ʻಧುರಂಧರ್ 2ʼ ಅಬ್ಬರದ ನಡುವೆಯೂ ಅಗ್ರಸ್ಥಾನದಲ್ಲಿ ಸ್ಥಿರವಾಗಿ ನಿಂತ Toxic – ರಾಯನ ನೋಡಲು ಕಾಯ್ತಿದೆ ಇಂಡಿಯಾ!

‘KGF’ ಸರಣಿಯ ಮೂಲಕ ಇಡೀ ವಿಶ್ವವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದ `ರಾಕಿಂಗ್ ಸ್ಟಾರ್’ ಯಶ್, ಈಗ ಮತ್ತೊಮ್ಮೆ ಭಾರತೀಯ ಚಿತ್ರರಂಗದಲ್ಲಿ ಸಂಚಲನ ಮೂಡಿಸಿದ್ದಾರೆ. ಕೆಜಿಎಫ್ 2 ನಂತರ ಯಶ್ ಯಾವ ಸಿನಿಮಾ ಮಾಡಲಿದ್ದಾರೆ ಎಂಬ ಕುತೂಹಲಕ್ಕೆ ‘ಟಾಕ್ಸಿಕ್’ ಮೂಲಕ ಉತ್ತರ ಸಿಕ್ಕಿದ್ದು, ಈಗ ಈ ಚಿತ್ರ ಹೊಸ ದಾಖಲೆ ಬರೆದಿದೆ.

ನಂಬರ್ 1 ಸ್ಥಾನದಲ್ಲಿದೆ Toxic
ಜನಪ್ರಿಯ ವೆಬ್ಸೈಟ್ ಐಎಂಡಿಬಿ (IMDb) ಬಿಡುಗಡೆ ಮಾಡಿರುವ ‘ಮೋಸ್ಟ್ ಆಂಟಿಸಿಪೇಟೆಡ್’ ಸಿನಿಮಾ ಮತ್ತು ಶೋಗಳ ಪಟ್ಟಿಯಲ್ಲಿ ‘ಟಾಕ್ಸಿಕ್’ ನಂಬರ್ 1 ಸ್ಥಾನವನ್ನು ಪಡೆದುಕೊಂಡಿದೆ.ಬರೋಬ್ಬರಿ 28.6% ಮತಗಳನ್ನು ಗಳಿಸುವ ಮೂಲಕ ಇದು ಭಾರತದ ಅತ್ಯಂತ ನಿರೀಕ್ಷಿತ ಸಿನಿಮಾವಾಗಿ ಹೊರಹೊಮ್ಮಿದೆ.

ಯಾವಾಗ ರಿಲೀಸ್..?
ಗೀತು ಮೋಹನ್ ದಾಸ್ ನಿರ್ದೇಶನದ ‘ಟಾಕ್ಸಿಕ್’ ಸಿನಿಮಾ ಇದೇ ಮಾರ್ಚ್ 19ರಂದು ವಿಶ್ವಾದ್ಯಂತ ತೆರೆಗೆ ಅಪ್ಪಳಿಸಲು ಸಜ್ಜಾಗಿದೆ. ಈಗಾಗಲೇ ಚಿತ್ರತಂಡ ನಾಯಕಿಯರ ಪಾತ್ರಗಳು, ಫಸ್ಟ್ ಲುಕ್ಗಳು ಹಾಗೂ ಯಶ್ ಅವರ ಪಾತ್ರ ಪರಿಚಯವನ್ನು ಬಿಡುಗಡೆ ಮಾಡಿದ್ದು, ಈ ಅಪ್ಡೇಟ್ಗಳು ಅಭಿಮಾನಿಗಳ ನಿರೀಕ್ಷೆಯನ್ನು ಇನ್ನಷ್ಟು ಹೆಚ್ಚಿಸಿವೆ.

ಧುರಂಧರ್ 2 ಅಬ್ಬರದ ನಡುವೆಯೂ ‘ಟಾಕ್ಸಿಕ್’ ಹವಾ
ರಣವೀರ್ ಸಿಂಗ್ ಅಭಿನಯದ ‘ಧುರಂಧರ್’ ಸಿನಿಮಾ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಯಶಸ್ಸು ಕಂಡಿದ್ದು, ಅದರ ಎರಡನೇ ಭಾಗ ‘ಧುರಂಧರ್ 2’ ಕೂಡ ಮಾರ್ಚ್ 19ರಂದೇ ತೆರೆಗೆ ಬರಲಿದೆ. ಇದರಿಂದ ಬಾಕ್ಸ್ ಆಫೀಸ್ನಲ್ಲಿ ಎರಡೂ ಸಿನಿಮಾಗಳ ನಡುವೆ ಭಾರೀ ಪೈಪೋಟಿ ನಡೆಯಲಿದೆ ಎಂಬ ಚರ್ಚೆಗಳು ಜೋರಾಗಿವೆ.
ಆದರೆ ಐಎಂಡಿಬಿ ಪಟ್ಟಿಯ ಪ್ರಕಾರ, ಭಾರತದ ಮೊದಲ ಆಯ್ಕೆ ಯಶ್ ಅವರ ‘ಟಾಕ್ಸಿಕ್’ ಆಗಿದ್ದು, ‘ಧುರಂಧರ್ 2’ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟಿದೆ. ‘ಧುರಂಧರ್ 2’ ಸಿನಿಮಾಗೆ 19% ಮತಗಳುಲಭಿಸಿದ್ದು, ‘ಟಾಕ್ಸಿಕ್’ 28.6% ಮತಗಳೊಂದಿಗೆ ಅಗ್ರಸ್ಥಾನಕ್ಕೇರಿದೆ.
ಇದನ್ನು ಓದಿ : Davanagere|ಸ್ವಂತ ತಮ್ಮನ ತಲೆ ಒಡೆದು ಕೊಂದ ಪಾಪಿ ಅಣ್ಣ..!!

ಬಹುನಿರೀಕ್ಷಿತ ಟಾಪ್ 10 ಸಿನಿಮಾಗಳು ಯಾವುವು?
- ಟಾಕ್ಸಿಕ್ (Toxic) – 28.6%
- 20 ರೋಮಿಯೋ (20 Romeo) – 24.1%
- ಧುರಂಧರ್ 2 (Dhurandhar 2) – 19%
- ದ ಪ್ಯಾರಡೈಸ್ (The Paradise) – 7%
- ವಿತ್ ಲವ್ (With Love) – 4.3%
- ಪೆದ್ದಿ (Peddi) – 3.8%
- ವಧ್ 2 (Vadh 2) – 3.7%
- ಭಾಬಿಜಿ ಘರ್ ಪರ್ ಹೈ: ಫನ್ ಆನ್ ದ ರನ್ – 3.6%
- ತೂ ಯಾ ಮೈ (Tu Yaa Main) – 3.5%
- ಅನೋಮಿ (Anomie) – 2.5%
ಯಶ್ ಅಭಿನಯದ ‘ಟಾಕ್ಸಿಕ್’ ಸಿನಿಮಾ ಬಿಡುಗಡೆಗೂ ಮುನ್ನವೇ ದಾಖಲೆ ಬರೆಯುತ್ತಿದ್ದು, ಬಿಡುಗಡೆಯ ನಂತರ ಬಾಕ್ಸ್ ಆಫೀಸ್ನಲ್ಲಿ ಯಾವ ಮಟ್ಟದ ಅಬ್ಬರ ಸೃಷ್ಟಿಸಲಿದೆ ಎಂಬುದು ಕಾದು ನೋಡಬೇಕಿದೆ.

ಇದನ್ನು ನೋಡಿ : ತುಮಕೂರು ಪಾಲಿಕೆ ಸಿಬ್ಬಂದಿ ಬಗ್ಗೆ ಕಮಿಷನರ್ಗೆ ಎಷ್ಟು ಕೇರ್ ನೋಡಿ




