅಧಿಕಾರಿಗಳು ಪ್ರತೀ ವರ್ಷದಂತೆ ಈ ವರ್ಷವೂ ದರ ಏರಿಕೆ ಪ್ರಸ್ತಾವನೆ ಸಲ್ಲಿಸಿದ್ದು, ಈ ತಿಂಗಳಲ್ಲಿ KERC ಮೂಲಕ ಜನಾಭಿಪ್ರಾಯ ಸಂಗ್ರಹ ನಡೆಯುತ್ತಿದೆ. ಜನಾಭಿಪ್ರಾಯ ಸಂಗ್ರಹದ ಬಳಿಕ ಮಾರ್ಚ್ ಅಥವಾ ಏಪ್ರಿಲ್ನಲ್ಲಿ ದರ ಏರಿಕೆ ಜಾರಿಗೆ ಬರುವ ಸಾಧ್ಯತೆ ಇದೆ.
ಇದನ್ನು ಓದಿ : ‘ಈ ಸಲ ಕಪ್ ನಮ್ದು’ – ಹ್ಯಾಟ್ರಿಕ್ ಟ್ರೋಫಿ ಗೆದ್ದ RCB

ದಿನಸಿ ಬೆಲೆ ಏರಿಕೆಯಿಂದ ಜನಸಾಮಾನ್ಯರಿಗೆ ಮತ್ತೊಂದು ಬರೆ
ಹಾಲು–ಮೊಸರು, ವಿದ್ಯುತ್, ಪೆಟ್ರೋಲ್–ಡೀಸೆಲ್, ಬಸ್–ಮೆಟ್ರೋ ದರ, ಮಕ್ಕಳ ಶಾಲಾ ಫೀಸ್ ಹೀಗೆ ಈಗಾಗಲೇ ಹಲವು ಅಗತ್ಯ ವಸ್ತುಗಳ ಬೆಲೆ ಏರಿಕೆಯಾಗಿದ್ದು, ಇದೀಗ ದಿನಸಿ ಸಾಮಾಗ್ರಿಗಳ ಮೇಲಿನ ದರ ಏರಿಕೆ ಜನಸಾಮಾನ್ಯರನ್ನು ಮತ್ತಷ್ಟು ಕಂಗೆಡಿಸಿದೆ.
ಸಗಟು ವ್ಯಾಪಾರದಲ್ಲೇ ಭಾರೀ ಏರಿಕೆ
ಜನರ ದಿನನಿತ್ಯದ ಬಳಕೆಯ ವಸ್ತುಗಳ ಮೇಲಿನ ದರ ಏರಿಕೆ ಸಗಟು ವ್ಯಾಪಾರದಲ್ಲೇ ಭಾರೀ ಪ್ರಮಾಣದಲ್ಲಿ ಕಂಡುಬರುತ್ತಿದೆ. ಅಕ್ಕಿ, ತೊಗರಿ ಬೇಳೆ, ಮೆಣಸು ಸೇರಿದಂತೆ ಹಲವು ಪದಾರ್ಥಗಳ ಬೆಲೆ ಹೆಚ್ಚಾಗಿದೆ.
ಅಕ್ಕಿ ಬೆಲೆ 20 ರೂ.ವರೆಗೆ ಏರಿಕೆ
ಸಗಟು ವ್ಯಾಪಾರದಲ್ಲಿ ಅಕ್ಕಿ ಬೆಲೆ 1 ಕೆಜಿಗೆ 20 ರೂ.ವರೆಗೆ ಏರಿಕೆಯಾಗಿದೆ. ಬಾಸ್ಮತಿ ಅಕ್ಕಿಯ ದರದಲ್ಲಿ 25 ರಿಂದ 30 ರೂ.ವರೆಗೆ ಹೆಚ್ಚಳವಾಗಿದೆ.
ಚಿಲ್ಲರೆ ವ್ಯಾಪಾರದಲ್ಲಿ ಸಗಟು ದರಕ್ಕಿಂತ ಸುಮಾರು 20% ಹೆಚ್ಚಳವಾಗುತ್ತಿದೆ ಎಂದು ವ್ಯಾಪಾರಿಗಳು ತಿಳಿಸಿದ್ದಾರೆ.

ಯಾವ ಪದಾರ್ಥಕ್ಕೆ ಎಷ್ಟೆಷ್ಟು ಏರಿಕೆ?
(ಸಗಟು ವ್ಯಾಪಾರದ ದರ – ಕೆಜಿಗೆ)
- ಅಕ್ಕಿ: 5 ರಿಂದ 30 ರೂ.ವರೆಗೆ ಏರಿಕೆ
- ಒಣ ಮೆಣಸು: 150 ರೂ.ವರೆಗೆ ಏರಿಕೆ
- ತೊಗರಿ ಬೇಳೆ: 15 ರಿಂದ 20 ರೂ.ವರೆಗೆ ಏರಿಕೆ
- ಕಡಲೆಕಾಯಿ: 20 ರೂ.ವರೆಗೆ ಏರಿಕೆ
- ಉದ್ದಿನ ಬೇಳೆ: 15 ರೂ.ವರೆಗೆ ಏರಿಕೆ
- ಕಡಲೆಬೇಳೆ: 10 ರೂ.ವರೆಗೆ ಏರಿಕೆ
ಇದನ್ನು ನೋಡಿ : ಮಹಿಳೆ ಜೊತೆ ಸಿಕ್ಕಿಬಿದ್ದ CONGRESS ಮುಖಂಡ- ಅಕ್ಕಪಕ್ಕದ ಮನೆಯವರಿಂದ ಹಿಗ್ಗಾಮುಗ್ಗ ಥಳಿತ




