Bengaluru : ಜೈಲಿನಲ್ಲಿದ್ದ ಮಗನಿಗೆ ಕೊಡಲು ಖಾಸಗಿ ಭಾಗದಲ್ಲಿ ಮೊಬೈಲ್ ಕೊಂಡೊಯ್ದ ತಾಯಿ!

ಜೈಲಿನಲ್ಲಿದ್ದ ಮಗನಿಗೆ ಕೊಡಲು ಮೊಬೈಲ್ ಫೋನ್ ಅನ್ನು ತನ್ನ ಖಾಸಗಿ ಭಾಗದಲ್ಲಿ ಇಟ್ಟುಕೊಂಡು ಸಾಗಿಸುತ್ತಿದ್ದ ತಾಯಿ ತಪಾಸಣೆಯ ವೇಳೆ ಸಿಕ್ಕಿಬಿದ್ದ ಘಟನೆ Bengaluru ನಗರದಲ್ಲಿ ನಡೆದಿದೆ. ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿರುವ ಮಗನ ಭೇಟಿಗೆ ಹೋಗಿದ್ದ ವೇಳೆ ತಾಯಿ ತನ್ನ ಖಾಸಗಿ ಭಾಗದಲ್ಲಿ ಮೊಬೈಲ್ ಕೊಂಡೊಯ್ದು ಸಿಕ್ಕಿಬಿದ್ದಿದ್ದಾರೆ. ಇನ್ನು ಈ ಸಂಬಂಧ ಮಹಿಳೆ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ FIR ದಾಖಲಾಗಿದೆ.
ಖಾಸಗಿ ಭಾಗದಲ್ಲಿ ಮೊಬೈಲ್ ಕೊಂಡೊಯ್ದ ತಾಯಿ!
ಜೈಲಿನಲ್ಲಿದ್ದ ಮಗ ಭರತ್ನನ್ನು ನೋಡಲು ತಾಯಿ ಲಕ್ಷ್ಮೀ ನರಸಮ್ಮ ಎಂಬುವವರು ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ವಿಸಿಟರ್ ಪಾಸ್ ಪಡೆದುಕೊಂಡು ಹೋಗಿದ್ದ ಮಹಿಳೆಯನ್ನು ತಪಾಸಣೆ ಮಾಡಿದಾಗ ಖಾಸಗಿ ಭಾಗದಲ್ಲಿ ಮೊಬೈಲ್ ಇಟ್ಟುಕೊಂಡು ಹೋಗಿರುವುದು ಪತ್ತೆಯಾಗಿದೆ.
ಇದನ್ನು ಓದಿ : ತುಮಕೂರು ಮಹಾತ್ಮಾ ಗಾಂಧಿ ಇಂಡೋರ್ ಸ್ಟೇಡಿಯಂಗೆ ಪರಮೇಶ್ವರ್ ಹೆಸರು! BJP ಭಾರೀ ವಿರೋಧ

ವಿಭಾಗ–01ರಲ್ಲಿ ಘಟನೆ
ಈ ಸಂಬಂಧ ಕೇಂದ್ರ ಕಾರಾಗೃಹದ ಪ್ರಭಾರ ಅಧೀಕ್ಷಕ ಪರಮೇಶ್ ಎಚ್.ಎ. ಅವರು ಸಂಸ್ಥೆಯ ಸಿಬ್ಬಂದಿ ವಸಂತಮ್ಮ ಮುಖಾಂತರ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಜನವರಿ 02ರಂದು ಮಧ್ಯಾಹ್ನ ಜೈಲಿನ ಮುಖ್ಯ ದ್ವಾರದ ಹೊರಭಾಗದಲ್ಲಿರುವ ತಪಾಸಣಾ ವಿಭಾಗ–01ರಲ್ಲಿ ಈ ಘಟನೆ ನಡೆದಿದೆ.
ಕೈದಿ ಭರತ್ ವಿರುದ್ಧ ಕಾನೂನು ಕ್ರಮ
ಕಾರಾಗೃಹದ ನಿಯಮಗಳನ್ನು ಉಲ್ಲಂಘಿಸಿ, ಕೆಎಸ್ಐಎಸ್ಎಫ್ ಸಿಬ್ಬಂದಿಯವರ ಕಣ್ತಪ್ಪಿಸಿ ನಿಷೇಧಿತ ವಸ್ತುವನ್ನು ಜೈಲಿನೊಳಗೆ ಸಾಗಿಸಲು ಪ್ರಯತ್ನಿಸಿದ ಆರೋಪದ ಮೇಲೆ ಲಕ್ಷ್ಮೀ ನರಸಮ್ಮ ಹಾಗೂ ವಿಚಾರಣಾಧೀನ ಕೈದಿ ಭರತ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ ಎಂದು FIR ನಲ್ಲಿ ಉಲ್ಲೇಖಿಸಲಾಗಿದೆ.

ಈ ಸಂಬಂಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.
ಇದನ್ನು ನೋಡಿ : ಒಳಾಂಗಣ ಕ್ರೀಡಾಂಗಣಕ್ಕೆ ಪರಂ ಹೆಸರು -BJPಗರಿಂದ ಹೆಸರು ತೆರವಿಗೆ ಆಕ್ರೋಶ




