IND vs PAk : ಪಾಕಿಸ್ತಾನ ಮಹಿಳಾ ತಂಡ ಅದೇ ದಿನ ಅಂದರೆ ಫೆಬ್ರವರಿ 15ಕ್ಕೆ ಬ್ಯಾಂಕಾಕ್ನಲ್ಲಿ ನಿಗದಿಯಾಗಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ (Rising Stars Asia Cup) ಟೂರ್ನಿಯ ಪಂದ್ಯದಲ್ಲಿ ಭಾರತದ ವಿರುದ್ಧ ಆಡಲಿದೆ.

IND vs PAK : 2026ರ ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ವಿರುದ್ಧ ನಡೆಯಬೇಕಿದ್ದ ಲೀಗ್ ಹಂತದ ಪಂದ್ಯವನ್ನು ಪಾಕಿಸ್ತಾನ ಸರ್ಕಾರ ಬಹಿಷ್ಕರಿಸುವುದಾಗಿ ಘೋಷಿಸಿರುವುದರಿಂದ ಭಾರತ–ಪಾಕಿಸ್ತಾನ ನಡುವಿನ ಕ್ರಿಕೆಟ್ ಸಂಬಂಧ ಕೆಳಮಟ್ಟಕ್ಕೆ ಇಳಿದಿವೆ.
ಟಿ20 ವಿಶ್ವಕಪ್ಗೂ ರಾಜಕೀಯದ ನೆರಳು
ಫೆ. 7ರಿಂದ ಆರಂಭವಾಗಲಿರುವ ಪುರುಷರ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನ ತಂಡದ ಭಾಗವಹಿಸುವಿಕೆ ಕುರಿತು ಶೆಹಬಾಜ್ ಷರೀಫ್ ನೇತೃತ್ವದ ಪಾಕಿಸ್ತಾನ ಸರ್ಕಾರ ಈ ಆಘಾತಕಾರಿ ನಿರ್ಧಾರವನ್ನು ಪ್ರಕಟಿಸಿದೆ.
ಫೆಬ್ರವರಿ 15ರಂದು ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ಭಾರತ ವಿರುದ್ಧ ನಡೆಯಬೇಕಿದ್ದ ಗುಂಪು ಪಂದ್ಯ ಸೇರಿದಂತೆ ಲೀಗ್ ಹಂತದಲ್ಲಿ ಭಾರತ ತಂಡದ ವಿರುದ್ಧ ಆಡದಿರಲು ಪಾಕಿಸ್ತಾನ ನಿರ್ಧರಿಸಿದೆ.
ಭಾರತ–ಪಾಕ್ ವಿಶ್ವಕಪ್ ಪಂದ್ಯ ಗೊಂದಲ
ಪಾಕಿಸ್ತಾನ ತನ್ನ ಎಲ್ಲಾ ಪಂದ್ಯಗಳನ್ನು ಶ್ರೀಲಂಕಾದಲ್ಲೇ ಆಡಲು ಸಜ್ಜಾಗಿದ್ದರೂ, ಭಾರತ ವಿರುದ್ಧದ ಪಂದ್ಯಕ್ಕೆ ಮಾತ್ರ ಸರ್ಕಾರ ಸ್ಪಷ್ಟ ವಿರೋಧ ವ್ಯಕ್ತಪಡಿಸಿದೆ. ಈ ನಿರ್ಧಾರದಿಂದ ಅಂತರರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.

ಇದರ ನಡುವೆಯೇ ಪಾಕಿಸ್ತಾನ ಮಹಿಳಾ ತಂಡ ಫೆಬ್ರವರಿ 15ರಂದು ಥಾಯ್ಲೆಂಡ್ನ ಬ್ಯಾಂಕಾಕ್ನಲ್ಲಿ ನಡೆಯಲಿರುವ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಮಹಿಳಾ ತಂಡದ ವಿರುದ್ಧ ಸೆಣಸಲಿದೆ.
ಇದನ್ನೂ ಓದಿ : 2026ರ ICC T20 ವಿಶ್ವಕಪ್ ಟೂರ್ನಿಗೆ ಕ್ಷಣಗಣನೆ.!
ಈ ಪಂದ್ಯ ಕುರಿತು ಇದುವರೆಗೆ ಪಾಕಿಸ್ತಾನ ಸರ್ಕಾರ ಅಥವಾ ಪಿಸಿಬಿ (ಪಾಕಿಸ್ತಾನ ಕ್ರಿಕೆಟ್ ಬೋರ್ಡ್)ಯಿಂದ ಯಾವುದೇ ಸೂಚನೆ ಬಂದಿಲ್ಲ ಎಂದು ಮೂಲಗಳು ತಿಳಿಸಿವೆ.
ಫೆ. 15ಕ್ಕೆ ಭಾರತ-ಪಾಕ್ ಮಹಿಳಾ ಕ್ರಿಕೆಟ್ ಪಂದ್ಯ
ಫೆ. 13ರಿಂದ 22ರವರೆಗೆ ಬ್ಯಾಂಕಾಕ್ನಲ್ಲಿ ನಡೆಯಲಿರುವ ಮಹಿಳೆಯರ ರೈಸಿಂಗ್ ಸ್ಟಾರ್ಸ್ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಭಾರತ ಎ ತಂಡ ತನ್ನ ಅಭಿಯಾನವನ್ನು ಮೊದಲ ದಿನ ಯುಎಇ ವಿರುದ್ಧ ಆರಂಭಿಸಲಿದೆ.
ಫೆಬ್ರವರಿ 15ರಂದು ಭಾರತ ಎ ಮತ್ತು ಪಾಕಿಸ್ತಾನ ಎ ತಂಡಗಳು ಮುಖಾಮುಖಿಯಾಗಲಿವೆ. ಟೂರ್ನಿಯಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಎ ಗುಂಪಿನಲ್ಲಿ ಭಾರತ ಎ, ಪಾಕಿಸ್ತಾನ ಎ, ಯುಎಇ ಹಾಗೂ ನೇಪಾಳ ಎ ತಂಡಗಳಿವೆ. ಬಿ ಗುಂಪಿನಲ್ಲಿ ಬಾಂಗ್ಲಾದೇಶ ಎ, ಶ್ರೀಲಂಕಾ ಎ, ಮಲೇಷ್ಯಾ ಮತ್ತು ಆತಿಥೇಯ ಥಾಯ್ಲೆಂಡ್ ತಂಡಗಳು ಸೇರಿವೆ. ಭಾರತ ಎ ತಂಡ ಫೆಬ್ರವರಿ 17ರಂದು ನೇಪಾಳ ವಿರುದ್ಧ ತನ್ನ ಮೂರನೇ ಹಾಗೂ ಅಂತಿಮ ಲೀಗ್ ಪಂದ್ಯವನ್ನು ಆಡಲಿದೆ.

ಎರಡೂ ಗುಂಪಿನ ಅಗ್ರ ಎರಡು ತಂಡಗಳು ನಾಕೌಟ್ ಹಂತಕ್ಕೇರಲಿದ್ದು, ಫೆಬ್ರವರಿ 20ರಂದು ಸೆಮಿಫೈನಲ್ ಪಂದ್ಯಗಳು ನಡೆಯಲಿವೆ. ಟೂರ್ನಿಯ ಫೈನಲ್ ಪಂದ್ಯ ಫೆಬ್ರವರಿ 22ರಂದು ನಿಗದಿಯಾಗಿದೆ.
ಒಟ್ಟಿನಲ್ಲಿ ಭಾರತ–ಪಾಕಿಸ್ತಾನ ನಡುವಿನ ರಾಜಕೀಯ ಉದ್ವಿಗ್ನತೆ ಮತ್ತೊಮ್ಮೆ ಕ್ರಿಕೆಟ್ ಮೇಲೂ ಪರಿಣಾಮ ಬೀರುತ್ತಿರುವುದು ಈ ಬೆಳವಣಿಗೆಯಿಂದ ಸ್ಪಷ್ಟವಾಗಿದೆ.
MUST WATCH : ತುಮಕೂರು ಪಾಲಿಕೆ ಕಮಿಷನರ್ನಿಂದ ದಿಟ್ಟ ಹೆಜ್ಜೆ- ವಾರ್ಡ್ ವಿಸಿಟ್ ಹಾಕಿ ಸಮಸ್ಯೆ ಆಲಿಸಿದ್ರು




