ತಮಿಳುನಾಡು ವಿಧಾನಸಭಾ ಚುನಾವಣೆಗೂ ಮೊದಲೇ ಉಸ್ತುವಾರಿ ಹುದ್ದೆಗೆ ರಾಜೀನಾಮೆ ನೀಡಿದ Annamalai ಮುಂದಿನ ನಡೆ ಏನು?

ವಿಧಾನ ಸಭಾ ಚುನಾವಣೆಗೂ ಮೊದಲೇ ಬಿಜೆಪಿ ಮಾಜಿ ರಾಜ್ಯಾಧ್ಯಕ್ಷ ಅಣ್ಣಾಮಲೈ ಅವರು ಕೊಯಮತ್ತೂರಿನ ಸಿಂಗನಲ್ಲೂರು ಸೇರಿದಂತೆ ಆರು ವಿಧಾನಸಭಾ ಕ್ಷೇತ್ರಗಳ ಉಸ್ತುವಾರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಇಲ್ಲಿ ಅವರು ಅಭ್ಯರ್ಥಿಯಾಗಿ ಸ್ಪರ್ಧಿಸುವ ನೀರಿಕ್ಷೆ ಇದೆ.
Annamalai ರಾಜೀನಾಮೆಗೆ ಕಾರಣವೇನು?
ತಂದೆಯ ಅನಾರೋಗ್ಯದ ಕಾರಣದಿಂದ ತಮಗೆ ಪ್ರವಾಸ ಮಾಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದು, ಈ ಹಿನ್ನೆಲೆಯಲ್ಲಿ ಚುನಾವಣಾ ಪ್ರವಾಸದ ಉಸ್ತುವಾರಿ ಹುದ್ದೆಯಿಂದ ಕೆಳಗಿಳಿಯಲು ನಿರ್ಧರಿಸಿರುವುದಾಗಿ ಅವರು ತಿಳಿಸಿದ್ದಾರೆ.

ಇದನ್ನು ಓದಿ : Davanagere|ವೃದ್ಧೆಯನ್ನು ಕೊಲೆಗೈದು 73 ಗ್ರಾಂ ಚಿನ್ನಾಭರಣ ದರೋಡೆ.!
ರಾಜೀನಾಮೆ ನೀಡಿದ ಅಣ್ಣಾಮಲೈ ಮುಂದಿನ ನಡೆ ಏನು?
ಎಐಎಡಿಎಂಕೆ ಜೊತೆಗಿನ ಮೈತ್ರಿಯ ಭಾಗವಾಗಿ ಬಿಜೆಪಿ ಸ್ಪರ್ಧಿಸಲು ಉದ್ದೇಶಿಸಿರುವ 41 ಕ್ಷೇತ್ರಗಳ ಉಸ್ತುವಾರಿಯಾಗಿ ಹಿರಿಯ ಬಿಜೆಪಿ ನಾಯಕರನ್ನು ನೇಮಿಸಲಾಗಿದೆ. ಅಣ್ಣಾಮಲೈ ಅವರನ್ನು ಸಿಂಗನಲ್ಲೂರು, ಮಧುರೈ ದಕ್ಷಿಣ, ವಿರುಗಂಪಕ್ಕಂ, ಕಾರೈಕುಡಿ, ಶ್ರೀವೈಕುಂಡಂ, ಪದ್ಮನಾಭಪುರಂ ಉಸ್ತುವಾರಿಯಾಗಿ ನೇಮಿಸಲಾಗಿತ್ತು.
ಪ್ರಚಾರದಲ್ಲಿ ನಾನು ಸಹ ಕೆಲಸ ಮಾಡುತ್ತೇನೆ
ಕೊಯಮತ್ತೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದAnnamalai ಅವರು, “ತಂದೆಯವರ ಆರೋಗ್ಯ ನನ್ನ ಮೊದಲ ಕರ್ತವ್ಯ. ಅವರಿಗೆ ನೋಡಿಕೊಳ್ಳಲು ನಾನು ಕೊಯಮತ್ತೂರಿನಲ್ಲಿ ಉಳಿಯಬೇಕಾಗಿದೆ. ಈ ಕಾರಣದಿಂದ ಪಕ್ಷದ ಪರ ಹೆಚ್ಚಿನ ಪ್ರಚಾರ ಪ್ರಯಾಣ ಮಾಡಲು ನನಗೆ ಸಾಧ್ಯವಿಲ್ಲ. ಈ ಬಗ್ಗೆ ನಾನು ರಾಜ್ಯಾಧ್ಯಕ್ಷ ನೈನರ್ ನಾಗೇಂತಿರನ್ ಅವರಿಗೆ ತಿಳಿಸಿದ್ದೇನೆ. ಪಕ್ಷ ಬೇರೆ ಉಸ್ತುವಾರಿಗಳನ್ನು ನಿಯೋಜಿಸಬಹುದು. ಪ್ರಚಾರದಲ್ಲಿ ನಾನು ಸಹ ಕೆಲಸ ಮಾಡುತ್ತೇನೆ,” ಎಂದು ಹೇಳಿದರು.

ಇದನ್ನು ನೋಡಿ : ಅಬಕಾರಿ ಸಚಿವ ತಿಮ್ಮಾಪುರ ವಿರುದ್ಧ ಮೈತ್ರಿ ನಾಯಕರು ಆಕ್ರೋಶ




