ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ FIR ದಾಖಲಾಗಿದೆ.

39 ವರ್ಷಗಳನ್ನು ಪೂರೈಸಿ 40ನೇ ವರ್ಷಕ್ಕೆ ಕಾಲಿಟಿರುವ ನಟ ರಾಕಿಂಗ್ ಸ್ಟಾರ್ ಯಶ್ ಜನ್ಮದಿನವನ್ನು ಅರ್ಥಪೂರ್ಣವಾಗಿ ಆಚರಿಸಲು ಅಭಿಮಾನಿಗಳು ಆಚರಿಸಿದ್ದಾರೆ. ಈ ಬಾರಿ Yash ಹುಟ್ಟುಹಬ್ಬದ ಸಂಭ್ರಮವು ಸಿಲಿಕಾನ್ ಸಿಟಿಯ ಲೈಫ್ ಲೈನ್ ‘ನಮ್ಮ ಮೆಟ್ರೋ’ ಹಳಿಗಳ ಮೇಲೂ ಸದ್ದು ಮಾಡಿದೆ.
ಇದನ್ನು ಓದಿ : Political News|ಕುಮಾರಸ್ವಾಮಿ ಕುರ್ಚಿ ಕನಸಿಗೆ ಕಾಂಗ್ರೆಸ್ ಕೊಳ್ಳಿ

ವೇಣು ಕ್ರಿಯೇಶನ್ ವಿರುದ್ಧ FIR
ನಟ ಯಶ್ ಬರ್ತಡೇಗೆ ರಸ್ತೆಯಲ್ಲಿ ಬ್ಯಾನರ್ ಹಾಕಿದ್ದಕ್ಕೆ ವೇಣು ಕ್ರಿಯೇಶನ್ ವಿರುದ್ಧ ಎಫ್ಐಆರ್ ದಾಖಲಾಗಿದೆ. ಜ.8ರಂದು ನಟ ಯಶ್ ಹುಟ್ಟುಹಬ್ಬದ ಹಿನ್ನೆಲೆ ಗಾಲ್ಫ್ ಕ್ಲಬ್ ಮುಂದೆ ಅವರ ಮನೆಯ ಎದುರು ಬ್ಯಾನರ್ ಹಾಕಲಾಗಿತ್ತು. ಹುಟ್ಟುಹಬ್ಬ ಶುಭಕೋರಿ ಹಾಕಲಾಗಿದ್ದ ಸಾಕಷ್ಟು ಫ್ಲೆಕ್ಸ್ಗಳನ್ನು ಹಾಕಿಸಲಾಗಿತ್ತು. ಈ ಹಿನ್ನೆಲೆ ಜಿಬಿಎ ಅಧಿಕಾರಿಗಳು ದೂರು ದಾಖಲಿಸಿದ್ದಾರೆ.

ಬ್ಯಾನರ್ ಹಾಕಿದ್ದಕ್ಕೆ ದೂರು ದಾಖಲು
ಇನ್ನು ಈ ಬಗ್ಗೆ ದೂರು ದಾಖಲಾಗಿದ್ದು, ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ವೇಣು ಕ್ರಿಯೇಶನ್ ವಿರುದ್ಧ FIR ದಾಖಲಿಸಲಾಗಿದೆ. FIRನಲ್ಲಿ ದೂರುಕರ್ತರು ವೇಣು ಕ್ರಿಯೇಶನ್ ಅವರನ್ನು ಆರೋಪಿತರಾಗಿ ಉಲ್ಲೇಖಿಸಿದ್ದಾರೆ.
ಇದನ್ನು ನೋಡಿ : ಜನಾರ್ಧನರೆಡ್ಡಿಯಿಂದ ಗಣಿ ಅತಿಕ್ರಮಣ ಸಾಬೀತು : ಸದ್ಯದಲ್ಲೇ ಸುಪ್ರೀಂಕೋರ್ಟ್ ನಿವೃತ್ತ ನ್ಯಾಯಮೂರ್ತಿಯಿಂದ ಸುಪ್ರೀಂಗೆೆ ವರದಿ ಸಲ್ಲಿಕೆ




