Karnataka : ಇತ್ತೀಚೆಗೆ ಪರಪ್ಪನ ಅಗ್ರಹಾರ ಜೈಲು ಸೇರಿದಂತೆ ವಿವಿಧ ಕಾರಾಗೃಹಗಳಲ್ಲಿ ಹಣ ಪಡೆದು ವಿಶೇಷ ಸೌಲಭ್ಯ ನೀಡುವ ಆರೋಪಗಳ ಹಿನ್ನೆಲೆಯಲ್ಲಿ ಸರ್ಕಾರ ಹೊಸ ಕ್ರಮಕ್ಕೆ ಮುಂದಾಗಿದೆ.

Karnataka : ರಾಜ್ಯದ ಜೈಲುಗಳಲ್ಲಿ ಖೈದಿಗಳಿಗೆ ನೀಡಲಾಗುತ್ತಿದ್ದ ರಾಜಾತಿಥ್ಯ ಮತ್ತು ಅಕ್ರಮ ಸೌಲಭ್ಯಗಳ ಮೇಲೆ ನಿಗಾ ಇರಿಸಲು ಕಾರಾಗೃಹ ಮತ್ತು ಸುಧಾರಣಾ ಸೇವಾ ಇಲಾಖೆಯ ಡಿಜಿಪಿ ಅಲೋಕ್ ಕುಮಾರ್ ಅವರು ಕಠಿಣ ಕ್ರಮ ಕೈಗೊಳ್ಳುತ್ತಿದ್ದಾರೆ.
ಜೈಲುಗಳಲ್ಲಿ ರಾಜಾತಿಥ್ಯ ಹಾಗೂ ಅಕ್ರಮಗಳಿಗೆ ಡಿಜಿಪಿ ಅಲೋಕ್ ಕುಮಾರ್ ಬ್ರೇಕ್
ಒಂದೇ ಕಡೆ ವರ್ಷಾಂತರ ಕೆಲಸ ಮಾಡುತ್ತಿರುವ ಜೈಲು ಸಿಬ್ಬಂದಿಯನ್ನು ವರ್ಗಾವಣೆ ಮಾಡಲಿದ್ದಾರೆ. ಈ ಕ್ರಮದಿಂದ, ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನ ಸಿಬ್ಬಂದಿಗಳಿಂದ ಖೈದಿಗಳಿಗೆ ವಿಶೇಷ ಸೌಲಭ್ಯಗಳನ್ನು ನೀಡಲಾಗುತ್ತಿರುವ ಆರೋಪವನ್ನು ತಡೆಯುವ ಉದ್ದೇಶವಿದೆ.
ಇದೇ ತಿಂಗಳ 9ರಿಂದ ಕೇಂದ್ರ ಕಾರಾಗೃಹ ಕಚೇರಿಯಲ್ಲಿ ಸಿಬ್ಬಂದಿಗಳಿಗೆ ಕೌನ್ಸೆಲಿಂಗ್ ನಡೆಸಿ ವರ್ಗಾವಣೆ ಪ್ರಕ್ರಿಯೆಯನ್ನು ಪ್ರಾರಂಭಿಸಲು ಮುಹೂರ್ತ ನಿಗದಿಯಾಗಿದೆ. ಬೇರೆ ಕಡೆಗಳಿಂದ ಜೈಲಿಗೆ ನಿಯೋಜನೆ (OOD) ಮೂಲಕ ಬಂದ ಅಧಿಕಾರಿಗಳಿಗೂ ಈಗ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ.

ಇದನ್ನೂ ಓದಿ : ಮಧ್ಯಂತರ ತಡೆಯಾಜ್ಞೆ ರದ್ದು- H.D. Revannaಗೆ ಹೈಕೋರ್ಟ್ನಿಂದ ಬಿಗ್ ಶಾಕ್.!
ಕಾರಾಗೃಹ ಕಚೇರಿಯಿಂದ ಕೌನ್ಸೆಲಿಂಗ್ ಮತ್ತು ವರ್ಗಾವಣೆ ಪ್ರಕ್ರಿಯೆ ಶುರು
ಡಿಜಿಪಿ ಅಲೋಕ್ ಕುಮಾರ್ ಅವರ ಉದ್ದೇಶ, ಸಿಬ್ಬಂದಿಗಳನ್ನು ಆಗಾಗ ಬದಲಾಯಿಸುವ ಮೂಲಕ ಜೈಲಿನ ಒಳಗಿನ ಅಕ್ರಮ ಜಾಲವನ್ನು ತಡೆಯುವುದು ಮತ್ತು ಶಿಸ್ತನ್ನು ಕಾಪಾಡುವುದು. ಅಧಿಕಾರ ವಹಿಸಿಕೊಂಡ ನಂತರ ಅವರು ಮಂಗಳೂರು, ಬೆಂಗಳೂರು ಜೈಲುಗಳಿಗೆ ಭೇಟಿ ನೀಡಿ, ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ ಬಳಿಕ ವರ್ಗಾವಣೆ ಕ್ರಮ ಕೈಗೊಂಡಿದ್ದಾರೆ.
ಈ ಕ್ರಮದಿಂದ ಜೈಲು ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ಸಂಭವಿಸಲಿದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ. ಈ ಹಿಂದೆ ಜೈಲುಗಳು ಅಧಿಕ ಸುದ್ದಿಯಾಗಿದ್ದುದರಿಂದ, ಈ ಕ್ರಮದಿಂದ ಅಧಿಕಾರಿಗಳಲ್ಲಿ ಭಯ ಮತ್ತು ಎಚ್ಚರಿಕೆ ಮೂಡಿದೆ.
MUST WATCH : METRO ಪ್ರಯಾಣಿಕರಿಗೆ ಮತ್ತೆ SHOCK – ಫೆಬ್ರವರಿ 9 ರಿಂದ ಹೊಸ ದರ ಜಾರಿ




