Tumkur ನಲ್ಲಿ ನೇಮ್ ಬೋರ್ಡ್ ಪಾಲಿಟಿಕ್ಸ್ ಹವಾ.!

Tumkur ನಲ್ಲಿ ನೇಮ್ ಬೋರ್ಡ್ ಪಾಲಿಟಿಕ್ಸ್ ಹವಾ ಜೋರಾಗಿದ್ದು, ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದ ಎದುರಿನ ಇಂಡೋರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಗೆ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಅವರ ಹೆಸರನ್ನ ನಾಮಕರಣ ಮಾಡಿರುವುದಕ್ಕೆ ಬಿಜೆಪಿ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಒಳಾಂಗಣ ಕ್ರೀಡಾಂಗಣದ ಮುಂದೆ BJP ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ರು.

Tumkur ನಲ್ಲಿ ಬಿಜೆಪಿ ಭಾರೀ ವಿರೋಧ
ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆ ವತಿಯಿಂದ ಡಾ.ಜಿ. ಪರಮೇಶ್ವರ್ ಇಂಡೋರ್ ಸ್ಪೋರ್ಟ್ಸ್ ಕಾಂಪ್ಲೆಕ್ಸ್ ಎಂಬ ನಾಮಫಲಕವನ್ನ ಅಳವಡಿಸಲಾಗಿದೆ.
ತಿಂಗಳ ಹಿಂದೆಯೇ ಸಂಬಂಧಪಟ್ಟ ಅಧಿಕಾರಿಗಳು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿದ್ರು, ಆದ್ರೆ ಸರ್ಕಾರದಿಂದ ಇನ್ನು ಅಧಿಕೃತ ಅನುಮತಿ ಬಂದಿಲ್ಲ,
ಇದಕ್ಕೂ ಮುಂಚೆಯೇ ಗೃಹಸಚಿವರ ಹೆಸರನ್ನು ನಾಮಕರಣ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಕಾರ್ಯಕರ್ತರು ಒಳಾಂಗಣ ಕ್ರೀಡಾಂಗಣದ ಮುಂದೆ ಪ್ರತಿಭಟನೆ ನಡೆಸಿದ್ದು, ನಾಮಫಲಕವನ್ನ ತಕ್ಷಣ ತೆರವು ಗೊಳಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ಇದನ್ನು ಓದಿ : Hassan|ಪತ್ನಿಯನ್ನ ಬರ್ಬರವಾಗಿ ಕೊಂದು ನದಿಗೆಸೆದ ಪತಿರಾಯ!

ಪರಮ್ ಹೆಸರನ್ನ ತೆಗೆದುಹಾಕುವಂತೆ ಒತ್ತಾಯ
ಇನ್ನು ಮುಂದಿನ ವಾರ ಸಿಎಂ ಸಿದ್ದರಾಮಯ್ಯ ಅವರು ತುಮಕೂರಿಗೆ ಆಗಮಿಸುತ್ತಿದ್ದು, ರಾಜ್ಯಮಟ್ಟದ ಕ್ರೀಡಾಕೂಠ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
ಆದ್ರೆ ಸಿಎಂ ಆಗಮನಕ್ಕೂ ಮುನ್ನವೇ ಕ್ರೀಡಾ ಇಲಾಖೆ ನಾಮಫಲಕ ಅಳವಡಿಸಿದ್ದಾರೆ. ಇದನ್ನು ಬಿಜೆಪಿ ತೀವ್ರ ಖಂಡಿಸಿದ್ದು, ಕೂಡಲೇ ಪರಮೇಶ್ವರ್ ಹೆಸರನ್ನ ತೆಗೆದುಹಾಕುವಂತೆ ಒತ್ತಾಯಿಸಿದ್ದಾರೆ.

ಇದನ್ನು ನೋಡಿ : TIPTUR | ರಸ್ತೆ ಬದಿ ವ್ಯಾಪಾರಿಗಳ ತೆರವು ಅಕ್ರಮ ಅಂಗಡಿಗಳ ಎತ್ತಂಗಡಿ




