Hassan : Hassanaದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಅವರ ಮನೆ ಸಮೀಪದ ನಿವೇಶನ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಮತ್ತೆ ತೀವ್ರಗೊಂಡಿದೆ.

Hassan : ನಟ ಯಶ್ ಅವರ ತಾಯಿ ಪುಷ್ಪಾ ಮತ್ತು ದೇವರಾಜ್ ನಡುವಿನ ಜಾಗದ ವಿವಾದ ದಿನಕ್ಕೊಂದು ತಿರುವು ಪಡೆದುಕೊಳ್ತಿದ್ದು, ಈ ಪ್ರಕರಣ ಇದೀಗ ಹೊಸ ತಿರುವು ಪಡೆದುಕೊಂಡಿದೆ.
ಎರಡೆರಡು ಖಾತೆ–ದಾಖಲೆಗಳಿಂದಲೇ ಗೊಂದಲ?
ಒಂದೇ ನಿವೇಶನಕ್ಕೆ ಎರಡೆರಡು ಜನರಿಗೆ ಖಾತೆ, ಸರ್ವೆ ನಂಬರ್ ಹಾಗೂ ಇ-ಸ್ವತ್ತು ದಾಖಲೆಗಳನ್ನು ನೀಡಿರುವ ಅಧಿಕಾರಿಗಳ ಗೋಲ್ಮಾಲ್ನಿಂದಲೇ ಈ ವಿವಾದ ಸೃಷ್ಟಿಯಾಯಿತೇ ಎಂಬ ಪ್ರಶ್ನೆ ಇದೀಗ ಎದ್ದಿದೆ.
1982ರಿಂದಲೂ ಇರುವ ಸಂಪೂರ್ಣ ದಾಖಲೆಗಳನ್ನು ಮಾಧ್ಯಮಗಳ ಮುಂದೆ ಪ್ರದರ್ಶಿಸಿದ್ದಾರೆ. ನಮ್ಮ ವಕೀಲರು ಎಲ್ಲ ದಾಖಲೆಗಳನ್ನು ಪರಿಶೀಲಿಸಿ ಜಾಗವನ್ನು ಖರೀದಿ ಮಾಡಿದ್ದಾರೆ. 1982ರಿಂದ ಸುಮಾರು 44 ವರ್ಷಗಳ ಕಾಲ ಕಾಣೆಯಾಗಿದ್ದ ಲಕ್ಷ್ಮಮ್ಮ ಇದೀಗ ದಿಢೀರ್ ಆಗಿ ಹೇಗೆ ಪ್ರತ್ಯಕ್ಷರಾದ್ರಾ ಎಂದು ಪುಷ್ಪಾ ಪ್ರಶ್ನಿಸಿದ್ದಾರೆ.

ಯಶ್ ತಾಯಿ ಜಾಗದ ವಿವಾದ ಗೊಂದಲದ ಗೂಡು
ಈ ನಿವೇಶನವನ್ನು 1982ರಲ್ಲಿ ಕೆ.ಪಿ. ಶ್ರೀಮತಿ ಅವರು ಖರೀದಿಸಿದ್ದು, ಸುಮಾರು 23 ವರ್ಷಗಳ ಕಾಲ ಅದರ ಮಾಲೀಕತ್ವ ಹೊಂದಿದ್ದರು. ನಂತರ 2007ರಲ್ಲಿ ಗಿರೀಶ್ ಕೋಂ ಮಹಲಿಂಗಪ್ಪ ಅವರು ಜಾಗವನ್ನು ಖರೀದಿ ಮಾಡಿಕೊಂಡು 2020ರವರೆಗೆ, ಅಂದರೆ 13 ವರ್ಷಗಳ ಕಾಲ ಮಾಲೀಕರಾಗಿದ್ದರು.
ಬಳಿಕ 2020ರಿಂದ ಕಳೆದ ಆರು ವರ್ಷಗಳಿಂದ ಈ ಜಾಗ ತಮ್ಮ ಸ್ವಾಧೀನದಲ್ಲಿದೆ ಎಂದು ಪುಷ್ಪಾ ಸ್ಪಷ್ಟಪಡಿಸಿದ್ದಾರೆ. ಇಷ್ಟು ವರ್ಷ ಯಾವುದೇ ವ್ಯಾಜ್ಯ ಇಲ್ಲದಿದ್ದದ್ದು ಈಗ ಏಕೆ ಉದ್ಭವಿಸಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : Hassan ದಲ್ಲಿ ಕೆಡವಿದ್ದ ಕಾಂಪೌಂಡ್ ಕಟ್ಟಿಸಲು ಮುಂದಾದ ಯಶ್ ತಾಯಿ..!
ಗ್ರಾಮ ಪಂಚಾಯತ್ ದಾಖಲೆಗಳ ಮೇಲೆ ಅನುಮಾನ
ಉಪ ನೋಂದಣಾಧಿಕಾರಿ ಕಚೇರಿಯಲ್ಲೇ ಮೋಸ ನಡೆದಿದ್ಯಾ ಅಥವಾ ಗ್ರಾಮ ಪಂಚಾಯತ್ನಲ್ಲಿ ಎರಡೆರಡು ದಾಖಲೆಗಳನ್ನು ಸೃಷ್ಟಿಸಲಾಗಿದೆಯೇ ಎಂಬ ಅನುಮಾನ ಮೂಡಿದೆ ಅಂತ ಪುಷ್ಪಾ ಹೇಳಿದ್ದಾರೆ.

ಇನ್ನೊಂದೆಡೆ ದೇವರಾಜ್ ಕೂಡ ಜಾಗದ ದಾಖಲೆಗಳನ್ನು ಪ್ರದರ್ಶಿಸುತ್ತಿದ್ದು, 2020ರಲ್ಲಿ ಲಕ್ಷ್ಮಮ್ಮ ಅವರಿಂದ ಜಿಪಿಎ (General Power of Attorney) ಪಡೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.
ಈ ಪರಸ್ಪರ ವಿರುದ್ಧದ ದಾಖಲೆಗಳಿಂದ ಪ್ರಕರಣ ಇದೀಗ ಗೊಂದಲದ ಗೂಡಾಗಿ ಮಾರ್ಪಟ್ಟಿದ್ದು, ನಿವೇಶನ ಮಾಲೀಕತ್ವದ ವಿಚಾರ ಮತ್ತೆ ಬೀದಿ ರಂಪಕ್ಕೆ ಕಾರಣವಾಗಿದ್ದು, ಮೂಲ ಮಾಲೀಕರು ಯಾರು ಎನ್ನುವುದು ಯಕ್ಷ ಪ್ರಶ್ನೆಯಾಗಿದೆ.
MUST WATCH : ROCKING STAR YASH MOTHER ರಂಪಾಟ – ಸೈಟ್ ಗಾಗಿ ಬೀದಿಗಿಳಿದು ಫುಲ್ ಫೈಟ್




