Vijay ಸಿನಿಮಾದಿಂದಾಗಿ ಥಿಯೇಟರ್ ಮಾಲೀಕರಿಗೆ 100 ಕೋಟಿ ನಷ್ಟ.

ದಳಪತಿ Vijay ನಟನೆಯ ಬಹುನಿರೀಕ್ಷಿತ ಸಿನಿಮಾ ‘ಜನ ನಾಯಗನ್’ ಜನವರಿ 10ರಂದು ತೆರೆಗೆ ಬರಬೇಕಾಗಿತ್ತು. ಆದರೆ CBFC ಪ್ರಮಾಣಪತ್ರದಲ್ಲಿ ವಿಳಂಬ ಹಾಗೂ ನಂತರ ನಡೆದ ಕಾನೂನು ಪ್ರಕರಣಗಳ ಕಾರಣ ಚಿತ್ರವನ್ನು ಇನ್ನೂ ಬಿಡುಗಡೆ ಮಾಡಲಾಗಿಲ್ಲ. ಪ್ರಕರಣ ನ್ಯಾಯಾಲಯದಲ್ಲಿ ಇರುವುದರಿಂದ ಬಿಡುಗಡೆಯು ಇನ್ನಷ್ಟು ತಡವಾಗುವ ಸಾಧ್ಯತೆ ಇದೆ.
ಥಿಯೇಟರ್ ಉದ್ಯಮಕ್ಕೆ ದೊಡ್ಡ ಹೊಡೆತ
ಇನ್ನ ಈ ವಿಳಂಬದಿಂದ ನಿರ್ಮಾಪಕ ಕೆವಿಎನ್ ಮತ್ತು ತಮಿಳುನಾಡಿನ ಚಿತ್ರಮಂದಿರಗಳಿಗೆ ಸುಮಾರು ₹100 ಕೋಟಿ ನಷ್ಟ ಸಂಭವಿಸಿದೆ ಎಂದು ವರದಿಯಾಗಿದೆ. ‘ಜನ ನಾಯಗನ್’ ದಳಪತಿ ವಿಜಯ್ ಅವರ ಕೊನೆಯ ಸಿನಿಮಾ ಎಂಬ ಕಾರಣದಿಂದ, ಥಿಯೇಟರ್ಗಳು ಭಾರೀ ಜನಪ್ರವಾಹ ನಿರೀಕ್ಷಿಸಿದ್ದರು ಮತ್ತು ಬೆಂಗಳೂರಿನ ಸೇರಿದಂತೆ ಹಲವಾರು ನಗರಗಳಲ್ಲಿ ಮುಂಗಡ ಟಿಕೆಟ್ ಬುಕ್ಕಿಂಗ್ ನಡೆದಿತ್ತು. ಆದರೆ ಹಠಾತ್ ಸಿನಿಮಾ ಬಿಡುಗಡೆ ಮುಂದೂಡಲ್ಪಟ್ಟಿದ್ದು, ಥಿಯೇಟರ್ ಉದ್ಯಮಕ್ಕೆ ದೊಡ್ಡ ಹೊಡೆತ ನೀಡಿದೆ.
ಇದನ್ನು ಓದಿ : Jailನಲ್ಲಿ ಖೈದಿಗಳಿಗೆ ನೀಡುತ್ತಿದ್ದ ವಿಶೇಷ ಸೌಲಭ್ಯಕ್ಕೆ ಬ್ರೇಕ್.!

ಕನಿಷ್ಠ ₹100 ಕೋಟಿ ನಷ್ಟ
ತಮಿಳುನಾಡಿನ ಸಿನಿಮಾ ವ್ಯಾಪಾರ ವಿಶ್ಲೇಷಕ ರಮೇಶ್ ಬಾಲಾ ಈ ಕುರಿತು ಮಾತನಾಡಿ, “ವಿಜಯ್ ಸಿನಿಮಾಗಳು ಇತ್ತೀಚಿನ ವರ್ಷಗಳಲ್ಲಿ ಚಿತ್ರಮಂದಿರಗಳಿಗೆ ಬಂಪರ್ ಲಾಭ ತಂದಿವೆ. ‘ಜನ ನಾಯಗನ್’ ಕೊನೆಯ ಸಿನಿಮಾ ಎಂಬ ಕಾರಣಕ್ಕೆ ಥಿಯೇಟರ್ಗಳು ಅಡ್ವಾನ್ಸ್ ನೀಡಿ, ಸಿದ್ಧತೆ ಮಾಡಿಕೊಂಡು ಕಾಯುತ್ತಿದ್ದವು. ಆದರೆ ಸಿನಿಮಾ ಬಿಡುಗಡೆಯೇ ಆಗಿಲ್ಲ. ಇದರಿಂದ ಕನಿಷ್ಠ ₹100 ಕೋಟಿ ನಷ್ಟವಾಗಿದೆ” ಎಂದು ಹೇಳಿದ್ದಾರೆ.
ಪ್ರಮಾಣಪತ್ರ ನಿರಾಕರಣೆ
ಈಗ CBFC ಪ್ರಮಾಣಪತ್ರ ನಿರಾಕರಣೆ ಪ್ರಕರಣ ಹೈಕೋರ್ಟ್ ಏಕಸದಸ್ಯ ಪೀಠಕ್ಕೆ ವರ್ಗಾಯಿಸಲಾಗಿದೆ. ವಿಚಾರಣೆ ವಿಳಂಬವಾಗಬಹುದಾದ ಕಾರಣ, ನಿರ್ಮಾಪಕರು ಅರ್ಜಿಯನ್ನು ಹಿಂಪಡೆದು ಚಿತ್ರವನ್ನು ಸಿಬಿಎಫ್ಸಿ ರಿವ್ಯೂ ಕಮಿಟಿಗೆ ಕಳುಹಿಸುವ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನು ನೋಡಿ : ಶಿಕ್ಷಣ ಸಚಿವರೇ ಈ ಸುದ್ದಿ ನೋಡಿ 730 ಮಕ್ಕಳಿದ್ರು ಸ್ಕೂಲ್ ಸರಿಯಿಲ್ಲ




