ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸತತ 33 ವರ್ಷಗಳ ಕಾಲ B.C shivanna ಸೇವೆ ಸಲ್ಲಿಸಿದ್ದಾರೆ.

Gubbi : ಪ್ರಾಥಮಿಕ ಹಾಗೂ ಪ್ರೌಢಶಾಲಾ ವಿಭಾಗದಲ್ಲಿ ಸತತ 33 ವರ್ಷಗಳ ಕಾಲ ಸೇವೆ ಸಲ್ಲಿಸಿದ ಬಿ.ಸಿ.ಶಿವಣ್ಣ ನವರಿಗೆ ಗುಬ್ಬಿ ತಾಲೂಕಿನ ಕಡಬ ಗ್ರಾಮದ ಕರ್ನಾಟಕ ಪಬ್ಲಿಕ್ ಸ್ಕೂಲ್ ವತಿಯಿಂದ ಅದ್ದೂರಿ ಸನ್ಮಾನ ಮತ್ತು ಬೀಳ್ಕೊಡುಗೆ ಸಮಾರಂಭ ವನ್ನು ನೆರವೇರಿಸಲಾಯಿತು.
33 ವರ್ಷಗಳ ಕಾಲ ಸುದೀರ್ಘ ಸಾರ್ಥಕ ಸೇವೆ
ತಾಲೂಕಿನ ಕಡಬ ಗ್ರಾಮದ ಪ್ರಮುಖ ಬೀದಿಗಳಲ್ಲಿ ಬೆಳ್ಳಿ ರಥದಲ್ಲಿ ಶಿಕ್ಷಕರಾದ ಶಿವಣ್ಣ ನವರ ಕುಟುಂಬವನ್ನು ಮೆರವಣಿಗೆ ಮಾಡುವ ಶಾಲಾ ಮಕ್ಕಳಿಂದ ಹೂವಿನ ಸುರಿಮಳೆ ಗೈಯ್ಯುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಶಿಕ್ಷಣ ಕ್ಷೇತ್ರದಲ್ಲಿ 33 ವರ್ಷಗಳ ಕಾಲ ಸುದೀರ್ಘ ಸಾರ್ಥಕ ಸೇವೆ ಸಲ್ಲಿಸಿ ನಿವೃತ್ತಿ ಹೊಂದಿದ B.C Shivanna ಅವರನ್ನು ಅವರ ಸ್ವಗ್ರಾಮ ಬೆಲವತ್ತದಿಂದ ಕಡಬ ಶಾಲೆಯವರೆಗೆ ವಿದ್ಯಾರ್ಥಿಗಳು ಬೆಳ್ಳಿ ರಥದಲ್ಲಿ ಪೂರ್ಣಕುಂಭ ಸಮೇತ ವಾದ್ಯಗೋಷ್ಠಿಯೊಂದಿಗೆ ಸ್ಮರಣೀಯ ಮೆರವಣಿಗೆ ಮೂಲಕ ವೇದಿಕೆ ಕಾರ್ಯಕ್ರಮಕ್ಕೆ ಕರೆತಂದರು.

ಶಿಕ್ಷಕರ ಋಣ ತೀರಿಸುವ ಕೆಲಸ ಮಾಡಬೇಕು
ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿದ ನಿವೃತ ಶಿಕ್ಷಕ ಬಿ.ಸಿ.ಶಿವಣ್ಣ ಮಾತನಾಡಿ, ಯಾವುದೇ ಒಬ್ಬ ಶಿಕ್ಷಕ ಸಂಸ್ಕಾರವಂತನಾದರೆ, ಚಾರಿತ್ರ್ಯವಂತನಾದರೆ, ಶಿಕ್ಷಣದ ಜೊತೆಗೆ ಬದುಕಿನ ಶಿಕ್ಷಣವನ್ನು ಹೇಳಿ ಕೊಟ್ಟಾಗ ಶಿಕ್ಷಕನ ಜೀವನ ಸಾರ್ಥಕವಾಗುತ್ತದೆ. ಈ ನಿಟ್ಟಿನಲ್ಲಿ ನಾನು ಪ್ರಾಮಾಣಿಕವಾಗಿ ವಿದ್ಯಾರ್ಥಿಗಳಿಗೆ ಶಿಕ್ಷಣವನ್ನು ಬೋದಿಸಿದ್ದೇನೆ. ವಿದ್ಯಾರ್ಥಿಗಳು ಶ್ರದ್ಧೆಯಿಂದ ವ್ಯಾಸಂಗ ಮಾಡಿ ಬದುಕು ಕಟ್ಟಿಕೊಳ್ಳಬೇಕು. ತಂದೆ,ತಾಯಿ, ಶಿಕ್ಷಕರ ಋಣ ತೀರಿಸುವ ಕೆಲಸ ಮಾಡಬೇಕು ಎಂದರು.
ಇದನ್ನು ಓದಿ : ಬಜೆಟ್ ಬೆನ್ನಲ್ಲೇ ಜನ ಸಾಮಾನ್ಯರಿಗೆ ಬಿಗ್ ಶಾಕ್! ದಿನಸಿ ಸಾಮಾಗ್ರಿಗಳ ಬೆಲೆ ಏರಿಕೆ

ಈ ಸಂದರ್ಭದಲ್ಲಿ ಗ್ರಾಪಂ ಉಪಾಧ್ಯಕ್ಷೆ ಪೂರ್ಣಿಮಾ ಶಿವಕುಮಾರ್, ಉಪ ಪ್ರಾಂಶುಪಾಲ ಶ್ರೀನಿವಾಸ್ ರೆಡ್ಡಿ, ಎಸ್ ಡಿಎಂಸಿ ಅಧ್ಯಕ್ಷ ಶಿವಕುಮಾರ್, , ಶಿಕ್ಷಣ ಇಲಾಖೆ ನಿವೃತ್ತ ಉಪ ನಿರ್ದೇಶಕ ರಾಜ್ ಕುಮಾರ್ ಸೇರಿದಂತೆ ಶಿಕ್ಷಕರು, ಪೋಷಕರು, ಸಾವಿರಾರು ವಿದ್ಯಾರ್ಥಿಗಳು ಹಾಜರಿದ್ರು.

ಇದನ್ನು ನೋಡಿ : ತುಮಕೂರು ಪಾಲಿಕೆ ಸಿಬ್ಬಂದಿ ಬಗ್ಗೆ ಕಮಿಷನರ್ಗೆ ಎಷ್ಟು ಕೇರ್ ನೋಡಿ




