Mangalore : ಕರಾವಳಿಯಲ್ಲಿ ಈ ಹಿಂದೆ ಬೋಟ್ ಆಂಬ್ಯುಲೆನ್ಸ್ ಆರಂಭಿಸುವ ಬಗ್ಗೆ ಸರ್ಕಾರ ಭರವಸೆ ನೀಡಿತ್ತು. ಆದ್ರೆ, ಇನ್ನು ಕಾರ್ಯರೂಪಕ್ಕೆ ಬಂದಿಲ್ಲ. ಹೀಗಾಗಿ ಇದೀಗ ಸರ್ಕಾರಕ್ಕೆ ಸೆಡ್ಡು ಹೊಡೆದ ಮೀನುಗಾರರು, ತಾವೇ ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿಕೊಂಡಿದ್ದಾರೆ

Mangalore : ಕರಾವಳಿಯಲ್ಲಿ ಮೊದಲ ಬಾರಿಗೆ ಬೋಟ್ ಆಂಬ್ಯುಲೆನ್ಸ್ ನಿರ್ಮಾಣವಾಗಿದ್ದು, ಇದು ಮೀನುಗಾರರ ಜೀವ ರಕ್ಷಣೆಗೆ ಮಹತ್ವದ ಹೆಜ್ಜೆಯಾಗಿದೆ.
ಈ ಹಿಂದೆ ಬೋಟ್ ಆಂಬ್ಯುಲೆನ್ಸ್ ಆರಂಭಿಸುವ ಬಗ್ಗೆ ಸರ್ಕಾರ ಭರವಸೆ ನೀಡಿದ್ದರೂ, ಅದು ಇನ್ನೂ ಕಾರ್ಯರೂಪಕ್ಕೆ ಬಂದಿರಲಿಲ್ಲ. ಇದರಿಂದ ಬೇಸತ್ತ ಮೀನುಗಾರರು ತಮ್ಮ ರಕ್ಷಣೆಗೆ ತಾವೇ ಮುಂದಾಗಿ ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿಕೊಂಡಿದ್ದಾರೆ.
ಮಂಗಳೂರಿನ ಉಳ್ಳಾಲ ವಲಯದ ನಾಡದೋಣಿ ಮತ್ತು ಗಿಲ್ ನೆಟ್ ಮೀನುಗಾರರ ಸಂಘದವರು ಸರ್ಕಾರದ ಯೋಜನೆಗೆ ಕಾಯದೇ ಸ್ವಂತ ವೆಚ್ಚದಲ್ಲಿ ಮೊದಲ ಬೋಟ್ ಆಂಬ್ಯುಲೆನ್ಸ್ ನಿರ್ಮಿಸಿದ್ದು, ಈ ಮಾದರಿ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ತುರ್ತು ರಕ್ಷಣೆಗೆ ಮಹತ್ವದ ನೆರವು
ಈ ಬೋಟ್ ಆಂಬ್ಯುಲೆನ್ಸ್ ಮೂಲಕ ಸಮುದ್ರ ಹಾಗೂ ನದಿಯಲ್ಲಿ ಮೀನುಗಾರಿಕೆ ನಡೆಸುವ ಸಂದರ್ಭ ಸಂಭವಿಸಬಹುದಾದ ಅವಘಡಗಳಲ್ಲಿ ತುರ್ತು ರಕ್ಷಣಾ ಕಾರ್ಯ ಕೈಗೊಳ್ಳಲಾಗುತ್ತದೆ. ಸಮುದ್ರದ ಮಧ್ಯೆ ಅಪಘಾತ, ಗಾಯ ಅಥವಾ ಅಚಾನಕ್ ಆರೋಗ್ಯ ಸಮಸ್ಯೆ ಎದುರಾದರೆ ಕೂಡ ತಕ್ಷಣವೇ ಈ ಬೋಟ್ ಆಂಬ್ಯುಲೆನ್ಸ್ ನೆರವಿಗೆ ಬರಲಿದೆ.
ಇದನ್ನೂ ಓದಿ : Team ಇಂಡಿಯಾ ಕಮ್ಬ್ಯಾಕ್ಗೆ ಶ್ರೇಯಸ್ ಅಯ್ಯರ್ ಭರ್ಜರಿ ಸಿದ್ಧತೆ

ಈ ಮೂಲಕ ಗಾಯಾಳುಗಳನ್ನು ಸುರಕ್ಷಿತವಾಗಿ ಕರಾವಳಿಗೆ ಕರೆತಂದು ಆಸ್ಪತ್ರೆಗೆ ರವಾನೆ ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ. ಇದು ಮೀನುಗಾರರ ಕುಟುಂಬಗಳಿಗೆ ಭರವಸೆ ನೀಡುವ ಮಹತ್ವದ ಉಪಕ್ರಮವಾಗಿದೆ.
ಮಾದರಿ ಕಾರ್ಯಕ್ಕೆ ಶ್ಲಾಘನೆ
ಸರ್ಕಾರದ ಯೋಜನೆಗೆ ಕಾಯದೇ ಸ್ವಯಂ ಪ್ರೇರಿತವಾಗಿ ಮೀನುಗಾರರು ಕೈಗೊಂಡಿರುವ ಈ ಕಾರ್ಯವನ್ನು ಸಾಮಾಜಿಕ ವಲಯದಲ್ಲಿ ಶ್ಲಾಘಿಸಲಾಗುತ್ತಿದೆ. ಕರಾವಳಿಯ ಇತರ ಭಾಗಗಳಲ್ಲಿಯೂ ಇದೇ ರೀತಿಯ ಬೋಟ್ ಆಂಬ್ಯುಲೆನ್ಸ್ ವ್ಯವಸ್ಥೆ ಜಾರಿಗೆ ಬರಬೇಕೆಂಬ ಒತ್ತಾಯ ಕೇಳಿಬರುತ್ತಿದೆ.
ಈ ಬೋಟ್ ಆಂಬ್ಯುಲೆನ್ಸ್ನಲ್ಲಿ ಇರುವ ಸೌಲಭ್ಯಗಳ ವಿವರಗಳನ್ನು ವಿಡಿಯೋದಲ್ಲಿ ಕಾಣಬಹುದು ಎಂದು ಮೀನುಗಾರರ ಸಂಘ ತಿಳಿಸಿದೆ.
MUST WATCH : ಮರ್ಯಾದೆ ಇದ್ರೆ ನಾನು ಕಳ್ಳ ಅಂತಾ ಸಾಬೀತು ಮಾಡಿ-ಶಿವಲಿಂಗೇಗೌಡ




