Political News : ಕುಮಾರಣ್ಣನ ಕುರ್ಚಿ ಕನಸಿಗೆ ಕಾಂಗ್ರೆಸ್ ಕೊಳ್ಳಿ: AI ವಿಡಿಯೊ ಮೂಲಕವೇ ಟಕ್ಕರ್!

ಇತ್ತೀಚಿಗೆ ಟಾಕ್ಸಿಕ್ ಸಿನಿಮಾದ ವಿಡಿಯೊ ಮಾದರಿಯಲ್ಲಿ ಎಚ್.ಡಿ ಕುಮಾರಸ್ವಾಮಿ ಮತ್ತೆ ರಾಜ್ಯ ರಾಜಕಾರನಕ್ಕೇ ಬಂದು ಕಬ್ಜಾ ಮಾಡಿಕೊಳ್ಳಲು ಸಜ್ಜಾಗಿರುವಂತೆ ತೋರಿಸಲಾದ AI ಆಧರಿತ ವಿಡಿಯೊ ಹರಿದಾಡಿತ್ತು.
ತಿರುಕನ ಕನಸು ಕಾಣುತ್ತಿರುವವರು ಯಾರು?
2028ರ ವಿಧಾನಸಭೆ ಚುನಾವಣೆಗೆ ಮುನ್ನ, ಹಿರಿಯ ನಾಯಕ ಎಚ್.ಡಿ ಕುಮಾರಸ್ವಾಮಿ ರಾಜ್ಯ ರಾಜಕಾರಣದಲ್ಲಿ ಮತ್ತೆ ಸಕ್ರಿಯರಾಗುತ್ತಾರೆ ಎಂದು ತೋರಿಸಲಾಯಿತು. ಇನ್ನು ಈ ವಿಡಿಯೋದಲ್ಲಿ ತಿರುಗೇಟು ನೀಡಿರುವ ಕಾಂಗ್ರೆಸ್, ತಿರುಕನ ಕನಸು ಕಾಣುತ್ತಿರುವವರು ಯಾರು? 140 ಕ್ಷೇತ್ರ ಗೆದ್ದವರೋ, 18 ಕ್ಷೇತ್ರ ಗೆದ್ದವರೋ? ಎಂದು ಬರೆದುಕೊಂಡಿರುವ AI ವಿಡಿಯೊವೊಂದನ್ನು ಹಂಚಿಕೊಂಡಿದೆ.
ಇದನ್ನು ಓದಿ : ಜೈಲಲ್ಲಿರುವ ಮಗನ ಭೇಟಿಗೆ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ದ ತಾಯಿ!
ಕುಮಾರಸ್ವಾಮಿಯವರೇ ಚುನಾವಣೆಗೆ ನಿಂತರೂ ಸೋಲುತ್ತಾರೆ – Political News
HDK ರಾಜ್ಯ ರಾಜಕಾರಣಕ್ಕೆ ಮತ್ತೆ ಬರುವುದು ಕನಸು, ನಿಜವಾಗಿರುವುದು ಬೇರೆಯೇ ಇದೆ ಎಂದು JDS ಸದಸ್ಯೆಯೊಬ್ಬರು ವೇದಿಕೆ ಮೇಲೆ ಹಂಚಿಕೊಂಡಿದೆ. ವಿಡಿಯೋದಲ್ಲಿ “ನಾನು ಈ ಪಕ್ಷವನ್ನು ಬಿಟ್ಟು ಹೋಗುತ್ತೇನೆ, ಕುಮಾರಸ್ವಾಮಿಯವರೇ ಚುನಾವಣೆಗೆ ನಿಂತರೂ ಸೋಲುತ್ತಾರೆ” ಎಂಬ ದೃಶ್ಯವೂ ಇದೆ. ಈ ಮೂಲಕ HDK ಮತ್ತೆ ರಾಜ್ಯರಾಜಕಾರಣಕ್ಕೆ ಬಂದರೆ ಸೋಲುತ್ತಾರೆ ಎಂದು ಕಾಂಗ್ರೆಸ್ ಟೀಕಿಸಿದೆ.
ಈ ಮೂಲಕ, ಕಾಂಗ್ರೆಸ್ ಪರ HDK–JDS ರಾಜಕೀಯದಲ್ಲಿ ಹಾಸ್ಯರೂಪದ ಟೀಕೆ ಮಾಡಲಾಗಿದೆ. AI ವಿಡಿಯೋ ಜನತೆಯಲ್ಲಿ ರಾಜಕೀಯ ಚರ್ಚೆ ಹುಟ್ಟಿಸಿರುವುದಕ್ಕೆ ಸಾಕ್ಷಿ.
ಇದನ್ನು ನೋಡಿ : ಮಣಿಕಟ್ಟು ಸೀಳಿಕೊಂಡು 11ನೇ ಮಹಡಿಯಿಂದ ಹಾರಿ ಪ್ರಾಣಬಿಟ್ಟ ಯುವಕ




