ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಮನೆ ಸಮೀಪದ ನಿವೇಶನ ವಿಚಾರದಲ್ಲಿ Hassan ದಲ್ಲಿ ಮತ್ತೆ ಜಟಾಪಟಿ ನಡೆದಿದೆ.

Hassan ದಲ್ಲಿ ರಾಕಿಂಗ್ ಸ್ಟಾರ್ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಅವರ ಮನೆ ಸಮೀಪದ ನಿವೇಶನ ಮಾಲೀಕತ್ವಕ್ಕೆ ಸಂಬಂಧಿಸಿದ ವಿವಾದ ಮತ್ತೆ ತೀವ್ರಗೊಂಡಿದೆ.
ಇತ್ತೀಚೆಗೆ ಕೆಡವಲ್ಪಟ್ಟಿದ್ದ ಕಾಂಪೌಂಡ್ ಅನ್ನು ಪುಷ್ಪಾ ಅವರು ಮತ್ತೆ ಕಟ್ಟಿಸಲು ಮುಂದಾದ ವೇಳೆ, ಜಾಗದ ಮಾಲೀಕರೊಂದಿಗೆ ತೀವ್ರ ವಾಗ್ವಾದ ನಡೆದಿರುವ ಘಟನೆ ವರದಿಯಾಗಿದೆ.
ಕಾಂಪೌಂಡ್ ಪುನರ್ ನಿರ್ಮಾಣಕ್ಕೆ ಮುಂದಾಗುತ್ತಿದ್ದಂತೆ, ಜಾಗದ ಮೂಲ ಮಾಲೀಕ ದೇವರಾಜು ಅವರು ಸ್ಥಳಕ್ಕೆ ಆಗಮಿಸಿ ದಾಖಲೆಗಳನ್ನು ನೀಡುವಂತೆ ಪ್ರಶ್ನಿಸಿದ್ದಾರೆ. ಈ ವೇಳೆ, ಕೋರ್ಟ್ ಆದೇಶದ ಪ್ರಕಾರವೇ ನಾವು ಕ್ರಮ ಕೈಗೊಂಡಿದ್ದೇವೆ ಎಂದು ದೇವರಾಜು ಅವರು ಸ್ಪಷ್ಟಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಪುಷ್ಪಾ ಅರುಣ್ಕುಮಾರ್ ಅವರು, “ಜಡ್ಜ್ನ್ನು ಇಲ್ಲಿಗೇ ಕರೆಸಿ, ಸ್ಥಳದಲ್ಲೇ ತೀರ್ಮಾನ ಮಾಡಲಿ. ನೀವು ಯಶ್ ಮನೆಯ ಮುಂದೆ ಕ್ಯಾಮೆರಾದಲ್ಲಿ ಬಿಲ್ಡಪ್ ತೆಗೆದುಕೊಳ್ಳಲು ಬಂದಿದ್ದೀರಾ?” ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ : ಕೇಂದ್ರ ಬಜೆಟ್ ದಿನವೇ ವಾಣಿಜ್ಯ ಬಳಕೆಯ LPG ಸಿಲಿಂಡರ್ ಬೆಲೆ ಹೆಚ್ಚಳ

ಈ ಗೊಂದಲದ ನಡುವೆ ಬಡಾವಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು. ಪೊಲೀಸ್ ಅಧಿಕಾರಿಗಳ ಮುಂದೆಯೂ ಪುಷ್ಪಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದು,
“ನೀವು ದೇವರಾಜು ಅವರನ್ನು ಏಕೆ ಬಂಧಿಸಿಲ್ಲ? ಜೆಸಿಬಿಯನ್ನು ಏಕೆ ಸೀಜ್ ಮಾಡಿಲ್ಲ?” ಎಂದು ಪ್ರಶ್ನಿಸಿದ್ದಾರೆ. ಜೊತೆಗೆ, ಸ್ಥಳದಲ್ಲಿ ಮಾಧ್ಯಮದವರು ವಿಡಿಯೋ ಚಿತ್ರೀಕರಣ ಮಾಡದಂತೆ ಅವರು ತಾಕೀತು ಮಾಡಿದ ಘಟನೆ ಕೂಡ ನಡೆದಿದೆ.
ಏನಿದು ಪ್ರಕರಣ?
ಈ ವಿವಾದದ ಹಿನ್ನೆಲೆ ನೋಡಿದರೆ, ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪದ ಪ್ರಕರಣದಲ್ಲಿ ನಟ ಯಶ್ ಅವರ ತಾಯಿ ಪುಷ್ಪಾ ಅರುಣ್ಕುಮಾರ್ ಅವರಿಗೆ ಈ ಹಿಂದೆ ಕೋರ್ಟ್ ಶಾಕ್ ನೀಡಿತ್ತು.
ಬೇರೆಯವರ ಜಾಗದಲ್ಲಿ ಕಾಂಪೌಂಡ್ ನಿರ್ಮಿಸಿದ್ದಾರೆ ಎಂಬ ಆರೋಪದ ಮೇರೆಗೆ, ಕೋರ್ಟ್ ಅನುಮತಿಯೊಂದಿಗೆ ಆ ಕಾಂಪೌಂಡ್ ಅನ್ನು ತೆರವುಗೊಳಿಸಲಾಗಿತ್ತು.
ಹಾಸನ ನಗರದ ವಿದ್ಯಾನಗರದಲ್ಲಿ ಪುಷ್ಪಾ ಅವರ ಮನೆ ಇರುವುದಾಗಿ ತಿಳಿದುಬಂದಿದೆ. ಇದೇ ಪ್ರದೇಶದಲ್ಲಿ ನಿರ್ಮಿಸಿದ್ದ ಕಾಂಪೌಂಡ್ ಅನ್ನು ಮೂಲ ಜಾಗದ ಮಾಲೀಕರು ಜೆಸಿಬಿ ಮೂಲಕ ಧ್ವಂಸಗೊಳಿಸಿದ್ದರು.
ಸುಮಾರು 1,500 ಚದರ ಅಡಿ ಜಾಗವನ್ನು ಒತ್ತುವರಿ ಮಾಡಿದ್ದಾರೆ ಎಂಬ ಆರೋಪದ ಹಿನ್ನೆಲೆ, ಕೋರ್ಟ್ ಆದೇಶದಂತೆ ಕಾಂಪೌಂಡ್ ನೆಲಸಮಗೊಳಿಸಲಾಗಿತ್ತು.
ಇದನ್ನು ನೋಡಿ : BREAKING|ವಿಜಯನಗರದಲ್ಲಿ `ತ್ರಿಬಲ್ ಮರ್ಡರ್’ ಕೇಸ್ ಗೆ ಬಿಗ್ ಟ್ವಿಸ್ಟ್.!




